ನವದೆಹಲಿ: ಆನ್‍ಲೈನಲ್ಲಿ ವಸ್ತುಗಳನ್ನು ಖರೀದಿಸಿ ಮನೆಯಲ್ಲಿ ಪಡೆದುಕೊಳ್ಳುವಂತೆ ಇನ್ನು ಮುಂದೆ ದೇಶದಲ್ಲಿ ಜನ ಪೆಟ್ರೋಲ್, ಡೀಸೆಲ್ ಬುಕ್ ಮಾಡಿ ಮನೆಯಲ್ಲೇ ತೈಲವನ್ನು ತಮ್ಮ ವಾಹನಗಳಿಗೆ ತುಂಬಿಸಬಹುದು.
ಹೌದು. ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಬಂಕ್‍ಗಳಲ್ಲಿ ಗ್ರಾಹಕರ ಕ್ಯೂ ನಿಲ್ಲುವುದನ್ನು ತಪ್ಪಿಸಲು ಮನೆ ಬಾಗಿಲಿಗೆ ಪೆಟ್ರೋಲ್, ಡೀಸೆಲ್ ವಿತರಣೆ ಮಾಡಲು ಚಿಂತನೆ ನಡೆಸಿದೆ.
ಈ ಸಂಬಂಧ ಸಚಿವಾಲಯ ಟ್ವೀಟ್ ಮಾಡಿದ್ದು, ಕ್ಯೂ ನಿಂತುಕೊಂಡು ಗ್ರಾಹಕರ ಸಮಯ ಹಾಳಾಗುವುದನ್ನು ತಪ್ಪಿಸಲು, ಪ್ರೀ ಬುಕ್ಕಿಂಗ್ ಮಾಡಿದ ಗ್ರಾಹಕರ ಮನೆ ಬಾಗಿಲಿಗೆ ಪೆಟ್ರೋ ಉತ್ಪನ್ನಗಳನ್ನು ತಲುಪಿಸಲು ಮುಂದಾಗಿದ್ದೇವೆ ಎಂದು ತಿಳಿಸಿದೆ.
ಇದೇ ವೇಳೆ ಮತ್ತೊಂದು ಟ್ವೀಟ್ ನಲ್ಲಿ ಈ ಹಿಂದೆ ಪ್ರತಿದಿನ 150 ಕೋಟಿ ರೂ. ಆನ್‍ಲೈನ್ ವ್ಯವಹಾರ ನಡೆಯುತ್ತಿದ್ದರೆ ಈಗ ಈ ವ್ಯವಹಾರ 450 ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದೆ.
ಪ್ರತಿ ವರ್ಷ 3.5 ಕೋಟಿ ಜನ ಬಂಕ್‍ಗಳಿಗೆ ಬರುತ್ತಾರೆ. ವಾರ್ಷಿಕವಾಗಿ 2,500 ಕೋಟಿ ರೂ. ವ್ಯವಹಾರ ನಡೆಯುತ್ತಿದೆ ಎಂದು ಸಚಿವಾಲಯ ತಿಳಿಸಿದೆ.
15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಇನ್ನು ಮುಂದೆ ಪ್ರತಿದಿನ ಪರಿಷ್ಕರಣೆಯಾಗಲಿದ್ದು, ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಲ್ಲಿ ಜಾರಿಗೆ ಬರಲಿದೆ. ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್ ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರಾಯೋಗಿಕವಾಗಿ ಜಾರಿಗೆ ಬರಲಿದ್ದು, ಮುಂದಿನ ಹಂತದಲ್ಲಿ ದೇಶಾದ್ಯಂತ ಜಾರಿ ಮಾಡಲು ಭಾರತೀಯ ತೈಲ ಕಂಪೆನಿಗಳು ತೀರ್ಮಾನಿಸಿದೆ.
ಮುಂದಿನ ತಿಂಗಳ 14ರಿಂದ ಪ್ರತಿ ಭಾನುವಾರ ಪೆಟ್ರೋಲ್ ಪಂಪ್ ಗಳನ್ನು ಮುಚ್ಚುವ ದಕ್ಷಿಣ ಭಾರತ ರಾಜ್ಯಗಳ ಪೆಟ್ರೋಲ್ ಬಂಕ್ ಮಾಲೀಕರ ಸಲಹೆಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಅಲ್ಪ ಸಂಖ್ಯೆಯ ಪಂಪ್‍ಗಳ ಈ ನಿರ್ಧಾರದಿಂದ ಜನಸಾಮಾನ್ಯರಿಗೆ ಇದರಿಂದ ಜನಸಾಮಾನ್ಯರಿಗೆ ತೊಂದರೆಯಾಗಲಿದೆ ಎಂದು ತೈಲ ಸಚಿವಾಲಯ ಅಭಿಪ್ರಾಯಪಟ್ಟಿದೆ.
“Options being explored where petro products may be door delivered to consumers on pre booking” @dpradhanbjp (1/2)
— Ministry of Petroleum and Natural Gas #MoPNG (@PetroleumMin) April 21, 2017
“This would help consumers avoid spending excessive time and long queues at fuel stations” @dpradhanbjp (2/2)
— Ministry of Petroleum and Natural Gas #MoPNG (@PetroleumMin) April 21, 2017
“Over 35,000 consumer awareness campaigns organized in country; OMCs giving 0.75% discount on fuel purchase via cashless mode” @dpradhanbjp
— Ministry of Petroleum and Natural Gas #MoPNG (@PetroleumMin) April 21, 2017
“Daily cashless transactions increased from Rs 150 Cr per day to Rs 400 Cr per day” @dpradhanbjp
— Ministry of Petroleum and Natural Gas #MoPNG (@PetroleumMin) April 21, 2017
“About 40,000 ROs are with POS, more than 86% of ROs with digital infrastructure today” @dpradhanbjp
— Ministry of Petroleum and Natural Gas #MoPNG (@PetroleumMin) April 21, 2017
“About 3.5 cr people come to fuel stations every day; Rs 2500 Cr worth of transactions every year “ – @dpradhanbjp
— Ministry of Petroleum and Natural Gas #MoPNG (@PetroleumMin) April 21, 2017

Leave a Reply