ಕೊಪ್ಪಳ: ಕುರಿಕಾಯಲು ತೆರಳಿದ್ದ ಯುವಕ ಕೃಷಿ ಹೊಂಡದಲ್ಲಿ ಈಜಲು ಹೋಗಿ ನಾಪತ್ತೆಯಾಗಿದ್ದು, ನಂತರ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಜಿಲ್ಲೆಯ ಯಲಬುರ್ಗಾ ತಾಲೂಕಿನ ಚಿಕ್ಕನಕೊಪ್ಪ ಗ್ರಾಮದಲ್ಲಿ ನಡೆದಿದೆ.
ಚಿಕ್ಕನಕೊಪ್ಪ ಗ್ರಾಮದ ಹೊರವಲಯದಲ್ಲಿ ಬುಧವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು, ಇಂದ್ರಪ್ಪ ತಲ್ಲೂರ್(18) ಮೃತ ಯುವಕ. ಇಂದ್ರಪ್ಪ ತಲ್ಲೂರ್, ಯಲಬುರ್ಗಾ ತಾಲೂಕಿನ ಕಲ್ಲೂರ್ ನಿವಾಸಿಯಾಗಿದ್ದು, ಕೃಷಿ ಹೊಂಡದಲ್ಲಿ ಈಜಲು ತೆರಳಿ ನಾಪತ್ತೆಯಾಗಿದ್ದನು.

ಈ ವಿಷಯ ತಡವಾಗಿ ಬೆಳಕಿಗೆ ಬಂದ ಕಾರಣ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಬರುವಷ್ಟರಲ್ಲಿ ಯುವಕ ಹೊಂಡದಲ್ಲಿ ನಾಪತ್ತೆಯಾಗಿದ್ದನು. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಯುವಕನಿಗಾಗಿ ಶೊಧಕಾರ್ಯ ಆರಂಭಿಸಿದ್ದರು. ಅದು ಯಶಸ್ವಿಯಾಗದ ಕಾರಣ ಕೃಷಿ ಹೊಂಡದಲ್ಲಿರುವ ನೀರನ್ನು ಗ್ರಾಮಸ್ಥರು ಮತ್ತು ಪೊಲೀಸರು ಹೊರಹಾಕಿ ಶೋಧ ನಡೆಸಿದಾಗ ಇಂದ್ರಪ್ಪ ತಲ್ಲೂರ್ ಶವವಾಗಿ ಪತ್ತೆಯಾಗಿದ್ದಾನೆ.
ಮಧ್ಯಾಹ್ನದ ವೇಳೆ ಇಂದ್ರಪ್ಪ ತಲ್ಲೂರ್ ಪತ್ತೆಯಾಗಿದ್ದು, ಈಜಲು ಹೋಗಿ ಕೆರೆಯಲ್ಲಿ ಮುಳುಗಿದ್ದ ಇಂದ್ರಪ್ಪ ಶಪ ಪತ್ತೆ ಮಾಡಲು ಕೃಷಿಹೊಂಡದ ನೀರನ್ನು ಪೈಪ್ ಮೂಲಕ ಖಾಲಿ ಮಾಡಿದ್ದರು. ನಂತರ ಕೃಷಿ ಹೊಂಡದ ಅರ್ಧದಷ್ಟು ಮಣ್ಣು ಹೊರತೆಗೆದು ಶವವನ್ನು ಅಗ್ನಿಶಾಮಕ ಸಿಂಬ್ಬಂದಿ ಪತ್ತೆಮಾಡಿದ್ದಾರೆ.
ಈ ಘಟನೆ ಕುಕನೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಇತ್ತ ಕುರಿಗಾಯಿ ಇಂದ್ರಪ್ಪ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply