ಯುವಕ-ಯುವತಿಯನ್ನ ಅರೆ ಬೆತ್ತಲೆ ಮಾಡಿದ ಯುವಕರ ಗುಂಪು – ಫೋಟೋ, ವಿಡಿಯೋ ವೈರಲ್

ಭುವನೇಶ್ವರ: ಯುವಕರ ಗುಂಪೊಂದು ಯುವತಿ ಮತ್ತು ಆತನ ಗೆಳೆಯನನ್ನು ಅರೆ ಬೆತ್ತಲೆ ಮಾಡಿ ಅವರ ಮೇಲೆ ದೌರ್ಜನ್ಯ ಎಸಗಿರುವ ಘಟನೆ ಒಡಿಶಾದ ಕೇಂದ್ರಪ್ಯಾರಾ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ರಾಜನಗರ್ ಪ್ರದೇಶದ ಪೆಂಟಾ ಸಮುದ್ರ ತೀರದ ಬಳಿ ಈ ಘಟನೆ ನಡೆದಿದೆ. ಯುವತಿ ಮತ್ತು ಆಕೆಯ ಗೆಳೆಯನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಳಿಕ ಪೊಲೀಸರು ಸಂತ್ರಸ್ತೆಯ ತಂದೆ ನೀಡಿದ ದೂರಿನ್ವಯ ರಾಜನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ನಂತರ ತನಿಖೆಯನ್ನು ಆರಂಭಿಸಿದ್ದಾರೆ.

ಸಂತ್ರಸ್ತೆ ತನ್ನ ಸ್ನೇಹಿತನೊಂದಿಗೆ ಪೆಂಟಾ ಸಮುದ್ರ ಬೀಚ್ ಗೆ ಹೋಗಿದ್ದರು. ಈ ವೇಳೆ ಸುಮಾರು ಆರು ಮಂದಿ ಅಪರಿಚಿತ ಯುವಕರು ಇಬ್ಬರನ್ನು ಸುತ್ತುವರಿದು ಅಡ್ಡಗಡ್ಡಿದ್ದಾರೆ. ನಂತರ ಸಂತ್ರಸ್ತೆಗೆ ಮತ್ತು ಯವಕನಿಗೆ ಥಳಿಸಿದ್ದಾರೆ. ಬಳಿಕ ಇಬ್ಬರನ್ನು ಅರೆಬೆತ್ತಲೆ ಮಾಡಿ ಫೋಟೋ ಕ್ಲಿಕ್ಕಿಸಿ ವಿಡಿಯೋ ಮಾಡಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.

ಆರೋಪಿ ಯುವಕರು ತೆಗೆದುಕೊಂಡಿದ್ದ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಟ್ ಮಾಡಿ ವೈರಲ್ ಮಾಡಿದ್ದಾರೆ. ಈ ಕುರಿತು ಪ್ರಕರಣವನ್ನು ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *