ಕುಂಭಮೇಳಕ್ಕೆ ತೆರಳುತ್ತಿದ್ದಾಗ ಅಪಘಾತ: ಹಾಸನದ ಬಿಜೆಪಿ ಯುವ ಕಾರ್ಯಕರ್ತ ಸಾವು

ಹಾಸನ: ಕುಂಭಮೇಳಕ್ಕೆ(Maha Kumbh Mela) ತೆರಳುತ್ತಿದ್ದಾಗ ಅಪಘಾತದಲ್ಲಿ ಹಾಸನ(Hassan) ಮೂಲದ ಯುವಕ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ವಾರಣಾಸಿ(Varanasi) ಬಳಿ ನಡೆದಿದೆ.

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದ ನಿತಿನ್(30) ಮೃತ ಯುವಕ. ಕುಟುಂಬಸ್ಥರ ಜೊತೆ ಕುಂಭಮೇಳಕ್ಕೆ ತೆರಳುತ್ತಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ನಿತಿನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ನಿತಿನ್ ತಾಯಿ ಪುಷ್ಪ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಪ್ರೀ ವೆಡ್ಡಿಂಗ್ ಶೂಟ್‌ಗೆ ತೆರಳಿದ್ದವರ ಕಾರಿನ ಗಾಜು ಒಡೆದು 4 ಲಕ್ಷದ ಕ್ಯಾಮೆರಾ, ಲೆನ್ಸ್ ದೋಚಿದ ಕಳ್ಳರು

ಮೃತ ನಿತಿನ್ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ. ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆ ಪರಿಹಾರಕ್ಕೆ AI ಮೊರೆ – ಏನಿದು VAC?