ಅವಳನ್ನ ಕರ್ಕೊಂಡು ಹೋಗ್ತೀನಿ, ಇಲ್ಲಾಂದ್ರೆ ಶೂಟ್ ಮಾಡ್ಕೋತಿನಿ: ಪಾಗಲ್ ಪ್ರೇಮಿಯ ಹುಚ್ಚಾಟ

-ಸಂದರ್ಶನಕ್ಕೆ ತೆರಳಿದ್ದಾಗ ಚಿಗುರಿದ ಪ್ರೇಮ
-ಯುವತಿ ಪೋಷಕರಿಗೆ ಗನ್ ತೋರಿಸಿದ್ದ
-ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ

ರಾಯ್ಪುರ: ಪಾಗಲ್ ಪ್ರೇಮಿಯೊಬ್ಬ ಪೊಲೀಸರ ಮುಂದೆಯೇ ಗನ್ ಹಿಡಿದುಕೊಂಡು ರಂಪಾಟ ಮಾಡಿರುವ ಘಟನೆ ಛತ್ತೀಸಗಢ ರಾಜ್ಯದ ಜಾಂಜಗೀರ್ ಜಿಲ್ಲೆಯ ಕೈಥಾ ಗ್ರಾಮದಲ್ಲಿ ಶನಿವಾರ ತಡರಾತ್ರಿ ನಡೆದಿದೆ.

ಗೋಲು ಬನೋಲಿಯಾ ಗನ್ ಹಿಡಿದುಕೊಂಡು ಪ್ರೇಯಸಿಯನ್ನು ಕರೆದುಕೊಂಡು ಹೋಗಲು ಬಂದ ಯುವಕ. ಶನಿವಾರ ರಾತ್ರಿ ಪ್ರೇಯಸಿಯ ಕೈಥಾ ಗ್ರಾಮಕ್ಕೆ ಬಂದ ಗೋಲು, ಆಕೆಯ ಪೋಷಕರಿಗೆ ಗನ್ ತೋರಿಸಿದ್ದಾನೆ. ಯುವತಿಯನ್ನು ತನ್ನೊಂದಿಗೆ ಕಳುಹಿಸುವಂತೆ ಅವಾಜ್ ಹಾಕಿದ್ದಾನೆ. ಗಲಾಟೆ ಹೆಚ್ಚಾಗುತ್ತಿದ್ದಂತೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಯುವತಿಯೂ ಸಹ ಗೋಲು ಜೊತೆ ಹೊರಡಲು ಬ್ಯಾಗ್ ನೊಂದಿಗೆ ನಿಂತಿರೋದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ಯುವಕನನ್ನು ವಶಕ್ಕೆ ಪಡೆಯಲು ಮುಂದಾದಾಗ, ಆಕೆಯನ್ನ ನನ್ನ ಜೊತೆ ಕಳುಹಿಸಿ ಕೊಡಿ. ಇಲ್ಲವಾದ್ರೆ ಶೂಟ್ ಮಾಡ್ಕೊಳ್ಳುತ್ತೀನಿ ಎಂದಿದ್ದಾನೆ. ಪೊಲೀಸರು ನಿಧಾನವಾಗಿ ಯುವಕನ ಕೈಯಲ್ಲಿ ಗನ್ ಕಸಿದು ಆತನನ್ನ ವಶಕ್ಕೆ ಪಡೆದುಕೊಂಡಿದ್ದಾರೆ.

ಏನಿದು ಪ್ರಕರಣ?
ಗೋಲು ಮಧ್ಯಪ್ರದೇಶದ ಇಂದೋರನ ಮಹಾವೀರ್ ನಗರದ ನಿವಾಸಿ. ಕೆಲವು ದಿನಗಳ ಹಿಂದೆ ಜಬಲ್ಪುರನಲ್ಲಿ ಕೈಥಾ ಗ್ರಾಮದ ಯುವತಿಯನ್ನು ಗೋಲು ಭೇಟಿಯಾಗಿದ್ದನು. ಸಂದರ್ಶನಕ್ಕಾಗಿ ಬಂದ ವೇಳೆ ಇಬ್ಬರ ಪರಿಚಯವಾಗಿತ್ತು. ಸ್ನೇಹ ಕೆಲವೇ ದಿನಗಳಲ್ಲಿ ಪ್ರೇಮವಾಗಿ ಬದಲಾಗಿತ್ತು. ತದನಂತರ ಯಾರಿಗೂ ಮಾಹಿತಿ ನೀಡದೇ ಇಬ್ಬರು ರಿಜಿಸ್ಟರ್ ಮದುವೆ ಸಹ ಆಗಿದ್ದರು. ಪೋಷಕರಿಗೆ ಅಭ್ಯಾಸಕ್ಕಾಗಿ ರಾಯ್ಪುರದಲ್ಲಿದ್ದೇನೆಂದು ಹೇಳಿದ್ದ ಯುವತಿ ಜಬಲ್ಪುನಲ್ಲಿ ಗೋಲು ಜೊತೆಯಲ್ಲಿದ್ದಳು.

ಯುವತಿ ಮೇಲೆ ಅನುಮಾನಗೊಂಡು ಪೋಷಕರು ಆಕೆಯನ್ನು ಗ್ರಾಮಕ್ಕೆ ಕರೆತಂದಿದ್ದರು. ಹೀಗಾಗಿ ಯುವತಿಯನ್ನು ಕರೆಯಲು ಗೋಲು ಗ್ರಾಮಕ್ಕೆ ಆಗಮಿಸಿ ಕುಟುಂಬಸ್ಥರೊಂದಿಗೆ ಮಾತನಾಡಿದ್ದನು. ಕುಟುಂಬಸ್ಥರು ಯುವತಿಯನ್ನು ಕಳುಹಿಸಲು ಒಪ್ಪದಿದ್ದಾಗ ಅದೇ ದಿನ ರಾತ್ರಿ ಕೈಯಲ್ಲಿ ಗನ್ ಹಿಡಿದು ಬಂದಿದ್ದನು.

ಯುವಕ ಮತ್ತು ಯುವತಿಯನ್ನು ಠಾಣೆಗೆ ಕರೆದುಕೊಂಡು ಹೋಗಿ ಪೊಲೀಸರು ವಿಚಾರಣೆಗ ಒಳಪಡಿಸಿದಾಗ ಇಬ್ಬರು ಪ್ರೇಮ ಕಹಾನಿಯನ್ನು ಬಿಚ್ಚಿಟ್ಟಿದ್ದಾರೆ. ಮದುವೆ ಆಗಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಜೋಡಿ ವಿವಾಹಕ್ಕೆ ಸಂಬಂಧಿಸಿದ ದಾಖಲೆಗಳನ್ನು ನೀಡಿಲ್ಲ ಎಂದು ವರದಿಯಾಗಿದೆ.

Comments

Leave a Reply

Your email address will not be published. Required fields are marked *