ದೇಶ ಸುತ್ತು, ಕೋಶ ಓದು ಗಾದೆ ಮರೆತು ಯುವಜನತೆ ಡಿಜಿಟಲ್ ಯುಗಕ್ಕೆ ಬದಲಾಗುತ್ತಿದೆ: ಬಿ.ವೈ.ರಾಘವೇಂದ್ರ

ಶಿವಮೊಗ್ಗ : ಇತ್ತೀಚಿನ ದಿನದಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಯುವಜನತೆ ಡಿಜಿಟಲ್ ಯುಗಕ್ಕೆ ಬದಲಾಗುತ್ತಿದ್ದಾರೆ. ದೇಶ ಸುತ್ತು, ಕೋಶ ಓದು ಎನ್ನುವ ಗಾದೆಯಂತೆ ನಾವು ಒಂದು ಪುಸ್ತಕವನ್ನು ಓದಿದಾಗ ನಮಗೆ ಸಿಗುವ ಜ್ಞಾನವು, ಏಕಾಗ್ರತೆ ಹೆಚ್ಚಿಸುತ್ತದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅಭಿಪ್ರಾಯಪಟ್ಟಿದ್ದಾರೆ.

ಶಿವಮೊಗ್ಗ ನಗರದ ಕರ್ನಾಟಕ ಸಂಘದಲ್ಲಿ ರಾಷ್ಟ್ರೋತ್ಥಾನ ಬಳಗದ ವತಿಯಿಂದ ಆಯೋಜಿಸಿದ್ದ 2 ದಿನದ ಕನ್ನಡ ಪುಸ್ತಕಹಬ್ಬ, ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪುಸ್ತಕ ಓದುವುದರಿಂದ ಸಿಗುವ ಅನುಭವ, ಆನ್‍ಲೈನ್‍ನಲ್ಲಿ ನಮಗೆ ಸಿಗುವುದಿಲ್ಲ. ಆದ್ದರಿಂದ ಹೆಚ್ಚಿನ ಕನ್ನಡ ಪುಸ್ತಕವನ್ನು ಓದುವ ಅಭ್ಯಾಸ ಬೆಳೆಸಿಕೊಂಡರೆ, ಪ್ರಕಾಶಕರಿಗೂ ಕೂಡ ಸಹಾಯವಾದಂತೆ ಆಗುತ್ತದೆ ಎಂದರು. ಇದನ್ನೂ ಓದಿ: ರಾಜ್ಯದ ಗಡಿಯಲ್ಲಿ ಗಜಪಡೆ ಮಾಸ್ ಎಂಟ್ರಿ – ಕಾಡಾನೆ ನೋಡಲು ನೂಕುನುಗ್ಗಲು

ರಾಷ್ಟ್ರೋತ್ಥಾನ ಸಂಸ್ಥೆಯು ಹಲವು ವರ್ಷಗಳಿಂದ ಕನ್ನಡದ ಸಾಹಿತ್ಯ ಲೋಕಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಿದೆ. ರಾಷ್ಟ್ರೀಯ ವಿಚಾರಧಾರೆ ಹಾಗೂ ವಿವಿಧ ಆಯಾಮದ ಕೃತಿಗಳು ರಿಯಾಯಿತಿ ದರದಲ್ಲಿ ಈ ಪುಸ್ತಕ ಹಬ್ಬವು ನಡೆಯುತ್ತಿದೆ. ಸಾರ್ವಜನಿಕರು ಮತ್ತು ಪುಸ್ತಕ ಪ್ರೇಮಿಗಳು ಇದರ ಸದುಪಯೋಗವನ್ನು ಪಡೆಯಬೇಕು ಎಂದು ಕರೆ ನೀಡಿದರು. ಇದನ್ನೂ ಓದಿ: ಶಿಕ್ಷಕನ ಕಾಲಿಗೆ ಬಿದ್ದು ತಪ್ಪಾಯ್ತು ಕ್ಷಮಿಸಿ ಎಂದ ವಿದ್ಯಾರ್ಥಿಗಳು

Comments

Leave a Reply

Your email address will not be published. Required fields are marked *