ಹೊಸ ವರ್ಷದ ಮೋಜು ಮಸ್ತಿಗೆ ಬಂದವರು ಲಾಠಿ ಏಟು ತಿಂದು ಎಲ್ಲೆಂದ್ರಲ್ಲಿ ವಾಹನ ಬಿಟ್ಟು ಪರಾರಿಯಾದ್ರು

ಕೋಲಾರ: ಹೊಸ ವರ್ಷದ ಮೂಡ್‍ನಲ್ಲಿ ಕುಣಿದು ಕುಪ್ಪಳಿಸುತ್ತಿದ್ದ ಯುವಕ-ಯುವತಿಯರನ್ನ ಚದುರಿಸಲು ಕೋಲಾರದಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಕೋಲಾರ ತಾಲೂಕಿನ ನರಸಾಪುರ ಬಳಿ ರಾಷ್ಟ್ರೀಯ ಹೆದ್ದಾರಿ-75 ರ ಬಳಿ ಇರುವ ಕಾಫಿ ಡೇ ಸಮೀಪ ರಾತ್ರಿ 2 ಗಂಟೆಯವರೆಗೆ ಪಾರ್ಟಿ ಮಾಡಿ ಮೋಜು ಮಸ್ತಿಯಲ್ಲಿ ಯುವಕ ಯುವತಿಯರು ತೊಡಗಿದ್ರು. ಈ ವೇಳೆ ಪೊಲೀಸರು ಯುವಕ ಮತ್ತು ಯುವತಿಯರಿಗೆ ಸುರಕ್ಷಿತವಾಗಿ ಮನೆಗಳಿಗೆ ತೆರಳುವಂತೆ ಮನವಿ ಮಾಡಿದ್ದಾರೆ. ಪೊಲೀಸರ ಮಾತು ಕೇಳದ ಯುವಕರ ತಂಡ ರಾತ್ರಿ 2 ಗಂಟೆಯ ನಂತರವೂ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ರು.

ತಾಳ್ಮೆ ಕಳೆದುಕೊಂಡ ವೇಮಗಲ್ ಪೊಲೀಸರು, ಪಾರ್ಟಿ ಮೂಡ್ ನಲ್ಲಿದ್ದವರ ಮೇಲೆ ಲಾಠಿ ಬೀಸಿದ್ದಾರೆ. ವರ್ಷದ ಮೊದಲ ದಿನವೇ ಲಾಠಿ ಏಟು ತಿಂದು, ಯುವಕರ ಗುಂಪು ಎಲ್ಲೆಂದರಲ್ಲಿ ತಮ್ಮ ವಾಹನಗಳನ್ನ ಬಿಟ್ಟು ಪರಾರಿಯಾಗಿದ್ದಾರೆ. ಒಟ್ನಲ್ಲಿ ವರ್ಷದ ಮೊದಲ ದಿನವೇ ಯುವಕ ಯುವತಿಯರು ಮೋಜು ಮಸ್ತಿ ಮಾಡಲು ಹೋಗಿ ಲಾಠಿ ಏಟು ತಿಂದು ಮನೆಗಳಿಗೆ ತೆರಳಬೇಕಾದ ಸನ್ನಿವೇಶ ಕೋಲಾರದಲ್ಲಿ ನಿರ್ಮಾಣವಾಗಿತ್ತು.

Comments

Leave a Reply

Your email address will not be published. Required fields are marked *