ಚಲಿಸುತ್ತಿರುವ ರೈಲಿನಲ್ಲಿ ಯುವಕನ ಹುಚ್ಚಾಟ

ಹುಬ್ಬಳ್ಳಿ: ಚಲಿಸುತ್ತಿರುವ ರೈಲಿನಲ್ಲಿ ಪ್ರಾಣದ ಹಂಗು ತೊರೆದು ಯುವಕನೋರ್ವ ಹುಚ್ಚಾಟ ನಡೆಸಿರುವ ಘಟನೆ ಹುಬ್ಬಳ್ಳಿ ವ್ಯಾಪ್ತಿಯ ರೈಲಿನಲ್ಲಿ ನಡೆದಿದೆ.

ಮಂಗಳೂರಿನಿಂದ ಹುಬ್ಬಳ್ಳಿ ಮಾರ್ಗವಾಗಿ ವಿಜಯಪುರಕ್ಕೆ ತೆರಳುತ್ತಿದ್ದ ವಿಜಯಪುರ ವಿಶೇಷ ಎಕ್ಸ್‌ಪ್ರೆಸ್ ಟ್ರೇನ್‍ನಲ್ಲಿ ಈ ಘಟನೆ ನಡೆದಿದೆ. ಇನ್ನು ವೇಗವಾಗಿ ಚಲಿಸುತ್ತಿದ್ದ ರೈಲಿನ ಬಾಗಿಲಿನಿಂದ ಮುಂದೆ ಭಾಗಿ ಕೈಗೆ ಸಿಕ್ಕ ಸಿಕ್ಕ ಗಿಡಗಳ ಎಲೆಗಳನ್ನು ಹರಿಯುವುದು, ಕಾಲಿನಿಂದ ಒದೆಯುವ ಯತ್ನ ಜೊತೆಗೆ ರೈಲಿನ ಬಾಗಿಲು ಹಿಡಿದು ಜೋಕಾಲಿ ಆಡುವ ಮೂಲಕ ಹುಚ್ಚಾಟ ಮೆರೆದ್ದಾನೆ. ಯುವಕ ಹುಚ್ಚಾಟ ಪ್ರದರ್ಶನವನ್ನು ಅದೇ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮತ್ತೋರ್ವ ಯುವಕ ವೀಡಿಯೋ ಮಾಡಿದ್ದಾನೆ. ಇದನ್ನೂ ಓದಿ: ಸರ್ಕಾರ ಮೊಂಡಾಟ ಮಾಡಿದ್ರೆ ಜನ ತಕ್ಕ ಪಾಠ ಕಲಿಸುತ್ತಾರೆ: ಸಿದ್ದರಾಮಯ್ಯ

ಈ ಹಿಂದೆ ಹಲವು ಬಾರಿ ರೈಲು ವೇಗವಾಗಿ ಚಲಿಸುವ ವೇಳೆ ಈ ರೀತಿಯ ಹುಚ್ಚಾಟ ಮೆರೆದು ಜೀವಹಾನಿ ಆದ ಅನೇಕ ಉದಾಹರಣೆಗಳಿವೆ. ಜೊತೆಗೆ ರೈಲ್ವೆ ಇಲಾಖೆ ಇಂತಹ ದುಸ್ಸಾಹಸಕ್ಕೆ ಮುಂದಾಗುವವರ ವಿರುದ್ಧ ಸಾಕಷ್ಟು ಬಾರಿ ಜಾಗೃತಿ ಮೂಡಿಸಿದ್ದಾರೆ. ಆದ್ರೂ ಕೆಲವರು ಇಂತಹ ಹುಚ್ಚು ಪ್ರದರ್ಶನಕ್ಕೆ ಮುಂದಾಗಿದ್ದು, ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣ ಆಗಿದೆ. ಇನ್ನು ಯುವಕನೋರ್ವ ಹುಚ್ಚಾಟ ಪ್ರದರ್ಶಿಸಿರುವ ವೀಡಿಯೋ ಈಗ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದನ್ನೂ ಓದಿ: ಸೂ.. ಮಕ್ಕಳಾ ಅಂತ ಕಾಂಗ್ರೆಸ್ ಪಕ್ಷದವರನ್ನ ನಿಂದಿಸಿದ ಬಿಜೆಪಿ ಸಂಸದ

Comments

Leave a Reply

Your email address will not be published. Required fields are marked *