– ಸಾವು ಮುಚ್ಚಿ ಹಾಕಲು ಯತ್ನಿಸಿದ ಜನ
ಹಾವೇರಿ: ಉತ್ತರ ಕರ್ನಾಟಕದಲ್ಲಿ ಜಾನಪದ ಕ್ರೀಡೆ ಅಂದ್ರೆ ಅದು ಹೋರಿ ಓಡಿಸುವ ಸ್ಪರ್ದೆ. ತಮಿಳುನಾಡಿನಲ್ಲಿ ನಡೆಯುವ ಜಲ್ಲಿಕಟ್ಟು ಸ್ಪರ್ಧೆಯನ್ನ ಮೀರಿಸುವಂತೆ ನಮ್ಮ ರಾಜ್ಯದಲ್ಲಿ ಹೋರಿ ಬೆದರಿಸವು ಸ್ಪರ್ಧೆಯನ್ನ ಆಯೋಜನೆ ಮಾಡಲಾಗುತ್ತದೆ. ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕು ಮಾಸಣಗಿ ಗ್ರಾಮದಲ್ಲಿ ನಡೆದ ರಾಜ್ಯಮಟ್ಟದ ಹೋರಿ ಬೆದರಿಸುವ ಸ್ಪರ್ಧೆ ಆಯೋಜನೆ ಮಾಡಲಾಗಿತ್ತು. ಸ್ಪರ್ಧೆಯನ್ನ ನೋಡಲು ಬಂದ ಯುವಕನಿಗೆ ಹೋರಿ ತಿವಿದ್ದರಿಂದ ಓರ್ವ ಸಾವನ್ನಪ್ಪಿದ್ದಾನೆ.
ಮೃತ ಯುವಕನನ್ನ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕು ಮಳವಳ್ಳಿ ಗ್ರಾಮದ ನಿವಾಸಿ 19 ವರ್ಷದ ಅರುಣ್ ಎಂದು ಗುರುತಿಸಲಾಗಿದೆ. ಅರುಣ್ ಹಿರೇಕೆರೂರು ತಾಲೂಕಿನ ಹಂಸಬಾವಿ ಗ್ರಾಮದಲ್ಲಿ ಬಿ.ಎಸ್ಸಿ ಪ್ರಥಮ ವರ್ಷ ವಿದ್ಯಾಬ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಮಾಸಣಗಿ ಗ್ರಾಮದಲ್ಲಿ ಹೋರಿ ಬೆದರಿಸುವ ಸ್ಪರ್ಧೆಯನ್ನ ವೀಕ್ಷಣೆ ಮಾಡಲು ಬಂದಿದ್ದ. ಅರುಣ್ ಅಖಾಡದಲ್ಲಿ ನಿಂತಿದ್ದ. ಆ ವೇಳೆಯಲ್ಲಿ ಹೋರಿ ಅಡ್ಡಾ-ದಿಡ್ಡಿಯಾಗಿ ಓಡಿ ಬಂದು ಯುವಕನಿಗೆ ಕೊಂಬಿನಿಂದ ಬಲವಾಗಿ ತಿವಿದಿದೆ. ಬಲವಾಗಿ ತಿವಿದ ದೃಶ್ಯ ಮೊಬೈಲ್ ಕ್ಯಾಮೆರದಲ್ಲಿ ಸೆರೆಯಾಗಿದೆ.

ಕೊಬ್ಬರಿ ಹೋರಿಗಳನ್ನ ಸ್ಪರ್ಧೆಗಾಗಿ ಭರ್ಜರಿ ತಯಾರಿ ಮಾಡಿರುತ್ತಾರೆ. ಎತ್ತಿನ ಮಾಲೀಕ ಸ್ಪರ್ದೆಯಲ್ಲಿ ಭಾಗವಹಿಸೋ ಎತ್ತುಗಳನ್ನ ಕಟ್ಟು ಮಸ್ತಾಗಿ ಜನರ ಕೈಗೆ ಸಿಗದಂತೆ ಓಡುವ ಬಗ್ಗೆ ತರಬೇತಿ ನೀಡಿರುತ್ತಾರೆ. ಎತ್ತುಗಳನ್ನ ಹಿಡಿಯಲು ಪ್ರಯತ್ನಿಸೋ ವೇಳೆ ಎತ್ತು ಯಾರ ಕೈಗೂ ಸಿಗದಂತೆ ಓಡುವಾಗ ಕೆಲ ಸಣ್ಣಪುಟ್ಟ ಅವಾಂತರಗಳು ಸಂಭವಿಸುತ್ತವೆ. ಮಾಸಣಗಿ ಗ್ರಾಮದಲ್ಲಿ ಪ್ರಾರಂಭವಾದ ಸ್ಪರ್ಧೆಯಲ್ಲಿ ಸಣ್ಣಪುಟ್ಟ ಘಟನೆಗಳು ನಡೆದಿದ್ದವು. ಸಂಜೆ ವೇಳೆ ವೇಳೆ ಹೋರಿ ಬೆದರಿಸುವ ಸ್ಪರ್ಧೆ ರಂಗು ಪಡೆದಿತ್ತು. ಅಖಾಡದಲ್ಲಿ ಓಡಿ ಬಂದ ಹೋರಿ ಕೊಂಬಿನಿಂದ ತಿವಿದ್ದರಿಂದ ಯುವಕನ ಪ್ರಾಣಪಕ್ಷಿ ಹಾರಿ ಹೋಗಿದೆ.

ಇಂತಹ ಘಟನೆಗಳು ನಡೆಯಬಾರದು ಅನ್ನೋ ಉದ್ದೇಶಕ್ಕಾಗಿ ಜಿಲ್ಲಾಡಳಿತ ಈ ಸ್ಪರ್ಧೆಗಳಿಗೆ ಅನುಮತಿ ನೀಡಿರುವುದಿಲ್ಲ. ಜಾನಪದ ಕ್ರೀಡೆಯ ಅಭಿಮಾನಕ್ಕಾಗಿ ಗ್ರಾಮಸ್ಥರು ಹಾಗೂ ಯುವಕರು ಸ್ಪರ್ಧೆಯನ್ನ ಆಯೋಜನೆ ಮಾಡಿದ್ದರು. ಯುವಕ ಅರುಣ್ ಮೃತಪಟ್ಟ ವಿಷಯ ಮುಚ್ಚಿ ಹಾಕುವ ಪ್ರಯತ್ನ ಕೂಡಾ ನಡೆದಿದೆ. ಹೋರಿ ಬೆದರಿಸುವ ಸ್ಪರ್ಧೆಗೆ ಜಿಲ್ಲಾಡಳಿತ ಅನುಮತಿ ಹಾಗೂ ಕಟ್ಟುನಿಟ್ಟಿನ ಕ್ರಮಗಳನ್ನ ತೆಗೆದುಕೊಂಡರೆ ಮಾತ್ರ ಸಾವು-ನೋವುಗಳನ್ನ ತಪ್ಪಿಸಬಹುದಾಗಿದೆ..
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply