ಡಿಕೆಶಿ ವರ್ತನೆ ಬಗ್ಗೆ ಸುರ್ಜೆವಾಲಾಗೆ ದೂರು ನೀಡಿದ ಜಮೀರ್

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಕಾರ್ಯವೈಖರಿ ಮತ್ತು ಮುಸ್ಲಿಮರ ವಿಚಾರದಲ್ಲಿ ಪಕ್ಷದ ನಿಲುವಿನಿಂದ ಬೇಸರಗೊಂಡಿರುವ ಮಾಜಿ ಮಂತ್ರಿ ಜಮೀರ್ ಅಹಮದ್‍ ಖಾನ್‍ರನ್ನು ಮನವೊಲಿಸುವ ಯತ್ನ ನಡೆದಿದೆ.

ಇಂದು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೆವಾಲಾ, ಜಮೀರನ್ನು ಕರೆಯಿಸಿ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ವೇಳೆ, ಡಿಕೆಶಿ ವರ್ತನೆ ಬಗ್ಗೆ ಸುರ್ಜೆವಾಲಾಗೆ ಜಮೀರ್ ದೂರು ನೀಡಿದ್ದಾರೆ. ಮುಸ್ಲಿಮರ ವಿಚಾರವಾಗಿ ರಾಜ್ಯದಲ್ಲಿ ನಡಿಯುತ್ತಿರುವ ಬೆಳವಣಿಗೆಗಳ ಬಗ್ಗೆ ಪಕ್ಷದ ಅಧ್ಯಕ್ಷರಿಗೆ ಒಂದು ಸ್ಪಷ್ಟ, ನಿರ್ದಿಷ್ಟ ನಿಲುವು ಇಲ್ಲ. ಇದರ ಪರಿಣಾಮ ಇಡೀ ಸಮುದಾಯ ನಮ್ಮ ಪಕ್ಷವನ್ನು ಅನುಮಾನದಿಂದ ನೋಡುತ್ತಿದೆ. ಇದನ್ನು ಸರಿ ಮಾಡಿ ಎಂದು ಜಮೀರ್ ಕೋರಿದ್ದಾರೆ ಎಂದು ಮೂಲಗಳಿಂದ ವರದಿಯಾಗಿದೆ. ಇದನ್ನೂ ಓದಿ: ಮೋದಿ ಫೋಟೋವನ್ನು ತೆಗೆಸಿದ ಪಂಚಾಯತ್‌ ಅಧ್ಯಕ್ಷ – ಡಿಎಂಕೆ ವಿರುದ್ಧ ಬಿಜೆಪಿ ಕಿಡಿ

ಜಮೀರ್ ತಮ್ಮ ಜೊತೆಗೆ ಅಖಂಡ ಶ್ರೀನಿವಾಸಮೂರ್ತಿಯನ್ನು ಕರೆದೊಯ್ದು ದೂರು ಕೊಡಿಸಿದ್ದಾರೆ. ನನ್ನ ಮನೆಗೆ ಬೆಂಕಿ ಹಾಕಿದವರನ್ನು ಜೊತೆಯಲ್ಲಿ ಇಟ್ಟುಕೊಂಡು ಡಿಕೆಶಿ ಓಡಾಡುತ್ತಿದ್ದಾರೆ. ರಾಹುಲ್ ಗಾಂಧಿ ಸಮ್ಮುಖದಲ್ಲಿ ವೇದಿಕೆಗೆ ಕರೆದು ಶಾಲು ಹಾಕಿಸ್ತಾರೆ. ಹೀಗಾದರೆ ಹೇಗೆ? ಎಂದು ಸುರ್ಜೆವಾಲಾ ಬಳಿ ಅಖಂಡ ಶ್ರೀನಿವಾಸಮೂರ್ತಿ ಅಸಮಾಧಾನ ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ಮತ್ತೆ ಬಿರುಗಾಳಿ ಎಬ್ಬಿಸಿದ ಲವ್‌ ಮ್ಯಾರೇಜ್‌ ಕೇಸ್‌

ಮುಸ್ಲಿಂ ಸಮುದಾಯದ ವಿಷಯಗಳ ಬಗ್ಗೆ ಕಾಂಗ್ರೆಸ್ ನಿಲುವು ಪ್ರಶ್ನಿಸಿರುವ ಜಮೀರ್, ಹಲವು ದಿನಗಳಿಂದ ಕೆಪಿಸಿಸಿ ಚಟುವಟಿಕೆಗಳಿಂದ ಅಂತರಕಾಯ್ದುಕೊಂಡಿದ್ದಾರೆ. ಕೆಪಿಸಿಸಿ ಕಾರ್ಯಕ್ರಮಗಳು, ಪ್ರತಿಭಟನೆಗಳಿಂದಲೂ ಜಮೀರ್ ದೂರ ಉಳಿದಿರುವುದು ಈ ಎಲ್ಲಾ ನಿದರ್ಶನಗಳಿಗೆ ಪುಷ್ಠಿ ನೀಡಿದೆ.

Comments

Leave a Reply

Your email address will not be published. Required fields are marked *