15ರ ಹುಡುಗಿ ಮದುವೆ ಆಗಲು ನಿರಾಕರಿಸಿದ್ದಕ್ಕೆ 19ರ ಹುಡುಗ ವಿದ್ಯುತ್ ಟವರ್ ಏರಿ ಕುಳಿತ

ಚೆನ್ನೈ: ಗೆಳತಿಯೊಬ್ಬಳು ಮದುವೆ ಆಗಲು ನಿರಾಕರಿಸಿದ್ದಕ್ಕೆ ಯುವಕನೊಬ್ಬ ಹೈವೋಲ್ಟೇಜ್‌ ವಿದ್ಯುತ್ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿದ ಘಟನೆ ಚೆನ್ನೈನ ಕ್ರೋಮ್‍ಪೇಟ್‍ನಲ್ಲಿ ನಡೆದಿದೆ.

ಕ್ರೋಂಪೇಟೆಯ ರಾಧಾ ನಗರದ ನಿವಾಸಿಯಾದ ಕೃಷ್ಣ(19) ಪೇಂಟರ್ ಆಗಿ ಕೆಲಸ ಮಾಡುತ್ತಿದ್ದಾನೆ. ಆತ ತನ್ನ ಪ್ರದೇಶದ 15 ವರ್ಷದ ಹುಡುಗಿಯನ್ನು ಪ್ರೀತಿ ಮಾಡಿದ್ದಾನೆ. ಆ ನಂತರ ಆತ ಅವಳ ಬಳಿ ಮದುವೆ ಪ್ರಸ್ತಾಪವನ್ನು ಇಟ್ಟಿದ್ದ. ಆದರೆ ಆಕೆ ನಿರಾಕರಿಸಿದ್ದಾಳೆ.

ಆಕೆಯ ಮನವೊಲಿಸಲು ಹಲವಾರು ಪ್ರಯತ್ನಗಳನ್ನು ಮಾಡಿದ್ದಾನೆ. ಆದರೆ ಎಲ್ಲಾ ಪ್ರಯತ್ನಗಳು ವಿಫಲವಾದ ಹಿನ್ನೆಲೆಯಲ್ಲಿ ಆತ 80 ಅಡಿ ಎತ್ತರದ ದುರ್ಗಾನಗರದ ವಿದ್ಯುತ್ ಟವರ್‌ನ ಮೇಲೆ ಹತ್ತಿ ಪ್ರತಿಭಟನೆ ನಡೆಸಿದನು. ಇದನ್ನೂ ಓದಿ: ಇಂಡಿಯಾನಾದ ಮಾಲ್‍ನಲ್ಲಿ ಗುಂಡಿನ ದಾಳಿ- ಮೂವರು ಸಾವು

ಘಟನೆ ಸಂಬಂಧಿಸಿ ಪೊಲೀಸರು, ಅಗ್ನಿಶಾಮಕ ಇಲಾಖೆ ಹಾಗೂ ರಕ್ಷಣಾ ತಂಡದವರು ಬಂದು ಶಾಂತಿ ಮಾತುಕತೆ ನಡೆಸುವುದಾಗಿ ಭರವಸೆ ನೀಡಿದರು. ಆದರೂ ಆತ ಕೆಳಗೆ ಇಳಿಯಲು ಒಪ್ಪಿರಲಿಲ್ಲ. ನಂತರ ಆಕೆಯನ್ನು ಸ್ಥಳಕ್ಕೆ ಕರೆದುಕೊಂಡು ಬಂದು ಮದುವೆಯಾಗುವುದಾಗಿ ಭರವಸೆ ನೀಡಿದ ನಂತರ ಆತ ಕೆಳಗೆ ಇಳಿದಿದ್ದಾನೆ.

ಘಟನೆ ಸಂಬಂಧಿಸಿ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ. ಈತನ ಕಾರಣದಿಂದಾಗಿ ವಿದ್ಯುತ್ ಸರಬರಾಜು ನಿಗಮದಿಮದ ಕೆಲಕಾಲ ವಿದ್ಯುತ್ ಅನ್ನು ಸ್ಥಗಿತಗೊಳಿಸಲಾಗಿತ್ತು. ತಾಂಬರಂ ಸ್ಯಾನಿಟೋರಿಯಂ ಪ್ರದೇಶದಲ್ಲಿನ ಹೈವೋಲ್ಟೇಜ್‌ ವಿದ್ಯುತ್‌ ಟ್ರಾನ್ಸ್‌ಮಿಷನ್ ಟವರ್ ಮೇಲೆ ಹತ್ತಿದ್ದರಿಂದ ಉಪನಗರ ರೈಲು ಸೇವೆಗಳನ್ನು ಅಡ್ಡಿಯಾಗಿತ್ತು. ಇದನ್ನೂ ಓದಿ: ತಂದೆ ಎದುರೇ ಮಗುವನ್ನು ಟೆರೇಸ್ ಮೇಲಿಂದ ಕೆಳಗೆಸೆದ ಕೋತಿ ಗ್ಯಾಂಗ್ – ಹಸುಗೂಸು ಸಾವು

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *