ಭಯೋತ್ಪಾದನೆಯಲ್ಲಿ ತೊಡಗಲು ಮುಸ್ಲಿಂ ಯುವಕರಿಗೆ ಪ್ರೇರಣೆ- 5 ವರ್ಷ ಜಾಕಿರ್‌ ನಾಯಕ್‌ ಸಂಸ್ಥೆ ಬ್ಯಾನ್‌

ನವದೆಹಲಿ: ಇಸ್ಲಾಮಿಕ್‌ ರಿಸರ್ಚ್‌ ಫೌಂಡೇಷನ್‌ (IRF) ಕಾನೂನು ಬಾಹಿರ ಸಂಘಟನೆ. ಹೀಗಾಗಿ ಅದನ್ನು ಐದು ವರ್ಷಗಳ ಕಾಲ ನಿಷೇಧಿಸಲಾಗಿದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ (Ministry of Home Affairs) ತಿಳಿಸಿದೆ.

ಈ ಸಂಬಂಧ ಸಚಿವಾಲಯ ಅಧಿಸೂಚನೆ ಹೊರಡಿಸಿದೆ. ಐಆರ್‌ಎಫ್‌ನ ಸಂಸ್ಥಾಪಕ ಜಾಕಿರ್ ನಾಯ್ಕ್ ಅವರ ಭಾಷಣಗಳು ಆಕ್ಷೇಪಾರ್ಹವಾಗಿವೆ. ಏಕೆಂದರೆ ಅವರು ಭಯೋತ್ಪಾದಕರನ್ನು ಹೊಗಳುತ್ತಿದ್ದಾರೆ. ಪ್ರತಿಯೊಬ್ಬ ಮುಸ್ಲಿಮರೂ ಭಯೋತ್ಪಾದಕರಾಗಬೇಕು ಎಂದು ಘೋಷಿಸಿದ್ದಾರೆ ಎಂದು ಅಧಿಸೂಚನೆಯಲ್ಲಿ ಉಲ್ಲೇಖಿಸಿದೆ. ಇದನ್ನೂ ಓದಿ: ಮತ್ತೊಂದು ಹಿಂದೂಯೇತರ ನೃತ್ಯಗಾರ್ತಿಗೆ ದೇವಸ್ಥಾನದ ಉತ್ಸವದಲ್ಲಿ ನಿರ್ಬಂಧ

ಐಆರ್‌ಎಫ್ ಸಂಸ್ಥಾಪಕರು ಯುವಕರನ್ನು ಇಸ್ಲಾಂಗೆ ಬಲವಂತವಾಗಿ ಮತಾಂತರಗೊಳಿಸುವುದನ್ನು ಉತ್ತೇಜಿಸುತ್ತಿದ್ದಾರೆ. ಆತ್ಮಾಹುತಿ ಬಾಂಬ್ ದಾಳಿಯನ್ನು ಸಮರ್ಥಿಸುತ್ತಾರೆ. ಹಿಂದೂಗಳು, ಹಿಂದೂ ದೇವರುಗಳು ಮತ್ತು ಇತರ ಧರ್ಮಗಳ ವಿರುದ್ಧ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ್ದಾರೆ. ಅದು ಇತರ ಧರ್ಮಗಳಿಗೆ ಅವಮಾನಕರವಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಭಯೋತ್ಪಾದಕ ಕೃತ್ಯಗಳಲ್ಲಿ ತೊಡಗಿಕೊಳ್ಳಲು ವಿಶ್ವ ಹಾಗೂ ಭಾರತದ ಮುಸ್ಲಿಂ ಯುವಜನತೆ ಮತ್ತು ಉಗ್ರಗಾಮಿಗಳಿಗೆ ನಾಯಕ್‌ ಪ್ರೇರಣೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ. ಇದನ್ನೂ ಓದಿ: ನನ್ನ ದೇಶಕ್ಕಾಗಿ ಪ್ರಾಣವನ್ನೂ ಕೊಡಬಲ್ಲೆ: ಬಿಜೆಪಿಗೆ ಕೇಜ್ರಿವಾಲ್‌ ಟಾಂಗ್‌

ಗುಜರಾತ್, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಮಹಾರಾಷ್ಟ್ರ ಮತ್ತು ಒಡಿಶಾದಲ್ಲಿ ಐಆರ್‌ಎಫ್, ಅದರ ಸದಸ್ಯರು ಮತ್ತು ಸಹಾನುಭೂತಿ ಹೊಂದಿರುವವರ ಕಾನೂನುಬಾಹಿರ ಚಟುವಟಿಕೆಗಳನ್ನು ಗಮನಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *