ಅವಾಜ್ ಹಾಕೋಕೆ ನಾನೇನು ಅನಂತಕುಮಾರ್ ಹೆಗ್ಡೆನಾ..? ಶಾಸಕ ಜಮೀರ್ ಅಹ್ಮದ್

ಬೆಂಗಳೂರು: ಅವಾಜ್ ಹಾಕೋಕೆ ನಾನೇನು ಅನಂತ್ ಕುಮಾರ್ ಹೆಗ್ಡೆನಾ..? ನಾನು ತುಂಬಾ ಚಿಕ್ಕವನು, ಅವಾಜ್ ಹಾಕೋದನ್ನು ಅನಂತ್‍ಕುಮಾರ್ ಅವರಿಗೆ ಬಿಟ್ಟಿದ್ದೇವೆ ಎಂದು ವ್ಯಂಗ್ಯ ಮಾಡಿದರು.

ಫೇಸ್ ಬುಕ್, ವಾಟ್ಸಪ್ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಜಮೀರ್ ಅಹ್ಮದ್‍ರ ವಿವಾದಾತ್ಮಕ ಹೇಳಿಕೆಯೊಂದು ವೈರಲ್ ಆಗಿದ್ದರ ಬಗ್ಗೆ ಸ್ಪಷ್ಟನೆ ನೀಡುವಾಗ ಕೇಂದ್ರ ಸಚಿವರಿಗೆ ಟಾಂಗ್ ನೀಡಿದ್ದಾರೆ. ನಾನು ಯಾವುದೇ ರೀತಿಯಲ್ಲಿ ಯಾರಿಗೂ ಅವಾಜ್ ಹಾಕಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋ ಟಿಪ್ಪು ಜಯತಿ ಆಚರಣೆಯ ಒಂದು ತಿಂಗಳು ಮೊದಲ ನೀಡಿದ್ದು, ಹಾಗಾಗಿ ಅಷ್ಟಾಗಿ ನನಗೆ ನೆನಪಿಲ್ಲ ಅಂತಾ ಅಂದ್ರು.

ಟಿಪ್ಪು ಜಯಂತಿ ಆಚರಣೆ ಸಮೀಪವಿದ್ದಾಗ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದರು. ಈ ಮೊದಲು ಬಿ.ಎಸ್.ಯಡಿಯೂರಪ್ಪ ಅವರು ಕೆಜೆಪಿ ಪಕ್ಷದಲ್ಲಿದ್ದಾಗ ನಾಲ್ಕೈದು ಸ್ಥಳಗಳಲ್ಲಿ ಟಿಪ್ಪು ಜಯಂತಿ ಆಚರಣೆಯಲ್ಲಿ ಭಾಗಿಯಾಗಿದ್ದರು. ಜಗದೀಶ್ ಶೆಟ್ಟರ್, ಆರ್.ಅಶೋಕ್ ಮತ್ತು ಬಿಎಸ್‍ವೈ ಟಿಪ್ಪು ಜಯಂತಿಯಲ್ಲಿ ಭಾಗಿಯಾಗಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಬಿಜೆಪಿ ರಾಜಕೀಯ ಕಾರಣಗಳಿಂದ ಟಿಪ್ಪು ಜಯಂತಿಯನ್ನು ವಿರೋಧಿಸುತ್ತಿದೆ. ಆ ಸಂದರ್ಭದಲ್ಲಿ ನಾನು ಹೇಳಿದ ಮಾತುಗಳು ಇಂದು ವೈರಲ್ ಆಗಿವೆ ಅಂತಾ ಹೇಳಿದರು.

https://www.youtube.com/watch?v=Ec0gfbLSDmE

Comments

Leave a Reply

Your email address will not be published. Required fields are marked *