`ಓಲ್ಡ್’ ಎಂದವರಿಗೆ ವೀಡಿಯೋ ಮೂಲಕ ತಿರುಗೇಟು ಕೊಟ್ಟ ಯುವರಾಜ್ ಸಿಂಗ್

ಮುಂಬೈ: ತಮ್ಮ ಸ್ಫೋಟಕ ಬ್ಯಾಟಿಂಗ್‍ನಿಂದ ಸುದ್ದಿಯಾಗಿದ್ದ ಯುವರಾಜ್ ಸಿಂಗ್ ಸದ್ಯ ತಂಡದಲ್ಲಿ ಹೊರಗುಳಿದಿರುವುದು ಎಲ್ಲರಿಗೂ ತಿಳಿದ ಸಂಗತಿ. ಅಲ್ಲದೇ ಬಹುದಿನಗಳಿಂದ ತಂಡದಲ್ಲಿ ಸ್ಥಾನಪಡೆಯಲು ಫಿಟ್‍ನೆಸ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಸದ್ಯ ತಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ `ಓಲ್ಡ್’ ಎಂದು ಟ್ರೋಲ್ ಮಾಡಿದ ಮಂದಿಗೆ ಯುವಿ ವೀಡಿಯೋ ಮೂಲಕ ತಿರುಗೇಟು ನೀಡಿದ್ದಾರೆ.

ಈ ಕುರಿತು ತಮ್ಮ ಟ್ವಿಟ್ಟರ್ ನಲ್ಲಿ ವಿಡೀಯೋ ಪೋಸ್ಟ್ ಮಾಡಿರುವ ಯುವಿ, ಕಳೆದ ವರ್ಷ ತಮ್ಮನ್ನು ಒಲ್ಡ್ ಎಂದು ಹೇಳಿದ್ದರು. ಆದರೆ ಎಂದು ನನ್ನ ಬಗ್ಗೆ ಹಾಗೇ ಹೇಳಬೇಡಿ. ನನ್ನ ಗುರಿಯನ್ನು ಮಟ್ಟಲು ನಾನು ಸದಾ ಪ್ರಯತ್ನಿಸುತ್ತೇನೆ. ಸದ್ಯ ನಾನು ಹೊಸ ಇನ್ನಿಂಗ್ಸ್ ಆರಂಭಿಸಲು ಪ್ರಯತ್ನಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಕಲಿಯುವುದು ಎಂದು ತಡವಾಗುವುದಿಲ್ಲ ಎಂದು ಹೇಳಿರುವ ಅವರು, ಹೊಸತನ್ನು ಸಾಧಿಸಲು ಕಲಿಯಬೇಕಿದೆ ಎಂದು ತಿಳಿಸಿದ್ದಾರೆ.

https://www.instagram.com/p/BnqFnMJDIG2/?utm_source=ig_embed

2017 ಜೂನ್ 30 ರಂದು ಕೊನೆಯ ಬಾರಿಗೆ ಪಂದ್ಯವಾಡಿದ 36 ವರ್ಷದ ಯುವಿ ಬೆಂಗಳೂರಿನ ನ್ಯಾಷನಲ್ ಕ್ರಿಕೆಟ್ ಆಕಾಡೆಮಿ (ಎನ್‍ಸಿಎ) ತರಬೇತಿ ಪಡೆಯುತ್ತಿದ್ದಾರೆ. ಅಲ್ಲದೇ ಕಳೆದ ಡಿಸೆಂಬರ್ ನಲ್ಲಿ ಯುವಿ ಯೋಯೋ ಟೆಸ್ಟ್ ಪೂರ್ಣಗೊಳಿಸಿದ್ದರು.

ಇದುವರೆಗೂ 304 ಏಕದಿನ ಪಂದ್ಯವಾಡಿದ ಯುವಿ 36.55 ಸರಾಸರಿಯಲ್ಲಿ 8,701 ರನ್ ಗಳಿಸಿದ್ದಾರೆ. ಅಲ್ಲದೇ 40 ಟೆಸ್ಟ್ ಮತ್ತು 58 ಟಿ20 ಪಂದ್ಯಗಳನ್ನು ಆಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *