ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಜೊತೆ ಡೇಟಿಂಗ್ ಮಾಡುತ್ತಿರುವ ಹಾಗೂ ಶೀಘ್ರವೇ ದಾಂಪತ್ಯ ಜೀವನಕ್ಕೆ ಕಾಲಿಡುವುದರ ಬಗ್ಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಯಜುವೇಂದ್ರ ಚಹಲ್ ಸ್ಪಷ್ಟನೆ ನೀಡಿದ್ದಾರೆ.
ಸೋಮವಾರ ಚಹಲ್ ತನ್ನ ಹಾಗೂ ತನಿಷ್ಕಾ ಸಂಬಂಧದ ಬಗ್ಗೆ ಟ್ವಿಟ್ಟರಿನಲ್ಲಿ ಫೋಟೋ ಹಾಕಿ ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಗಾಸಿಪ್ ಗಳಿಗೆ ಬ್ರೇಕ್ ಹಾಕಿದ್ದಾರೆ.

ಫೋಟೋದಲ್ಲಿ ಏನಿತ್ತು: ಎಲ್ಲರಿಗೂ ನನ್ನ ನಮಸ್ಕಾರ. ನನ್ನ ಜೀವನದಲ್ಲಿ ಏನೂ ನಡೆಯುತ್ತಿಲ್ಲ ಎಂಬ ಸಂದೇಶವನ್ನು ನಿಮಗೆ ನೀಡಲು ಇಷ್ಟಪಡುತ್ತೇನೆ. ನಾನು ಮದುವೆಯಾಗುತ್ತಿಲ್ಲ. ತನಿಷ್ಕಾ ಹಾಗೂ ನಾನು ಒಳ್ಳೆಯ ಸ್ನೇಹಿತರು ಅಷ್ಟೇ ಅದು ಬಿಟ್ಟು ನಮ್ಮ ನಡುವೆ ಯಾವ ಸಂಬಂಧವೂ ಇಲ್ಲ. ಈ ರೀತಿಯ ಸುದ್ದಿಗಳು ಹಬ್ಬಿಸದಂತೆ ನಾನು ಎಲ್ಲ ಮಾಧ್ಯಮದವರಿಗೂ ಹಾಗೂ ನನ್ನ ಅಭಿಮಾನಿಗಳಿಗೂ ಮನವಿ ಮಾಡಿಕೊಳ್ಳುತ್ತೇನೆ. ನೀವು ನನ್ನ ಖಾಸಗಿತನವನ್ನು ಗೌರವಿಸುತ್ತೀರಾ ಎಂದುಕೊಂಡಿದ್ದೇನೆ. ದಯವಿಟ್ಟು ಈ ರೀತಿ ಸುದ್ದಿಗಳನ್ನು ಹಬ್ಬಿಸುವುದು ನಿಲ್ಲಿಸಿ. ಈ ರೀತಿಯ ಮದುವೆ ಸುದ್ದಿಗಳನ್ನು ಹಬ್ಬಿಸುವ ಮೊದಲು ಪರಿಶೀಲಿಸಿ. ಧನ್ಯವಾದಗಳು. ಲವ್ ಯೂ ಆಲ್ ಎಂದು ಬರೆದ ಫೋಟೋವನ್ನು ಚಹಲ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ನಟಿ ತನಿಷ್ಕಾ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, `ನನಗೂ ಚಹಲ್‍ಗೂ ಯಾವುದೇ ಸಂಬಂಧವಿಲ್ಲ. ನನಗೆ ಅವರು ವೈಯಕ್ತಿಕವಾಗಿ ಪರಿಚಯವೇ ಇಲ್ಲ. ನಾನು ಮದುವೆ ಆಗುತ್ತಿಲ್ಲ. ಸದ್ಯ ನಾನು ನನ್ನ ವಿದ್ಯಾಭ್ಯಾಸದ ಕಡೆ ಗಮನ ಕೊಡುತ್ತಿದ್ದೇನೆ. ಈ ರೀತಿಯ ಸುಳ್ಳು ಸುದ್ದಿ ಹಬ್ಬಿಸಬೇಡಿ ಎಂದು ಹೇಳಿದ್ದಾರೆ.

ಫಸ್ಟ್ ರ‍್ಯಾಂಕ್ ರಾಜು ಚಿತ್ರದಲ್ಲಿ ಗುರುನಂದನ್ ಜೊತೆ ನಾಯಕಿಯಾಗಿ ನಟಿಸಿದ ತನಿಷ್ಕಾ ಕಪೂರ್ ಜೊತೆ ಚಹಲ್ ಕೆಲವು ತಿಂಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಸಾಮಾಜಿಕ ಜಾಲತಾಣದಲ್ಲೂ ಈ ಜೋಡಿ ಒಬ್ಬರಿಗೊಬ್ಬರು ಪ್ರತಿಕ್ರಿಯಿಸುತ್ತಿದ್ದಾರೆ. ಅಷ್ಟೇ ಅಲ್ಲದೇ ಈ ಜೋಡಿಯ ಒಟ್ಟಿಗೆಯಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಐಪಿಎಲ್ ಮುಗಿದ ನಂತರ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿಗಳು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಇದನ್ನೂ ಓದಿ: ಸ್ಯಾಂಡಲ್‍ವುಡ್ ನಟಿ ಜೊತೆ ಚಹಲ್ ಡೇಟಿಂಗ್- ಶೀಘ್ರವೇ ಆಗಲಿದ್ದಾರೆ ಮದುವೆ!
— Yuzvendra Chahal (@yuzi_chahal) April 23, 2018

Leave a Reply