ಕಲಬುರಗಿ: ಪ್ರೀತಿ ಪ್ರೇಮ ಅಂತ ಯುವತಿ ಹಿಂದೆ ಬಿದ್ದಿದ್ದ ಯುವಕನನ್ನು ಹತ್ಯೆಗೈದಿರುವ ಘಟನೆ ಅಫಜಲಪುರ ತಾಲೂಕಿನ ರೇವೂರು ಗ್ರಾಮದ ಬಳಿ ನಡೆದಿದೆ.

ಹುಲ್ಲೂರು ಗ್ರಾಮದ ನಿವಾಸಿ ಚಂದ್ರಪ್ಪ (24) ಕೊಲೆಯಾದ ಯುವಕ. ಕಳೆದ ಕೆಲದಿನಗಳಿಂದ ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿದ್ದ ಚಂದ್ರಪ್ಪ ಯುವತಿಯೊಂದಿಗೆ ಹಲವಡೆ ಸೂತ್ತಾಡಿದ್ದ ಎನ್ನಲಾಗಿದೆ. ಇವರಿಬ್ಬರ ಪ್ರೀತಿ ಸುದ್ದಿ ತಿಳಿದ ಯುವತಿಯ ಪೋಷಕರು ಚಂದ್ರಪ್ಪನನ್ನು ಕರೆದು ಬುದ್ಧಿವಾದ ಹೇಳಿ ಕಳುಹಿಸಿದ್ದರು. ಅದ್ರೂ ಚಂದ್ರಪ್ಪ ತನ್ನ ಪ್ರೀತಿ ಆಟ ಮುಂದುವರಿಸಿದ್ದನಂತೆ ಇದರಿಂದಾಗಿ ರೊಚ್ಚಿಗೆದ್ದ ಯುವತಿ ಕಡೆಯವರು ಚಂದ್ರಪ್ಪನನ್ನು ಕೊಲೆಗೈದಿದ್ದಾರೆ ಎಂಬ ಆರೋಪವಿದೆ. ಇದನ್ನೂ ಓದಿ: ಎಲ್ಲ ಆರೋಪಿಗಳಿಗೆ ನಮ್ಮ ಮಗನ ರೀತಿಯಲ್ಲಿಯೇ ಶಿಕ್ಷೆ ಕೊಡುತ್ತೇನೆ: ಹರ್ಷನ ತಾಯಿ

ಸದ್ಯ ಈ ಕುರಿತು ರೇವೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಚಂದ್ರಪ್ಪನ ಸಂಬಂಧಿಕರು ಯುವತಿ ಕಡೆಯವರ ವಿರುದ್ಧ ಕೊಲೆ ಆರೋಪ ಹೊರಿಸಿದ್ದಾರೆ. ಪೊಲೀಸರ ತನಿಖೆ ನಂತರವಷ್ಟೇ ಕೊಲೆಗೆ ನಿಖರ ಕಾರಣ ತಿಳಿದುಬರಬೇಕಿದೆ. ಇದನ್ನೂ ಓದಿ: ಶಾಲೆಯಲ್ಲಿ ಕಂಪ್ಯೂಟರ್ ಕಳವು- ತಾಕತ್ತಿದ್ರೆ ನಮ್ಮನ್ನ ಹಿಡೀರಿ ಎಂದು ನಂಬರ್ ಬರೆದಿಟ್ಟ ಕಳ್ಳರು

Leave a Reply