ಲಹರಿ ಮ್ಯೂಸಿಕ್ ಸಂಸ್ಥೆಗೆ ಮತ್ತೊಂದು ಗರಿ: ಅಂಗ ಸಂಸ್ಥೆ ಎಂಆರ್‌ಟಿ ಆಡಿಯೋ ಸಂಸ್ಥೆಗೆ ಗೋಲ್ಡ್ ಅವಾರ್ಡ್

ಬೆಂಗಳೂರು: ಪ್ರಶಸ್ತಿಗಳು ಸುಮ್ಮನೆ ಹುಡುಕಿಕೊಂಡು ಬರೋದಿಲ್ಲ. ಅದಕ್ಕೆ ಪ್ರಾಮಾಣಿಕತೆ, ಪರಿಶ್ರಮಬೇಕು. ಅದಕ್ಕೆ ಲಹರಿ ಮ್ಯೂಸಿಕ್ ಸಂಸ್ಥೆಗೆ ಪ್ರಶಸ್ತಿ ಹುಡುಕಿಕೊಂಡು ಬಂದಿದೆ.

ಈ ವರ್ಷ ಲಹರಿ ಮ್ಯೂಸಿಕ್ ಸಂಸ್ಥೆಗೆ ಯುಟ್ಯೂಬ್ ಡೈಮಂಡ್ ಅವಾರ್ಡ್ ಬಂದಿದೆ. ಅದಷ್ಟೇ ಅಲ್ಲ, ಸಂಸ್ಥೆ ನಿರ್ಮಾಣ ಮಾಡಿದ ಆಲ್ಬಂ ಸಾಂಗ್‍ಗೆ ಗ್ರ್ಯಾಮಿ ಅವಾರ್ಡ್ ಬಂದಿತು. ಈಗ ಲಹರಿ ಸಂಸ್ಥೆಯ ಮತ್ತೊಂದು ಅಂಗ ಸಂಸ್ಥೆ ಎಂಆರ್‌ಟಿ ಮ್ಯೂಸಿಕ್‍ಗೆ ಗೋಲ್ಡ್ ಅವಾರ್ಡ್ ಕೂಡ ಲಭಿಸಿದೆ. ಇದನ್ನೂ ಓದಿ: ಆಂಬ್ಯುಲೆನ್ಸ್‌ನಲ್ಲೇ ಹೆರಿಗೆ ಮಾಡಿಸಿದ 108 ಸಿಬ್ಬಂದಿ 

ಈ ಕುರಿತು ಲಹರಿ ವೇಲು ಖುಷಿಯನ್ನು ಹಂಚಿಕೊಂಡಿದ್ದು, ವಿಶೇಷವೆಂದರೆ ಇದು ಶುರುವಾಗಿ ಕೇವಲ ಆರು ತಿಂಗಳಾಗಿದೆ. ಅದಾಗಲೇ ಈ ಅವಾರ್ಡ್ ಲಭಿಸಿದೆ. ಇದು ಮತ್ತಷ್ಟು ಜವಾಬ್ದಾರಿಯನ್ನು ಹೆಚ್ಚಿಸಿದೆ. ಸಂಗೀತ ಸಂಸ್ಥೆಯ ಎಲ್ಲ ಹಾಡುಗಳು ಸೇರಿದಂತೆ ಅಣ್ಣಾವ್ರ ಹಾಡು, ಅಂಬರೀಷ್ ಮತ್ತು ವಿಷ್ಣುವರ್ಧನ್ ಸಿನಿಮಾಗಳ ಗೀತೆಗಳು ಮತ್ತು ಕೆಜಿಎಫ್ 2 ಹಿಂದಿ ಭಾಷೆಯ ಹಾಡುಗಳನ್ನು ಮೊದಲ ಸಲ ಉತ್ತರ ಭಾರತ ಮಾರುಕಟ್ಟೆಯನ್ನು ನಾವೇಕೆ ಪ್ರವೇಶ ಮಾಡಬಾರದು ಎಂದು ಅಲ್ಲಿಯೂ ಕಾಲಿಟ್ಟು, ಅಲ್ಲೂ ಸಹ ಆಡಿಯೋ ಸೂಪರ್ ಹಿಟ್ ಆಗಿದೆ. ಹಾಗಾಗಿ ಗೋಲ್ಡ್ ಅವಾರ್ಡ್‍ಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಎಂಆರ್‌ಟಿ ಮ್ಯೂಸಿಕ್ ಲಹರಿ ಸಂಸ್ಥೆಯ ಅಂಗ ಸಂಸ್ಥೆ. ಕೇವಲ ಆರು ತಿಂಗಳಲ್ಲಿ ಬಂದಿರೋದು ದಾಖಲೆ. ಮುಂದಿನ ದಿನಗಳಲ್ಲಿ ಎಂಆರ್‌ಟಿ ಸಂಸ್ಥೆಗೆ ಆದಷ್ಟು ಬೇಗ ಡೈಮಂಡ್ ಅವಾರ್ಡ್ ಬರುವಂತೆಯೇ ಶ್ರಮ ವಹಿಸುತ್ತೇವೆ ಎನ್ನುವ ಲಹರಿ ವೇಲು, ಈ ಪ್ರಶಸ್ತಿಗೆ ಕಾರಣರಾದ ಎಲ್ಲರಿಗೂ ನಾನು ಚಿರಋಣಿ. ಪ್ರಮುಖವಾಗಿ ಕಲಾ ಪ್ರೇಮಿಗಳು, ಸಿನಿಮಾ ನಿರ್ದೇಶಕರು, ನಿರ್ಮಾಪಕರು ಹಾಗೂ ಮಾಧ್ಯಮಗಳಿಗೆ ಧನ್ಯವಾದಗಳು ಎಂದಿದ್ದಾರೆ. ಇದನ್ನೂ ಓದಿ:  ಹೋಟೆಲ್‍ಗಳಿಗೆ ನಿಗದಿತ ವಿದ್ಯುತ್ ಶುಲ್ಕ ವಿನಾಯಿತಿ: ಬೆಸ್ಕಾಂ ಭರವಸೆ 

Comments

Leave a Reply

Your email address will not be published. Required fields are marked *