ಇಂಟಿಮೇಟ್ ಸೀನ್ ಮಾಡಲು ರಣವೀರ್ ಅನುಮತಿ ಇತ್ತಾ? – ಖಡಕ್ ಉತ್ತರ ಕೊಟ್ಟ ದೀಪಿಕಾ

ಮುಂಬೈ: ‘ಗೆಹ್ರೈಯಾನ್’ ಸಿನಿಮಾದಲ್ಲಿ ಇಂಟಿಮೇಟ್ ಸೀನ್ ಮಾಡಲು ರಣವೀರ್ ಸಿಂಗ್ ಅನುಮತಿ ನೀಡಿದ್ರಾ ಎಂಬ ಪ್ರಶ್ನೆಗೆ ಬಾಲಿವುಡ್ ಪದ್ಮವತಿ ದೀಪಿಕಾ ಪಡುಕೋಣೆ ಖಡಕ್ ಉತ್ತರ ಕೊಟ್ಟಿದ್ದಾರೆ.

‘ಗೆಹ್ರೈಯಾನ್’ ಸಿನಿಮಾದಲ್ಲಿ ದೀಪಿಕಾ ಅವರು ತನ್ನ ಸಹನಟನ ಜೊತೆ ಇಂಟಿಮೇಟ್ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಈ ಸೀನ್ ನೋಡಿದ ಪ್ರೇಕ್ಷಕರು ರಣವೀರ್ ಇದಕ್ಕೆ ಒಪ್ಪಿಕೊಂಡ್ರಾ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ದೀಪಿಕಾ ‘ಅಯ್ಯೋ! ಇದು ತುಂಬಾ ಮೂರ್ಖತನದ ಪ್ರಶ್ನೆಯಾಗಿದೆ’ ಎಂದು ಉತ್ತರಿಸಿದ್ದು, ಈ ಸಿನಿಮಾ ಸಂಬಂಧಗಳ ಸಂಕೀರ್ಣತೆಯ ಕುರಿತು ಚಿತ್ರೀಕರಿಸಲಾಗಿದೆ ಎಂದು ಉತ್ತರಿಸಿದ್ದಾರೆ. ಇದನ್ನೂ ಓದಿ: ‘ಅಮ್ಮನ ಮಡಿಲು ಸ್ವರ್ಗ’ – ಅಮ್ಮನ ಜೊತೆ ಫೋಟೋ ಶೇರ್ ಮಾಡಿದ ಸಲ್ಲು

ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಕಮೆಂಟ್ ಗಳನ್ನು ಓದುವುದಿಲ್ಲ. ನಾವು ಅದಕ್ಕೆ ಪ್ರತಿಕ್ರಿಯಿಸುತ್ತಿರುವುದು ಮೂರ್ಖತನ. ನಾನು ಈ ಸಿನಿಮಾ ಮಾಡಿದಕ್ಕೆ ಅವರು ಎಂದೂ ವಿರೋಧ ವ್ಯಕ್ತಪಡಿಸಿಲ್ಲ. ನಾನು ಕಮೆಂಟ್‍ಗೆಲ್ಲ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ರಣವೀರ್ ಸಿಂಗ್ ಪ್ರತಿಕ್ರಿಯೆಯ ಬಗ್ಗೆ ಹೇಳಿದ ಅವರು, ರಣವೀರ್ ಸಿನಿಮಾ ಬಗ್ಗೆ ಅತ್ಯಂತ ಹೆಮ್ಮೆಪಡುತ್ತಾರೆ. ನನ್ನ ಅಭಿನಯದ ಬಗ್ಗೆ ತುಂಬಾ ಹೆಮ್ಮೆಪಡುತ್ತಾರೆ ಎಂದು ಉತ್ತರಿಸಿದ್ದಾರೆ.

‘ಗೆಹ್ರೈಯಾನ್’ ಚಿತ್ರದ ಟ್ರೇಲರ್ ಬಿಡುಗಡೆಯಾದಾಗ, ರಣವೀರ್ ಸಿಂಗ್ ಸಿನಿಮಾ ಪೋಸ್ಟ್ ಹಂಚಿಕೊಂಡಿದ್ದರು. ಈ ವೇಳೆ ದೀಪಿಕಾ ಅವರನ್ನು ರಣವೀರ್ ಹೊಗಳಿದ್ದರು. ಇನ್‍ಸ್ಟಾದಲ್ಲಿ ಫೋಟೋ ಶೇರ್ ಮಾಡಿದ ರಣವೀರ್ ‘ಮೂಡಿ, ಸೆಕ್ಸಿ ಮತ್ತು ಇಂಟೆನ್ಸ್!’ ಎಂದು ಬರೆದು ಪೋಸ್ಟ್ ಮಾಡಿಸದ್ದರು.

 

View this post on Instagram

 

A post shared by Ranveer Singh (@ranveersingh)

‘ಗೆಹ್ರೈಯಾನ್’ ಸಿನಿಮಾವನ್ನು ‘ಧರ್ಮಾ ಪ್ರೊಡಕ್ಷನ್ಸ್ ಮತ್ತು ವಯಾಕಾಮ್ 18 ಸ್ಟುಡಿಯೋಸ್ ಜಂಟಿಯಾಗಿ ನಿರ್ಮಾಣ ಮಾಡಿತ್ತು. ಈ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಜೊತೆಗೆ ಸಿದ್ಧಾಂತ್ ಚತುರ್ವೇದಿ, ಅನನ್ಯ ಪಾಂಡೆ ಮತ್ತು ಧೈರ್ಯ ಕರ್ವಾ ಕೂಡ ನಟಿಸಿದ್ದಾರೆ. ಫೆಬ್ರವರಿ 11 ರಂದು ಈ ಸಿನಿಮಾ ಓಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ಇದನ್ನೂ ಓದಿ: ತಲೈವಾನ 169ನೇ ಚಿತ್ರಕ್ಕೆ ನೆಲ್ಸನ್ ದಿಲೀಪ್ ಕುಮಾರ್ ಆಕ್ಷನ್ ಕಟ್

ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು 2018ರಲ್ಲಿ ಮದುವೆಯಾಗಿದ್ದು, ಆರು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ಮಾಡಿದ್ದಾರೆ. ಇವರಿಬ್ಬರನ್ನು ಬಾಲಿವುಡ್ ನಲ್ಲಿ ಪವರ್ ಕಪಲ್ ಎಂದೇ ಕರೆಯುತ್ತಾರೆ. ಇವರು ಹಲವು ಸಿನಿಮಾಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ.

ಇತ್ತೀಚೆಗೆ ಬಿಡುಗಡೆಯಾದ ಕಬೀರ್ ಖಾನ್ ನಿರ್ದೇಶನದ ’83’ ಸಿನಿಮಾದಲ್ಲಿ ಇಬ್ಬರು ಒಟ್ಟಿಗೆ ನಟಿಸಿದ್ದರು. ಈ ಸಿನಿಮಾದಲ್ಲಿ ರಣವೀರ್ ಸಿಂಗ್ ಭಾರತದ ಮಾಜಿ ನಾಯಕ ಕಪಿಲ್ ದೇವ್ ಮತ್ತು ದೀಪಿಕಾ ಪಡುಕೋಣೆ ರೋಮಿ ಭಾಟಿಯಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *