ಹೊಂಬಾಳೆ ಫಿಲ್ಮ್ಸ್: ಯುವರಾಜ್ ಕುಮಾರ್ ಹೊಸ ಸಿನಿಮಾ ಘೋಷಣೆ?

ಕೆಜಿಎಫ್ 2 ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಹೊಂಬಾಳೆ ಫಿಲ್ಮ್ಸ್ ನಾಳೆ (ಏ.27) ಹೊಸ ಘೋಷಣೆಯೊಂದನ್ನು ಮಾಡಲು ಮುಹೂರ್ತ ಫಿಕ್ಸ್ ಮಾಡಿದೆ. ‘ಬೆಳ್ಳಿ ಪರದೆಗೆ ಹೊಸದೊಂದು ಪರ್ವ’ ಎನ್ನುವ ಹೊಸ ಪೋಸ್ಟರ್ ವೊಂದನ್ನು ತನ್ನ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಹಾಕಿಕೊಂಡಿದೆ. ನಾಳೆ ಬೆಳಗ್ಗೆ 9.50ಕ್ಕೆ ಹೊಸ ಪರ್ವದ ಮಾಹಿತಿಯನ್ನು ಹಂಚಿಕೊಳ್ಳುವುದಾಗಿ ತಿಳಿಸಿದೆ. ಇದನ್ನೂ ಓದಿ : ದಕ್ಷಿಣದ ಸಿನಿಮಾ ನೋಡಲ್ಲ: ವಿವಾದಕ್ಕೆ ಕಾರಣವಾದ ಬಾಲಿವುಡ್ ಖ್ಯಾತ ನಟ ನವಾಜುದ್ಧೀನ್ ಸಿದ್ದಿಕಿ

ಈ ಪೋಸ್ಟರ್ ಅನ್ನು ಅವರು ಪೋಸ್ಟ್ ಮಾಡುತ್ತಿದ್ದಂತೆಯೇ ನಾನಾ ರೀತಿಯ ಕಾಮೆಂಟ್ ಗಳು ಬರುತ್ತಿವೆ. ಹೊಸ ಪರ್ವ ಅಂದರೆ ಏನು? ಎನ್ನುವ ಚರ್ಚೆ ಕೂಡ ಮಾಡಲಾಗುತ್ತಿದೆ. ಈಗಿರುವ ಸಿನಿಮಾಗಳ ಮಾಹಿತಿಯನ್ನೇ ಅದು ಹಂಚಿಕೊಳ್ಳಲಿದೆಯಾ ಅಥವಾ ಕೆಜಿಎಫ್ 3 ಸಿನಿಮಾದ ಮಾಹಿತಿ ಏನಾದರೂ ಕೊಡಲಿದ್ದಾರೆ ಅನ್ನುವ ಕುತೂಹಲವನ್ನೂ ಹಲವರು ಹಂಚಿಕೊಂಡಿದ್ದಾರೆ. ಇದನ್ನೂ ಓದಿ : ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

ಹೊಸ ಪರ್ವ ಎಂಬ ಪದವನ್ನು ಬಳಸಿರುವ ಕಾರಣಕ್ಕಾಗಿ ಹೊಸ ವಿಷಯವನ್ನೇ ಅಥವಾ ಹೊಸದಾಗಿ ಯಾರನ್ನಾದರೂ ಲಾಂಚ್ ಮಾಡುತ್ತಾರಾ ಎನ್ನುವ ಕುತೂಹಲ ಕೂಡ ಶುರುವಾಗಿದೆ. ಹಲವು ತಿಂಗಳುಗಳಿಂದ ಹೊಂಬಾಳೆ ಫಿಲ್ಮ್ಸ್ ಪುನೀತ್ ರಾಜ್ ಕುಮಾರ್ ಉತ್ತರಾಧಿಕಾರಿ ಎಂದೇ ಬಿಂಬಿತವಾಗುತ್ತಿರುವ, ರಾಘವೇಂದ್ರ ರಾಜ್ ಕುಮಾರ್ ಪುತ್ರ ಯುವರಾಜ್ ಕುಮಾರ್ ಗಾಗಿ ಸಿನಿಮಾ ಮಾಡಲಿದ್ದಾರೆ ಎನ್ನುವ ಸುದ್ದಿಯಿತ್ತು. ಬಹುಶಃ ಯುವರಾಜ್ ಕುಮಾರ್ ಲಾಂಚ್ ಮಾಡುವ ಕುರಿತಾಗಿ ಸುದ್ದಿ ಸಿಗಬಹುದಾ ಎನ್ನುವ ನಿರೀಕ್ಷೆ ಮಾಧ್ಯಮ ವಲಯದ್ದು.  ಇದನ್ನೂ ಓದಿ : ಮಸಾಜ್ ಪಾರ್ಲರ್ ಹುಡುಗಿ ಪಾತ್ರದಲ್ಲಿ ಅದಿತಿ ಪ್ರಭುದೇವ್

ನಿರ್ದೇಶಕ ಸಂತೋಷ್ ಆನಂದ್ ರಾಮ್ ಮತ್ತು ಯುವರಾಜ್ ಕಾಂಬಿನೇಷನ್ ನಲ್ಲಿ ಹೊಂಬಾಳೆ ಫಿಲ್ಮ್ಸ್ ಹಲವು ಸಿನಿಮಾಗಳನ್ನು ಮಾಡಲಿದೆ ಎನ್ನುವ ಸುದ್ದಿಯಿದೆ. ಅಂದುಕೊಂಡಂತೆ ಆಗಿದ್ದರೆ ಏಪ್ರಿಲ್ 24 ರಂದು ಡಾ.ರಾಜ್ ಹುಟ್ಟು ಹಬ್ಬದಂದೇ ಈ ಹೊಸ ಸಿನಿಮಾದ ಘೋಷಣೆ ಆಗಲಿದೆ ಎಂದು ಸುದ್ದಿಯಿತ್ತು. ಅದು ಏ.27ರಂದು ನಿಜವಾಗಲಿದೆ ಎಂದೂ ಹೇಳಲಾಗುತ್ತಿದೆ. ಇದನ್ನೂ ಓದಿ : ನಮ್ಮದು ಪ್ಯಾನ್ ಇಂಡಿಯಾ ಸಿನಿಮಾವಲ್ಲ, ಸಿನಿಮಾ ಅಷ್ಟೇ : ಬಾಲಿವುಡ್ ವಿರುದ್ಧ ಕಿಚ್ಚ ಸುದೀಪ್ ಗುಡುಗು

ಯುವರಾಜ್ ಗಾಗಿಯೇ ಮೂರು ಸಿನಿಮಾಗಳನ್ನು ಹೊಂಬಾಳೆ ಬ್ಯಾನರ್ ಅಡಿಯಲ್ಲಿ ವಿಜಯ್ ಕಿರಗಂದೂರು ಮಾಡಲಿದ್ದಾರೆ ಎನ್ನುವುದು ಗಾಂಧಿನಗರದ ಮೂಲಗಳ ಮಾಹಿತಿ. ಈ ಎಲ್ಲ ಊಹಾಪೋಹಗಳಿಗೆ ನಾಳೆ ತೆರೆಬೀಳಲಿದೆ.

Comments

Leave a Reply

Your email address will not be published. Required fields are marked *