ಲಿಮ್ಕಾ ದಾಖಲೆ ಸೇರಿದ ನೀಳ ಕೇಶದ ಯುವತಿ

Akanksha Yadav

ಮುಂಬೈ: ಮಹಾರಾಷ್ಟ್ರ ಮೂಲದ ಯುವತಿಯೊಬ್ಬರು 9 ಅಡಿ ಉದ್ದ 10.5 ಇಂಚು ಕೂದಲನ್ನು ಹೊಂದುವ ಮೂಲಕ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ 2020-2022 ಮತ್ತು ಇಂಡಿಯಾ ಬುಕ್ ಆಫ್ ರೆಕಾಡ್ಸ್‍ನಲ್ಲಿ ಸ್ಥಾನ ಗಳಿಸಿದ್ದಾರೆ.

ಮಹಾರಾಷ್ಟ್ರ ಥಾಣೆಯ ಆಕಾಂಕ್ಷಾ ಯಾದವ್ ಉದ್ದ ಕೂದಲನ್ನು ಹೊಂದಿರುವವರಾಗಿದ್ದಾರೆ. 2019ರಿಂದಲೂ ಅವರು ದೇಶದಲ್ಲಿ ದಾಖಲೆ ಹೊಂದಿದ್ದಾರೆ. ಈ ಸುಂದರವಾದ ಕೂದಲನ್ನು ಹೊಂದಿರುವುದು ವರ ಎಂದು ಆಕಾಂಕ್ಷಾ ಹೇಳಿರುವುದಾಗಿ ಲಿಮ್ಕಾ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ 2020-2022ರ ಅಧಿಕೃತ ಪತ್ರದಲ್ಲಿ ಬರೆಯಲಾಗಿದೆ. ಇದನ್ನೂ ಓದಿ: ಬಾಯಿಗೆ ಬಂದಂತೆ ಮಾತನಾಡಲು ಜನರು ನಮ್ಮನ್ನು ಆಯ್ಕೆ ಮಾಡಿಲ್ಲ: ಹಾಲಪ್ಪ

ರಾಷ್ಟ್ರ ಪ್ರಶಸ್ತಿಯನ್ನು ಗೆಲ್ಲುವುದು ಸಾಮಾನ್ಯ ಅಲ್ಲ. ಅದೊಂದು ಮಹತ್ವದ ವಿಚಾರವಾಗಿದೆ. ದಾಖಲೆಗಳು ಅದ್ಭುತ ಎನಿಸಿದೆ. ಆದರೆ ಪ್ರಮಾಣ, ಕೊಡುಗೆ ಮತ್ತು ಉತ್ಸಾಹ ಹೆಚ್ಚಾಗಿದೆ ಎಂದು ಯಾದವ್ ಹೇಳಿದ್ದಾರೆ. ಇದನ್ನೂ ಓದಿ:  ಹಿರಿಯ ನಟ ಸತ್ಯಜಿತ್ ಆರೋಗ್ಯ ಮತ್ತಷ್ಟು ಕ್ಷೀಣ

ಇದೇ ವೇಳೆ ನಿಮ್ಮ ಉದ್ದ ಕೂದಲನ್ನು ಹೇಗೆ ನೋಡಿಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ನಾನು ಪ್ರತಿದಿನ ಕೂದಲನ್ನು ತೊಳೆಯಲು 20 ನಿಮಿಷಕ್ಕೂ ಹೆಚ್ಚು ಸಮಯ ಕಳೆಯುತ್ತೇನೆ. ಅದಕ್ಕಿಂತ ಹೆಚ್ಚು ಸಮಯ ಕಳೆಯುವುದಿಲ್ಲ ಎಂದಿದ್ದಾರೆ.

ಪ್ರಸ್ತುತ ಚೀನಾದ ಕ್ಸಿ ಕ್ಯೂಪಿಂಗ್ ಗಿನ್ನೆಸ್ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ಅತೀ ಉದ್ದದ ಕೂದಲನ್ನು ಹೊಂದಿರುವವರಾಗಿದ್ದಾರೆ. ಅವರು 2004ರಿಂದಲೂ ಗೆನ್ನೆಸ್ ರೆಕಾರ್ಡ್ ಹೊಂದಿದ್ದಾರೆ. ವರ್ಲ್ಡ್ ರೆಕಾರ್ಡ್ಸ್ ಕೂಡ ವಿಶ್ವದ ಅತ್ಯಂತ ಉದ್ದ ಕೂದಲನ್ನು ಹೊಂದಿದವರಾಗಿದ್ದಾರೆ. ಅವರ ಕೂದಲು 18 ಅಡಿ ಉದ್ದ ಮತ್ತು 5 ಇಂಚು ಇದೆ. ಇದನ್ನೂ ಓದಿ:  ಬಟ್ಟೆ ಒಗೆಯುವುದನ್ನು ಹೇಳಿಕೊಡುತ್ತೆ ಚಿಂಪಾಂಜಿ- ವೀಡಿಯೋ ವೈರಲ್

Comments

Leave a Reply

Your email address will not be published. Required fields are marked *