ಮೀಸೆ ಮೂಡದ ಹುಡುಗನಿಗೆ ಆಂಟಿಯರ ಆಸೆ – ತುಮಕೂರಲ್ಲಿ ಸಿಕ್ಕಿಬಿದ್ದ ಕಾಮುಕ ಯುವಕ

ತುಮಕೂರು: ಹಣದ ಆಸೆ ತೋರಿಸಿ ಆಂಟಿಯರ ಮುಂದೆ ಶೋಕಿ ಮಾಡಿ ಅವರನ್ನು ತನ್ನ ಬಲೆಗೆ ಬೀಳಿಸಿಕೊಂಡು ವಂಚಿಸುತ್ತಿದ್ದ ಯುವಕನನ್ನು ಸ್ಥಳೀಯರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತುಮಕೂರಿನ ನಜರಾಬಾದ್ ನಿವಾಸಿ ಇಮ್ರಾನ್ (20) ಬಂಧಿತ ಕಾಮುಕ. ಇವನು ಕಲರ್ ಕಲರ್ ಡ್ರೆಸ್ ಹಾಕಿಕೊಂಡು ದಿನಕ್ಕೊಂದು ಬೈಕಲ್ಲಿ ಸುತ್ತಾಡುತ್ತಾ ವಿವಾಹಿತ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದನು. ಮಹಿಳೆಯರಿಗೆ ದುಡ್ಡಿನ ಆಸೆ ತೋರಿಸಿ ಅವರೊಂದಿಗೆ ಲವ್ವಿಡವ್ವಿ ಶುರು ಮಾಡಿಕೊಳ್ಳುತ್ತಿದ್ದನು.

ಗಂಡನ ಬಿಟ್ಟು ಬಿಡು, ನಾನೇ ನಿನ್ನ ಮದುವೆ ಆಗ್ತೀನಿ ಅಂತಾ ಬಣ್ಣದ ಮಾತುಗಳಿಂದ ಮರಳು ಮಾಡುತ್ತಿದ್ದನು. ಐದೋ ಆರೋ ತಿಂಗಳು ತನ್ನ ಜೊತೆ ಇರಿಸಿಂಡು ಆಸೆ ತೀರಿದ ಬಳಿಕ ಆ ಮಹಿಳೆಯರಿಗೆ ಕೈ ಕೊಡುತ್ತಿದ್ದನು.

ಮೊದಲು ಇಮ್ತಿಯಾಜ್ ಪಾಷಾ ಎಂಬವರ ಪತ್ನಿಯನ್ನು ತನ್ನ ಬಣ್ಣದ ಮಾತುಗಳಿಂದ ಬಲೆಗ ಹಾಕಿಕೊಂಡಿದ್ದನು. ಈತನ ಮಾತುಗಳಿಗೆ ಮರುಳಾದ ಇಮ್ತಿಯಾಜ್ ಪತ್ನಿ ತನ್ನ ಎರಡು ವರ್ಷದ ಮಗು ಬಿಟ್ಟು ಇಮ್ರಾನ್ ಜೊತೆ ಪರಾರಿಯಾಗಿದ್ದರು. ಸುಮಾರು ನಾಲ್ಕು ತಿಂಗಳು ತನ್ನ ಜತೆ ಇರಿಸಿಕೊಂಡ ಇಮ್ರಾನ್ ಆಸೆ ತೀರಿದ ನಂತರ ಮಹಿಳೆಯನ್ನು ನಡು ನೀರಿನಲ್ಲಿ ಕೈ ಬಿಟ್ಟಿದ್ದಾನೆ. ಇದೇ ನಜಾರಾಬಾದ್‍ನ ಅಸಹಾಯಕ ಜಬೀವುಲ್ಲಾ ಅವರ ಪತ್ನಿ ಮೇಲೂ ಕಣ್ಣುಹಾಕಿದ್ದಾನೆ.

ಬಡ್ಡಿ ವ್ಯವಹಾರ ನಡೆಸುವ ಈತನ ತಂದೆ ತಾಯಿ ಆರ್ಥಿಕವಾಗಿ ಸ್ಥಿತಿವಂತರಾಗಿದ್ದಾರೆ. ಕಾಲೇಜು ಶಿಕ್ಷಣ ಅರ್ಧಕ್ಕೆ ನಿಲ್ಲಿಸಿ ಪೋಲಿಯಾಟ ಮಾಡಿಕೊಂಡು ಹೆಂಗಸರಿಗೆ ವಂಚಿಸ್ತಿದ್ದ ಇಮ್ರಾನನ್ನ ಜನರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *