ಮದ್ವೆಯಾಗೋದಾಗಿ ನಂಬಿಸಿ ಮಗು ಕೊಟ್ಟು ಪರಾರಿ – ನ್ಯಾಯಕ್ಕಾಗಿ ಯುವತಿ ಪ್ರತಿಭಟನೆ

ಮೈಸೂರು: ಮದುವೆಯಾಗುವುದಾಗಿ ನಂಬಿಸಿ ಪ್ರಿಯತಮೆಗೆ ಮಗು ಕರುಣಿಸಿ ಪ್ರಿಯತಮ ಪರಾರಿಯಾದ ಘಟನೆ ನಂಜನಗೂಡು ತಾಲೂಕಿನ ಅಳಗಂಚಿಪುರ ಗ್ರಾಮದಲ್ಲಿ ನಡೆದಿದೆ.

ಅಳಗಂಚಿಪುರ ಗ್ರಾಮದ ಯುವತಿ ವಂಚನೆಗೆ ಒಳಗಾದ ಪ್ರಿಯತಮೆ. ಅದೇ ಗ್ರಾಮದ ಸಂಜಯ್ (20)ವಂಚಿಸಿ ಪರಾರಿಯಾದ ಪ್ರಿಯತಮ. ಈಗ ಯುವತಿ ನ್ಯಾಯಕ್ಕಾಗಿ ಮಗು ಸಮೇತ ಪ್ರಿಯತಮನ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

ನಂಜನಗೂಡಿನ ಡಿಪ್ಲೋಮಾ ಕಾಲೇಜಿನಲ್ಲಿ ಯುವತಿ ಓದುತ್ತಿದ್ದಳು. ಆಗ ಪದವಿ ಕಾಲೇಜಿನ ವಿದ್ಯಾರ್ಥಿ ಸಂಜಯ್ ಪ್ರೀತಿಸುವ ನಾಟಕವಾಡಿ ಕಳೆದ ಒಂದು ವರ್ಷದಿಂದ ಸುತ್ತಾಡಿಸಿದ್ದನು. ಬಳಿಕ ಮದುವೆಯಾಗುವ ಭರವಸೆ ಕೊಟ್ಟು ದೈಹಿಕ ಸಂಪರ್ಕ ಬೆಳೆಸಿ ಮಗುವಿಗೆ ಕಾರಣನಾಗಿದ್ದಾನೆ. ಈಗ ಯುವತಿಗೆ ಮಗು ಹುಟ್ಟುತ್ತಿದ್ದಂತೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾನೆ.

ಯುವತಿ ಜೊತೆ ಮನೆಯವರನ್ನೂ ನಂಬಿಸಿದ ಸಂಜಯ್ ಈಗ ಮಗುವನ್ನ ಕರುಣಿಸಿ ಎಸ್ಕೇಪ್ ಆಗಿದ್ದಾನೆ. ವಂಚನೆಗೆ ಒಳಗಾದ ಯುವತಿ ನ್ಯಾಯಕ್ಕಾಗಿ ಸಂಜಯ್ ಮನೆ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾಳೆ.

Comments

Leave a Reply

Your email address will not be published. Required fields are marked *