ಉಡುಪಿ: ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದಲ್ಲಿ ನಡೆದ ಇಬ್ಬರು ಯುವಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸದಸ್ಯನೋರ್ವನನ್ನು ಬಂಧಿಸಲಾಗಿದೆ.
ರಾಘವೇಂದ್ರ ಕಾಂಚನ್ (38) ಬಂಧಿತ ಜಿ.ಪಂ ಸದಸ್ಯನಾಗಿದ್ದು, ಈತ ಬಿಜೆಪಿಯಿಂದ ಆಯ್ಕೆಯಾದವನಾಗಿದ್ದಾನೆ. ಈತನೇ ಭರತ್ ಮತ್ತು ಯತೀಶ್ ಕೊಲೆಗೆ ಪ್ರಮುಖ ಸೂತ್ರಧಾರಿಯಾಗಿದ್ದು, ಈ ಮೂಲಕ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.
ಈ ಹಿಂದೆ ರೌಡಿಶೀಟರ್ ಹರೀಶ್ ರೆಡ್ಡಿ, ರವೀಂದ್ರ ಪೂಜಾರಿ, ಮಹೇಶ್ ಗಾಣಿಗ ಈ ಮೂವರು ಆರೋಪಿಗಳನ್ನು ಶಿವಮೊಗ್ಗದ ಹೊಸನಗರದಿಂದ ಪೊಲೀಸರು ವಶಕ್ಕೆ ಪಡೆದಿದ್ದರು. ಇನ್ನು ರಾಜಶೇಖರ ರೆಡ್ಡಿ ಹಾಗೂ ರವಿಯನ್ನು ಕೊಡಗಿನಲ್ಲಿ ಬಂಧಿಸಲಾಗಿತ್ತು.

ಜನವರಿ 27 ರಂದು ಗಲಾಟೆಯ ರಾಜಿಗೆ ಹೋಗಿದ್ದಾಗ ಆರೋಪಿಗಳು ಇಬ್ಬರು ಯುವಕರನ್ನು ಕೊಲೆ ಮಾಡಿದ್ದರು. ರಾಘವೇಂದ್ರ ಕಾಂಚನ್‍ಗೂ ಭರತ್‍ಗೂ ವೈಷಮ್ಯವಿತ್ತು. ಇದರಿಂದ ಭರತ್ ಬೆಳವಣಿಗೆಯನ್ನು ರಾಘವೇಂದ್ರ ಕಾಂಚನ್ ಸಹಿಸಿರಲಿಲ್ಲ. ಹೀಗಾಗಿ ಸಂಚು ನಡೆಸಿ ಕೊಲೆ ಮಾಡಿರುವ ಸಾಧ್ಯತೆ ಇದೆ.
ಬಂಧಿತರಲ್ಲಿ ಮೂವರು ರೌಡಿಶೀಟರ್ ಗಳಾಗಿದ್ದಾರೆ. ಪ್ರಕರಣ ಸಂಬಂಧ ಇನ್ನಷ್ಟು ಆರೋಪಿಗಳ ಬಂಧನವಾಗುವ ಸಾಧ್ಯತೆಗಳಿವೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply