ಫೇಸ್‍ಬುಕ್ ನಿಂದ ಆದ ಪರಿಚಯ ಮಂಚದವರೆಗೆ – ಈಗ ಪ್ರಿಯಕರನ ವಿರುದ್ಧ ಕೇಸ್

ಬೆಂಗಳೂರು: ಯುವಕನೊಬ್ಬ ಪ್ರೀತಿಯ ನಾಟಕವಾಡಿ ಯುವತಿಗೆ ಮೋಸ ಮಾಡಿದ್ದು, ಈಗ ನೊಂದ ಯುವತಿ ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

ಮೂಲತಃ ಆಂಧ್ರದ ಕರ್ನೂಲಿನ ನಿವಾಸಿ ನರೇಶ್ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾನೆ. ಸಂತ್ರಸ್ತೆಗೂ ಈತನಿಗೂ ಫೇಸ್‍ಬುಕ್ ನಲ್ಲಿ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಬಳಿಕ ಇಬ್ಬರು ಒಬ್ಬೊರನೊಬ್ಬರು ಪ್ರೀತಿಸಲು ಆರಂಭಿಸಿದ್ದರು. ಆದರೆ ಈಗ ಆತ ಮದುವೆಯಾಗುವುದಿಲ್ಲ ಎಂದು ಸಂತ್ರಸ್ತೆಗೆ ಮೋಸ ಮಾಡಿದ್ದಾನೆ. ಆದ್ದರಿಂದ ನೊಂದ ಯುವತಿ ನರೇಶ್ ವಿರುದ್ಧ ದೂರು ದಾಖಲಿಸಿದ್ದಾರೆ.

ದೂರಿನಲ್ಲಿ ಏನಿದೆ?:
ಒಂದು ದಿನ ಜೆಪಿ ಪಾರ್ಕ್‍ನಲ್ಲಿ ನಾವಿಬ್ಬರು ಭೇಟಿಯಾಗಿದ್ದೇವು. ಆಗ ಆರೋಪಿ ನರೇಶ್ ನನ್ನನ್ನು ಮದುವೆಯಾಗುವುದಾಗಿ ನಂಬಿಸಿದ್ದನು. ನಂತರ ಮೈಸೂರು, ವಿಜಯವಾಡ, ವೈಸಾಕ್, ಅನಂತಪುರ ಮತ್ತು ಅದೋನಿ ಮುಂತಾದ ಕಡೆ ಕರೆದುಕೊಂಡು ಸುತ್ತಾಡಿಸಿದ್ದಾನೆ. ಲಾಡ್ಜ್ ಬುಕ್ ಮಾಡಿ ನನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ನಂತರ ಕರ್ನೂಲಿನ ತನ್ನ ಮನೆಗೆ ಕರೆದುಕೊಂಡು ಹೋಗಿ ಪೋಷಕರಿಗೆ ಪರಿಚಯ ಮಾಡಿಸಿದ್ದನು. ಅವರೂ ಸಹ ಮದುವೆ ಮಾಡುವುದಾಗಿ ಹೇಳಿದ್ದರು. ಆದರೆ ಈಗ ಬೇರೆ ಜಾತಿ ಎಂದು ಮದುವೆಗೆ ನಿರಾಕರಿಸಿದ್ದಾರೆ. ಅಷ್ಟೇ ಅಲ್ಲದೇ ನರೇಶ್‍ಗೆ ಬೇರೆ ಹುಡುಗಿ ಜೊತೆ ಮದುವೆ ಮಾಡಲು ನಿಶ್ಚಯ ಮಾಡಿದ್ದಾರೆ. ಅವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ನೊಂದ ಯುವತಿ ಉಲ್ಲೇಖಿಸಿದ್ದಾರೆ.

ಈ ಘಟನೆ ಸಂಬಂಧ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 376, 417 ಮತ್ತು ಜಾತಿನಿಂದನೆ ಕೇಸನ್ನು ದಾಖಲಿಸಲಾಗಿದೆ.

Comments

Leave a Reply

Your email address will not be published. Required fields are marked *