ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಸಿಲುಕಿ ಯುವಕನ ಕೈಕಟ್

ರಾಮನಗರ: ಗಣೇಶ ವಿಸರ್ಜನೆ ವೇಳೆ ಜನರೇಟರ್‌ಗೆ ಯುವಕನ ಕೈ ಸಿಲುಕಿ ಕಟ್ ಆಗಿರುವ ಘಟನೆ ರಾಮನಗರದಲ್ಲಿ ತಡರಾತ್ರಿ ನಡೆದಿದೆ.

ನರೇಂದ್ರ ಕೈ ಕಳೆದುಕೊಂಡ ಯುವಕ. ನರೇಂದ್ರ ರಾಮನಗರದ ಚಾಮುಂಡೇಶ್ವರಿ ಬಡಾವಣೆ ನಿವಾಸಿ. ಶನಿವಾರ ಬಡಾವಣೆಯಲ್ಲಿ ಕೂರಿಸಿದ್ದ ಗಣೇಶನ ವಿಸರ್ಜನೆ ಕಾರ್ಯಕ್ರಮವನ್ನು ನಡೆಸಲಾಗಿತ್ತು. ಟ್ರಾಕ್ಟರಿನಲ್ಲಿ 6.5 ಅಡಿ ಎತ್ತರದ ಗಣೇಶನನ್ನು ವಿಸರ್ಜಿಸಲು ನಗರದ ರಂಗರಾಯರದೊಡ್ಡಿ ಕೆರೆಯ ಬಳಿಗೆ ತೆಗೆದುಕೊಂಡು ಹೋಗಲಾಗಿತ್ತು.

ಕೆರೆಯ ಬಳಿ ಆಗಮಿಸಿದ ಟ್ರಾಕ್ಟರಿನಲ್ಲಿ ಇದ್ದ ಯುವಕನ ಕೇಸರಿ ಟವಲ್ ಚಾಲನೆಯಲ್ಲಿದ್ದ ಜನರೇಟರ್‌ಗೆ ಸಿಲುಕಿಕೊಂಡಿದೆ. ಟವಲ್‍ನ ಜೊತೆ ಆತನ ಕೈ ಕೂಡ ಜನರೇಟರ್ ನ ಫ್ಯಾನ್ ಗೆ ಸಿಲುಕಿದ್ದು, ಅರ್ಧ ಕೈಕಟ್ ಆಗಿದೆ.

ಸದ್ಯ ಕೈ ಕಳೆದುಕೊಂಡ ಯುವಕ ನರೇಂದ್ರನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ರಾಮನಗರದ ಐಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments

Leave a Reply

Your email address will not be published. Required fields are marked *