ಕಾಣುತ್ತಿಲ್ಲ ವಿಡಿಯೋಗಳು – ಭಾರತದಲ್ಲಿ ಯೂಟ್ಯೂಬ್‌ ಡೌನ್‌

ನವದೆಹಲಿ:  ಮೈಕ್ರೋಸಾಫ್ಟ್‌ ನಂತರ ಭಾರತದಲ್ಲಿ ವಿಡಿಯೋ ಪ್ಲಾಟ್‌ಫಾರಂ ಯೂಟ್ಯೂಬ್‌ ಡೌನ್‌ (YouTube) ಆಗಿದೆ.

ಈ ಸಮಸ್ಯೆ ಯೂಟ್ಯೂಬ್‌ ಅಪ್ಲೋಡ್‌ (Upload) ಮಾಡುವಾಗ ಕಾಣಿಸಿದೆ ಹೊರತು ವೀಕ್ಷಕರಿಗೆ ಯಾವುದೇ ಸಮಸ್ಯೆ ಆಗುತ್ತಿಲ್ಲ.


ಏನಿದು ಸಮಸ್ಯೆ?
ಯೂಟ್ಯೂಬ್‌ನಲ್ಲಿ ವಿಡಿಯೋಗಳು ಅಪ್ಲೋಡ್‌ ಆಗುತ್ತಿದೆ. ಆದರೆ ಅಪ್ಲೋಡ್ ಆದ ನಂತರ ವಿಡಿಯೋಗ (Video) ಎಲ್ಲಿಯೂ ಕಾಣಿಸುತ್ತಿಲ್ಲ. ಸುಮಾರು ಒಂದು ಗಂಟೆ, ಒಂದೂವರೆ ಗಂಟೆಯ ನಂತರ ವಿಡಿಯೋಗಳು ವೀಕ್ಷಕರಿಗೆ ಲಭ್ಯವಾಗುತ್ತಿದೆ. ಇದನ್ನೂ ಓದಿ: ಅಗ್ನಿವೀರರಿಗೆ ಪೊಲೀಸ್, ಸರ್ಕಾರಿ ಇಲಾಖೆಗಳಲ್ಲಿ ಉದ್ಯೋಗ ನೀಡಲು ಉತ್ತರಾಖಂಡ ಸರ್ಕಾರ ನಿರ್ಧಾರ: ಸಿಎಂ ಧಾಮಿ

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಹಲವು ಮಂದಿ ಈ ಪ್ರಶ್ನೆಯನ್ನು ಯೂಟ್ಯೂಬ್‌ಗೆ ಕೇಳಿದ್ದಾರೆ. ಕೂಡಲೇ ಈ ಸಮಸ್ಯೆಯನ್ನು ಬಗೆ ಹರಿಸಲಾಗುತ್ತದೆ ಎಂದು ಯೂಟ್ಯೂಬ್‌ ಉತ್ತರ ನೀಡಿದೆ.

ಮಧ್ಯಾಹ್ನ 12:30ರಿಂದ ಈ ಸಮಸ್ಯೆ ಆಗುತ್ತಿದ್ದು ಸಂಜೆ 4 ಗಂಟೆಯವರೆಗೂ ಈ ಸಮಸ್ಯೆ ಪರಿಹಾರವಾಗಿಲ್ಲ.