ಪ್ರೇಮ ವೈಫಲ್ಯ ಮನನೊಂದ ಯುವಕ ಆತ್ಮಹತ್ಯೆ ಶಂಕೆ

sucide

-ದಸರಾ ಹಬ್ಬದಂದು ಹೋದವನು ಶವಗಾಗಿ ಪತ್ತೆ

ಚಿಕ್ಕಬಳ್ಳಾಪುರ: ವಿಜಯದಶಮಿ ದಿನ ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದ ಯುವಕ ಅನುಮಾನಸ್ಪದ ರೀತಿಯಲ್ಲಿ ಗ್ರಾಮದ ನೀರಿನ ಕಟ್ಟೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಸೂಲುಕುಂಟೆಯಲ್ಲಿ ನಡೆದಿದೆ.

sucide

ಆನಂದ್(23) ಮೃತ ದುರ್ದೈವಿ. ಹಬ್ಬದ ದಿನ ತಾಯಿ ಮಗಳ ಮನೆಗೆ ಹಬ್ಬಕ್ಕೆ ಹೋಗಿದ್ದು, ಆನಂದ್ ಬೆಂಗಳೂರಿನಲ್ಲಿರುವ ಸ್ನೇಹಿತರ ಮನೆಗೆ ಹೋಗಿ ಬರುವುದಾಗಿ ಹೇಳಿದ್ದಾನೆ. ಹಬ್ಬ ಮುಗಿಸಿ ಮಗಳ ಮನೆಯಿಂದ ತಾಯಿ ಹಿಂದಿರುಗಿದರೂ, ಮಗ ಮನೆಗೆ ವಾಪಾಸ್ ಬಂದಿರಲಿಲ್ಲ. ಹೀಗಾಗಿ ಮಗನಿಗಾಗಿ ಹುಡುಕಾಟ ನಡೆಸಿದರು. ಆದರೆ ಮಗ ಆನಂದ್ ಶವ ಗ್ರಾಮದ ಕುಂಟೆಯಲ್ಲಿ ತೇಲಿಬಂದಿದ್ದು, ಮೃತ ದೇಹ ಕಂಡು ತಾಯಿ ಅಘಾತಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಿಎಂ

ಆನಂದ್ ಒರ್ವ ಯುವತಿಯನ್ನು ಪ್ರೀತಿಸುತ್ತಿದ್ದು, ಇದೇ ಯುವತಿಯನ್ನು ಮತ್ತೋರ್ವ ಯುವಕ ಸಹ ಪ್ರೀತಿ ಮಾಡುತ್ತಿದ್ದ ಎನ್ನಲಾಗಿದ್ದು, ಅವರಿಬ್ಬರಿಗೂ ಮದುವೆ ನಿಶ್ಚಯದ ಮಾತುಕತೆ ನಡೆದಿದೆಯಂತೆ. ಹೀಗಾಗಿ ಪ್ರೇಮ ವೈಫಲ್ಯದಿಂದ ಮನ ನೊಂದು ಆತ್ಮಹತ್ಯೆಗೆ ಶರಣಾಗಿರುವ ಅನುಮಾನ ವ್ಯಕ್ತವಾಗಿದೆ. ಇದೀಗ ಈ ಸಂಬಂಧ ದೊಡ್ಡಬೆಳವಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಶಾಸಕ ಗೌರಿಶಂಕರ್‌ಗೆ ಮುಳುವಾಗುತ್ತಾ ವಿದ್ಯಾರ್ಥಿಗಳಿಗೆ ನಕಲಿ ವಿಮಾ ಬಾಂಡ್ ಹಂಚಿಕೆ ಕೇಸ್‌?

Comments

Leave a Reply

Your email address will not be published. Required fields are marked *