ಹುಬ್ಬಳ್ಳಿ: ಯೂಟ್ಯೂಬರ್ (YouTuber) ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಧರ್ಮ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಮುಕಳೆಪ್ಪ (Mukleppa) ವಿರುದ್ಧ ಯುವತಿ ತಂದೆ ತಾಯಿ, ಹಿಂದೂಪರ ಸಂಘಟನೆಗಳು ಕಾನೂನು ಸಮರಕ್ಕೆ ಮುಂದಾಗಿದ್ದಾರೆ. ಮತ್ತೊಂದು ಕಡೆ ಯುವತಿ ಮುಕಳೆಪ್ಪ ಪರವಾಗಿ ಧ್ವನಿ ಎತ್ತಿದ್ದು, ಈ ಇಬ್ಬರ ಗದ್ದಲ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ಮದುವೆ ಪ್ರಕರಣ ರೋಚಕ ತಿರುವು ಪಡೆದುಕೊಳ್ಳುತ್ತಿದೆ. ಲವ್ ಜಿಹಾದ್, ನಕಲಿ ದಾಖಲೆ ಆಯಿತು. ಈಗ ಮುಕಳೆಪ್ಪ ಮದುವೆಯಾಗಿರುವ ಯವತಿಯ ತಂದೆ ತಾಯಿ ದೂರಿನ ಆಧಾರದ ಮೇಲೆ ಮುಕಳೆಪ್ಪ ಮೇಲೆ ಜೀವ ಬೆದರಿಕೆ ಮತ್ತು ಅಪಹರಣ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ನಕಲಿ ದಾಖಲೆ ತೋರಿಸಿ ಹಿಂದೂ ಯುವತಿ ಜೊತೆ ಮದ್ವೆ – ಯೂಟ್ಯೂಬರ್ ಮುಕಳೆಪ್ಪ ವಿರುದ್ಧ ಎಫ್‌ಐಆರ್
ಈ ಮಧ್ಯೆ ಮುಕಳೆಪ್ಪ ಪತ್ನಿ ಗಾಯತ್ರಿ, ವಿಡಿಯೋ ಬಿಡುಗಡೆ ಮಾಡಿ, ತನ್ನ ತಂದೆ ತಾಯಿ ವಿರುದ್ಧವೇ ತಿರುಗಿ ಬಿದ್ದಾಳೆ. ನಮ್ಮ ಮದುವೆಗೆ ನಮ್ಮ ತಾಯಿ ಒಪ್ಪಿಗೆ ಇತ್ತು. ಈಗ ಯಾರೋ ಹೇಳಿರುವ ಮಾತು ಕೇಳಿ ನನ್ನ ಹಾಗೂ ಮುಕಳೆಪ್ಪ ವಿರುದ್ಧ ಮಾತನಾಡುತ್ತಿದ್ದಾರೆ ಎಂದು ಮತ್ತೊಂದು ಟ್ವಿಸ್ಟ್ ನೀಡಿದ್ದಾಳೆ. ಇದನ್ನೂ ಓದಿ: ಧಾರವಾಡ | ನಕಲಿ ದಾಖಲೆ ಸೃಷ್ಟಿಸಿ ಹಿಂದೂ ಯುವತಿ ಜೊತೆ ಮದ್ವೆ – ಯುಟ್ಯೂಬರ್ ಮುಕಳೆಪ್ಪ ವಿರುದ್ಧ ದೂರು
ಭಾನುವಾರ ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆಗೆ ಹಿಂದೂಪರ ಸಂಘಟನೆಗಳ ಬೆಂಬಲದಿಂದ ಗಾಯತ್ರಿ ಪೋಷಕರು ದೂರು ದಾಖಲಿಸಿದ್ದರು. ಮುಕಳೆಪ್ಪ ತಪ್ಪು ಮಾಹಿತಿ ನೀಡಿದ್ದಾನೆ. ಮೊದಲಿಗೆ ತಾನು ಮುಸ್ಲಿಂ ಎನ್ನುವ ಸಂಗತಿ ಮುಚ್ಚಿಟ್ಟಿದ್ದ. ಇನ್ನೂ ಗಾಯತ್ರಿ ತನ್ನ ತಂಗಿಯ ರೀತಿ ಎಂದು ಹೇಳಿ ನಂಬಿಸಿದ್ದ. ಅಲ್ಲದೆ ಇವರಿಬ್ಬರ ಮದುವೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಹೀಗಿದ್ದರೂ ಮಗಳ ತಲೆಕೆಡಿಸಿ ಮುಕಳೆಪ್ಪ ಬಲವಂತವಾಗಿ ಮದುವೆ ಆಗಿದ್ದಾನೆ ಎಂದು ಯುವತಿ ಪೋಷಕರು ಆರೋಪಿಸಿದ್ದರು.
ಮುಕಳೆಪ್ಪ ವಿರುದ್ಧ ದಾಖಲಾಗಿರುವ ಅಪಹರಣ ಮತ್ತು ಜೀವ ಬೆದರಿಕೆ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಈ ಬಗ್ಗೆ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಮಾತನಾಡಿ, ಯುವತಿ ಎಲ್ಲೋ ದೂರದಲ್ಲಿ ಇದ್ದು ವೀಡಿಯೋ ಬಿಡುಗಡೆ ಮಾಡಿದ್ರೆ ಆಗಲ್ಲ. ವಿಡಿಯೋ ಸ್ವ ಇಚ್ಛೆಯಿಂದ ಹೇಳಿದ್ದಾರಾ ಅಥವಾ ಯಾರಾದರೂ ಬಲವಂತವಾಗಿ ಮಾಡಿಸಿದ್ದಾರಾ ವಿಚಾರಣೆ ಮಾಡಬೇಕು. ಯೂಟ್ಯೂಬರ್ ಕ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಎಫ್‌ಐಆರ್ ದಾಖಲು ಹಿನ್ನಲೆ ಮುಕಳೆಪ್ಪ ಮತ್ತು ಗಾಯತ್ರಿ ಹೇಗೆ ಮದುವೆ ಆಗಿದ್ದಾರೆ ಅನ್ನೋದು ಗೊತ್ತಿಲ್ಲ. ಆದರೆ ಮುಕಳೆಪ್ಪ ವಿರುದ್ಧ ದೂರು ಬಂದಿದೆ. ಹೀಗಾಗಿ ನಾವು ವಿಚಾರಣೆ ಮಾಡಬೇಕು. ಅದಕ್ಕೂ ಮೊದಲು ಯುವತಿಯನ್ನು ರಕ್ಷಣೆ ಮಾಡುತ್ತೇವೆ ಎಂದಿದ್ದಾರೆ.
