ಪ್ರೀತಿಗೆ ಕಂಟಕವಾಯ್ತು ಜಾತಿ- ದೂರವಾದ ಪ್ರಿಯತಮೆಗಾಗಿ ಯುವಕನ ಹುಡುಕಾಟ

ಬೆಂಗಳೂರು: ಪ್ರೀತಿಗೆ ಕಂಟಕವಾಯ್ತು ಜಾತಿ. ಪೋಷಕರಿಗೆ ಮರ್ಯಾದೆ ಪ್ರಶ್ನೆ. ಪ್ರೇಮಿಗಳಿಗೆ ತಮ್ಮ ಪ್ರೀತಿಯ ಉಳಿವಿನ ಪ್ರಶ್ನೆ. ದಿಕ್ಕು ಕಾಣದ ಪ್ರೇಮಿ ಈಗ ಪ್ರಿಯತಮೆಯ ಹುಡುಕಾಟದಲ್ಲಿದ್ದಾರೆ.

ಮೂರು ವರ್ಷಗಳಿಂದ 23 ವರ್ಷದ ಕುಮಾರ್ ಹಾಗೂ 18 ವರ್ಷದ ಕಲ್ಪನಾ ಲಕ್ಷ್ಮಿದೇವಿ ಪರಸ್ಪರ ಲವ್ ಮಾಡ್ತಿದ್ರು. ಹುಡುಗ ಬೋವಿ ಜನಾಂಗವಾದ್ರೆ ಹುಡುಗಿಯದ್ದು ಒಕ್ಕಲಿಗ ಜಾತಿ. ಆದರೆ ಪೋಷಕರು ಇವರ ಪ್ರೇಮವನ್ನು ಒಪ್ಪಲಿಲ್ಲ. ಕೊನೆಗೆ ಕಲ್ಪನಾ ಕುಮಾರನನ್ನ ಬಿಟ್ಟಿರಲಾಗದೇ ಅವರ ಮನೆಗೆ ಹೋಗಿದ್ದರು. ಆದರೆ ಹುಡುಗಿ ಅಪ್ಪ ಗೋವಿಂದರಾಜ್, ನನ್ನ ಮಗಳು ಮೈನರ್ ಅಂತಾ ಹೇಳಿ ಕಿಡ್ಯ್ನಾಪ್ ಕೇಸ್ ಹಾಕಿಸಿ ಕುಮಾರ್ ಜೊತೆ ಅವರ ಅಕ್ಕ, ಭಾವ ಹಾಗೂ ದೊಡ್ಡಪ್ಪನನ್ನು ಮೂರು ತಿಂಗಳು ಜೈಲಿಗೆ ಹಾಕಿಸಿದ್ರು.

ಕುಮಾರ್ ಜೈಲಿನಿಂದ ಬಂದ ಮೇಲೂ ಕಲ್ಪನಾ ಸುಮ್ಮನಾಗಲಿಲ್ಲ. ನೀನು ಇಲ್ಲ ಅಂದ್ರೆ ನಾನ್ ಸಾಯ್ತೀನಿ ಅಂತಾ ಹೇಳ್ತಿದ್ದಾಳೆ. ಕೊನೆಗೆ ಕುಮಾರ್ ಕಲ್ಪನಾಳನ್ನ ನೆಲಮಂಗಲದ ಅಕ್ಕನ ಮನೆಗೆ ಬಂದು ಬಿಟ್ಟಿದ್ದರು. ಮತ್ತೆ ಕಲ್ಪಾನ ತಂದೆ ದೂರು ನೀಡಿದ್ದರು. ಇಷ್ಟರಲ್ಲಿ ಹುಡುಗಿಗೆ 18 ವರ್ಷ ತುಂಬಿತ್ತು. ಇಷ್ಟಾದರೂ ಅಪ್ಪ ಮಾತ್ರ ಮಗಳನ್ನ ಕರೆದುಕೊಂಡು ಹೋಗಿ ಎಲ್ಲೊ ಬಚ್ಚಿಟ್ಟಿದ್ದಾರೆ ಅಂತಾ ಕುಮಾರ್ ಕುಟುಂಬ ಆರೋಪ ಮಾಡಿದೆ.

ಇತ್ತೀಚೆಗಷ್ಟೆ ಒಂದು ರಾತ್ರಿ ಫೋನ್ ಮಾಡಿದ ಕಲ್ಪನಾ, ನೀನು ಬರೆದೇ ಹೋದ್ರೆ ನಾನು ನಿನ್ನ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳಿದ್ದಾಗಿ ಅಂತ ಕುಮಾರ್ ಹೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *