ರಾಯಚೂರು: ನಗರದ ಯರಮರಸ್ ಸೂಪರ್ ಕ್ರಿಟಿಕಲ್ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಹಾರೋಬೂದಿ ಸಾಗಣೆ ಮಾರ್ಗದ ಸಂಗ್ರಹ ಟ್ಯಾಂಕ್ ಕುಸಿದು ಕೋಟ್ಯಾಂತರ ರೂ. ಹಾನಿಯಾಗಿದೆ.

ಘಟನೆಯಿಂದ ವಿದ್ಯುತ್ ಕೇಂದ್ರದ ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಸಂಪೂರ್ಣ ಸ್ಥಗಿತವಾಗಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಾಮರ್ಥ್ಯಕ್ಕಿಂತ ಹೆಚ್ಚು ಭಾರವನ್ನ ಹೊತ್ತಿದ್ದರಿಂದ ಕುಸಿತವಾಗಿದ್ದು, ನಿಗದಿತವಾಗಿ ಹಾರೋಬೂದಿ ವಿಲೆವಾರಿ ನಡೆಯದೆ ಅವಘಡ ಸಂಭವಿಸಿದೆ. ಇದನ್ನೂ ಓದಿ: ಅಕ್ರಮ ಆಸ್ತಿಗಳಿಕೆ ಆರೋಪ – ವಿಚಾರಣೆ ನಡೆಸಲು ಹೈಕೋರ್ಟ್‍ಗೆ ಸುಪ್ರೀಂ ಸೂಚನೆ

ಹೀಗಾಗಿ 800 ಮೆ.ವ್ಯಾ ಸಾಮರ್ಥ್ಯ ವಿದ್ಯುತ್ ಘಟಕ ಸಂಪೂರ್ಣ ಸ್ಥಗಿತವಾಗಿದೆ. ಟ್ಯಾಂಕ್ ರಿಪೇರಿಯಾಗುವವರೆಗೂ ವಿದ್ಯುತ್ ಉತ್ಪಾದನೆ ಸ್ಥಗಿತಗೊಳ್ಳಲಿದೆ. ಈ ಮೊದಲು ಇಂತಹ ಘಟನೆ ನಡೆದಿದ್ದರು ಅಧಿಕಾರಿಗಳು ಎಚ್ಚೆತ್ತುಕೊಳ್ಳದ ಹಿನ್ನೆಲೆ ಅವಘಡ ಪುನರಾವರ್ತನೆಯಾಗಿದೆ. ಎರಡನೇ ಘಟಕದಲ್ಲಿ ವಿದ್ಯುತ್ ಉತ್ಪಾದನೆ ಪುನರಾರಂಭವಾಗಲು ಇನ್ನೂ ಮೂರು ದಿನಗಳು ಬೇಕಾಗಬಹುದು ಅಂತ ವೈಟಿಪಿಎಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಜಮೀರ್ ಅತ್ಯಂತ ಚಿಲ್ಲರೆ, ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ : ಪ್ರಹ್ಲಾದ್ ಜೋಶಿ

Leave a Reply