ನಿಮ್ಮ ಬಾಡಿಯನ್ನು ನೀವೇ ಲವ್ ಮಾಡಬೇಕು : ರಾಗಿಣಿ

ಸಿನಿಮಾ, ಕಿರುತೆರೆ ಮತ್ತು ಮಾಡಲಿಂಗ್ ಜಗತ್ತಿನಲ್ಲಿ ಬಾಡಿ ಶೇಮಿಂಗ್‍ ಕುರಿತು ಸಾಕಷ್ಟು ಘಟನೆಗಳು ನಡೆಯುತ್ತಿವೆ. ಅಲ್ಲದೇ, ತಮ್ಮ ದೇಹವನ್ನು ಸುಂದರವಾಗಿಟ್ಟುಕೊಳ್ಳಲು ನಟಿಯರು ಸ್ವಯಂ ಪ್ರೇರಣೆಗಿಂತ, ಇತರರು ಅವರ ಮೇಲೆ ಹಾಕುವ ಒತ್ತಡವೇ ಕಾರಣ ಎನ್ನುವ ಮಾತೂ ಹರಿದಾಡುತ್ತಿವೆ. ಬಾಡಿ ಶೇಮಿಂಗ್ ಕಾರಣದಿಂದಾಗಿಯೇ ಹಲವರು ಮಾನಸಿಕ ಒತ್ತಡಕ್ಕೂ ಒಳಗಾಗುತ್ತಿದ್ದಾರೆ. ಹಾಗಾಗಿ ತೂಕ ಇಳಿಸಿಕೊಳ್ಳಲು ಮತ್ತು ದೇಹವು ಸುಂದರವಾಗಿ ಇಟ್ಟುಕೊಳ್ಳಲು ಸರ್ಜರಿಗೂ ಒಳಗಾಗಿ ಪ್ರಾಣಹಾನಿ ಮಾಡಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಸದ್ದಿಲ್ಲದೇ ಶುರುವಾಯ್ತು ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾ : ಮೊದಲ ದಿನವೇ ಫೋಟೋ ಲೀಕ್

ಮೊನ್ನೆಯಷ್ಟೇ ಕಿರುತೆರೆ ನಟಿ ಚೇತನಾ ರಾಜ್ ಇಂಥದ್ದೊಂದು ಪ್ರಕರಣಕ್ಕೆ ಸಾಕ್ಷಿಯಾಗಿ ಪ್ರಾಣವನ್ನೇ ಕಳೆದುಕೊಂಡರು. ಅವರು ತೂಕ ಇಳಿಸಿಕೊಳ್ಳುವುದಕ್ಕಾಗಿ ಸರ್ಜರಿ ಮಾಡಿಸಿಕೊಳ್ಳಲು ಹೋಗಿ ಪ್ರಾಣಬಿಟ್ಟರು. ಈ ಕುರಿತು ಸಿನಿಮಾ ರಂಗದಲ್ಲಿ ಭಾರೀ ಪ್ರತಿರೋಧ ವ್ಯಕ್ತವಾಗುತ್ತಿದೆ. ಈಗಾಗಲೇ ಬಾಡಿ ಶೇಮಿಂಗ್ ಕುರಿತಾಗಿ ಸಾಕಷ್ಟು ನಟಿಯರು ಮಾತನಾಡಿದ್ದಾರೆ. ಆ ಸಾಲಿಗೆ ಇದೀಗ ರಾಗಿಣಿ ಸೇರ್ಪಡೆಗೊಂಡಿದ್ದಾರೆ. ಇದನ್ನೂ ಓದಿ : ಧನುಶ್ ನಟನೆಯ ಹಾಲಿವುಡ್ ಸಿನಿಮಾದ ಟ್ರೇಲರ್ ರಿಲೀಸ್ : ಎಲ್ಲಿದ್ದಾರೆ ಧನುಶ್?

ನಿನ್ನೆಯಷ್ಟೇ ತಮ್ಮ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿರುವ ರಾಗಿಣಿ, ಚೇತನರಾಜ್ ಪ್ರಕರಣವನ್ನು ನೆನಪಿಸಿಕೊಂಡು, ಮಾತನಾಡಿ ‘ನಾವು ಯಾರು ಏನು ಅನ್ನುತ್ತಾರೆ ಎಂದು ತಲೆಕೆಡಿಸಿಕೊಳ್ಳಬೇಕಿಲ್ಲ. ನಮ್ಮ ದೇಹವನ್ನು ಮೊದಲು ನಾವು ಪ್ರೀತಿಸಬೇಕು. ಹಾಗೆ ಪ್ರೀತಿಸಿಕೊಂಡರೆ ಮಾತ್ರ, ಇಂತಹ ಅನಾಹುತಗಳು ನಡೆಯುವುದಿಲ್ಲ. ಆ ಹುಡುಗಿ ಸಾವು ನಿಜಕ್ಕೂ ನನಗೆ ಆಘಾತ ತರಿಸಿದೆ’ ಎಂದು ರಾಗಿಣಿ ಮಾತನಾಡಿದ್ದಾರೆ.

Comments

Leave a Reply

Your email address will not be published. Required fields are marked *