‘ಬನಾರಸ್’ ಬಳಿಕ ಮತ್ತೊಂದು ಚಿತ್ರ ಒಪ್ಪಿಕೊಂಡ ಝೈದ್ ಖಾನ್

ಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದ ಬನಾರಸ್ (Banaras) ಸಿನಿಮಾ ಜಮೀರ್ ಅಹಮದ್ ಖಾನ್ ಪುತ್ರ ಝೈದ್ ಖಾನ್ (Zaid Khan) ಗೆ ಭರ್ಜರಿ ಓಪನಿಂಗ್ ತರಲಿದೆ ಎಂದು ಅಂದಾಜಿಸಲಾಗಿತ್ತು. ಈ ಸಿನಿಮಾ ಮೂಲಕ ಝೈದ್ ಖಾನ್ ಭಾರತೀಯ ಸಿನಿಮಾ ರಂಗದಲ್ಲಿ, ಅದರಲ್ಲೂ ಕನ್ನಡ ಮತ್ತು ಬಾಲಿವುಡ್ ನಲ್ಲಿ ಸಖತ್ ಹೆಸರು ಮಾಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇದಾವುದೂ ಆಗಲಿಲ್ಲ.

ಸಿನಿಮಾ ಬಗ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದರೂ, ವ್ಯಾಪಾರ ದೃಷ್ಟಿಯಿಂದ ಈ ಸಿನಿಮಾ ಗೆಲ್ಲಲಿಲ್ಲ. ಜೊತೆಗೆ ಝೈದ್ ಖಾನ್ ಗೆ ಹೇಳಿಕೊಳ್ಳುವಂತಹ ಬ್ರೇಕ್ ಕೂಡ ನೀಡಲಿಲ್ಲ. ಹಾಗಾಗಿ ಇದೀಗ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಚುನಾವಣೆ ಸಮಯದಲ್ಲಿ ಅಪ್ಪನ ಸಹಾಯಕ್ಕೆ ನಿಂತಿದ್ದ ಝೈದ್, ಇದೀಗ ಮತ್ತೊಂದು ಚಿತ್ರಕ್ಕೆ (New Movie) ಒಪ್ಪಿಗೆ ನೀಡಿದ್ದಾರೆ. ಸದ್ಯದಲ್ಲೇ ಮಾಹಿತಿಯನ್ನೂ ನೀಡಲಿದ್ದಾರಂತೆ. ಇದನ್ನೂ ಓದಿ:ಮಹಾಭಾರತ ಸಿನಿಮಾ ಮಾಡುವ ಕನಸಿನ ಯೋಜನೆ ಬಗ್ಗೆ ರಾಜಮೌಳಿ ಮಾಸ್ಟರ್‌ ಪ್ಲ್ಯಾನ್

ಈ ಹೊಸ ಸಿನಿಮಾವನ್ನು ರುದ್ರನಾಗ್ (Rudranag) ಎನ್ನುವವರು ನಿರ್ದೇಶನ ಮಾಡಲಿದ್ದು, ಇದೊಂದು ಪಕ್ಕಾ ಕಮರ್ಷಿಯನ್ ಎಂಟರ್ ಟೈನ್ಮೆಂಟ್ ಸಿನಿಮಾ ಎಂದು ಹೇಳಲಾಗುತ್ತಿದೆ. ಅಂದುಕೊಂಡಂತೆ ಆಗಿದ್ದರೆ ರುದ್ರಾನಾಗ್ , ಯುವರಾಜ್ ಕುಮಾರ್ ಜೊತೆ ಸಿನಿಮಾ ಮಾಡಬೇಕಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಅಂದು ಸಾಧ್ಯವಾಗದೇ ಇರುವ ಕನಸನ್ನು ಇಂದು ಝೈದ್ ಖಾನ್ ಮೂಲಕ ಈಡೇರಿಸಿಕೊಳ್ಳುತ್ತಿದ್ದಾರೆ.

ಈ ಸಿನಿಮಾ ಇನ್ನೂ ಆರಂಭಿಕ ಹಂತದಲ್ಲೇ ಇದ್ದು, ಚುನಾವಣೆಯಿಂದಾಗಿ ಝೈದ್ ಅವರೇ ಆಸಕ್ತಿ ತೋರಲಿಲ್ಲವಂತೆ. ಚುನಾವಣೆ ಮುಗಿದಿರುವುದರಿಂದ ಸದ್ಯದಲ್ಲೇ ನಿರ್ದೇಶಕರೊಂದಿಗೆ ಚರ್ಚೆ ಮಾಡುವುದಾಗಿ ಮಾಧ್ಯಮಗಳ ಜೊತೆ ಅವರು ಹೇಳಿಕೊಂಡಿದ್ದಾರೆ.