ಮೈಸೂರು: ಯುವಕನ ಕತ್ತು ಕೊಯ್ದು ಭೀಕರವಾಗಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ನಂಜನಗೂಡು ಸಮೀಪದ ಸರಗೂರು ತಾಲೂಕಿನ ಮುಳ್ಳೂರು ಹುಂಡಿಯಲ್ಲಿ ನಡೆದಿದೆ.
ಗ್ರಾಮದ ರಸ್ತೆ ಸಮೀಪದ ಪೊದೆಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಮೃತನಿಗೆ ಸುಮಾರು ಇಪ್ಪತ್ತು ವರ್ಷ ವಯಸ್ಸಾಗಿರಬಹುದೆಂದು ಅಂದಾಜಿಲಾಗಿದೆ. ಆ ರಸ್ತೆಯ ಪಕ್ಕದಲ್ಲಿಯೇ ಶಾಲೆ ಇರುವುದರಿಂದ ಇಂದು ಮುಂಜಾನೆ ಶಾಲಾ ವಿದ್ಯಾರ್ಥಿಗಳು ನೋಡಿ ಗ್ರಾಮಸ್ಥರಿಗೆ ಮಾಹಿತಿ ತಿಳಿಸಿದ್ದಾರೆ.

ಇತ್ತ ಯುವಕನ ಮೃತದೇಹದ ಪಕ್ಕದಲ್ಲಿ ನಿರಂತರವಾಗಿ ಆತನ ಮೊಬೈಲ್ ರಿಂಗ್ ಆಗುತ್ತಿದ್ದು, ಮೃತದೇಹದ ಮೇಲೆ ಯುವತಿಯ ವೇಲ್ ಕೂಡ ಪತ್ತೆಯಾಗಿದೆ. ಅಲ್ಲದೆ ಮೃತದೇಹದ ಬಳಿ ಹತ್ಯೆಗೆ ಬಳಸಿರುವ ಚಾಕು ಮತ್ತು ಸೀಮೆಎಣ್ಣೆ ಕ್ಯಾನ್ ಕೂಡ ಕಂಡುಬಂದಿದೆ.
ಗ್ರಾಮಸ್ಥರು ನೋಡಿ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಆದರೆ ಸರಗೂರು ಠಾಣಾ ಪೊಲೀಸರು ಇನ್ನೂ ಕೂಡ ಘಟನಾ ಸ್ಥಳಕ್ಕೆ ಬಂದಿಲ್ಲ. ಯುವಕನನ್ನು ಭಾನುವಾರ ರಾತ್ರಿಯೇ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply