ಯುವತಿಯನ್ನ ಚುಡಾಯಿಸಿದನೆಂದು ಯುವಕನಿಗೆ ಮಲ ತಿನ್ನಿಸಿ ಥಳಿಸಿದ್ರು!

ಭೋಪಾಲ್: ಯುವತಿಯನ್ನು ಚುಡಾಯಿಸಿದ್ದಾನೆ ಎಂದು ಆರೋಪಿಸಿ ಯುವತಿಯ ಮನೆಯವರು ಯುವಕನೋರ್ವನನ್ನು ಹಿಗ್ಗಾಮುಗ್ಗಾ ಥಳಿಸಿ ಮಲವನ್ನು ತಿನ್ನಿಸಿರುವ ಅಮಾನವೀಯ ಘಟನೆ ಮಧ್ಯಪ್ರದೇಶ ಶಿವಪುರ ಜಿಲ್ಲೆಯ ವಿನೇಗಾ ಎಂಬ ಗ್ರಾಮದಲ್ಲಿ ನಡೆದಿದೆ.

ವಿನೇಗಾ ಗ್ರಾಮದ ನಿವಾಸಿ ಕಲ್ಲು ದಾಕಡ್ ಹಲ್ಲೆಗೊಳಗಾದ ಯುವಕ. ಆದ್ರೆ ನಾನು ಯುವತಿಗೆ ಯಾವುದೇ ರೀತಿಯ ಕಿರುಕುಳ ನೀಡಿಲ್ಲ. ಅವಳು ಮತ್ತು ನಾನು ಪ್ರೀತಿಸುತ್ತಿದ್ದೆವು. ಆದ್ರೆ ಯುವತಿಯ ಮನೆಯವರು ಆಕೆಯನ್ನ ಬೇರೆ ಕಡೆ ಮದುವೆ ಮಾಡಿಕೊಡಬೇಕೆಂದಿದ್ದರು ಎಂದು ಕಲ್ಲು ದಾಕಡ್ ಹೇಳಿದ್ದಾರೆ.

ಯುವತಿ ನನಗೆ ತೋಟದ ಮನೆಯ ಹತ್ತಿರ ಬರಲು ಹೇಳಿದ್ದಳು. ಅಂತೆಯೇ ನಾನು ಸಹ ಆಕೆಯನ್ನು ಭೇಟಿಯಾಗಲು ಹೋಗಿದ್ದೆ. ಈ ವೇಳೆ ನಮ್ಮಿಬ್ಬರನ್ನು ನೋಡಿದ ಯುವತಿಯ ಸಹೋದರ ಮನೆಯಲ್ಲಿ ವಿಷಯ ತಿಳಿಸಿದ್ದಾನೆ. ನಂತರ ಈ ಘಟನೆ ನಡೆಯಿತು ಎಂದು ಕಲ್ಲು ದಾಕಡಾ ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಅಧಿಕಾರಿ ಸತನ್‍ವಾಡ್ ಜೈ ಸಿಂಗ್, ದಾಕಡ್ ಮತ್ತು ಯುವತಿ ಅಕ್ಕಪಕ್ಕದ ನೆರೆಹೊರೆಯವರು. ದಾಕಡ್ ತುಂಬಾ ದಿನಗಳಿಂದ ಯುವತಿಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಪೋಷಕರು ಪೊಲೀಸರಿಗೆ ಹೇಳಿದ್ದಾರೆ. ಗುರುವಾರದಂದು ದಾಕಡ್ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ಆತನ ವಿರುದ್ಧ ಪ್ರಕರಣ ದಖಲಾಗಿದೆ. ಯುವಕನಿಗೆ ಮಲ ತಿನ್ನಿಸಿ ಥಳಿಸಿರುವ ವಿಡಿಯೋ ವೈರಲ್ ಆದ ಬಳಿಕ ಹುಡುಗಿಯ ಪೋಷಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

https://www.facebook.com/cnnnews18/videos/10156426453619202/

Comments

Leave a Reply

Your email address will not be published. Required fields are marked *