ಸಮಂತಾ ಇಷ್ಟ ಪಡ್ತೀರಾ, ನನಗೇನಾಗಿದೆ ಉರ್ಫಿ ಪ್ರಶ್ನೆ

ಹಾಟ್ ಫೋಟೋಗಳಿಂದಾಗಿಯೇ ಸಖತ್ ಫೇಮಸ್ ಆಗಿರುವ ಉರ್ಫಿ ಜಾವೇದ್, ಕೊಂಚ ಗರಂ ಆಗಿದ್ದಾರೆ. ತಮ್ಮ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡುವವರನ್ನು ತುಸು ಹೆಚ್ಚೆ ತರಾಟೆಗೆ ತಗೆದುಕೊಂಡಿದ್ದಾರೆ. ಟ್ರಾನ್ಸಪರೆಂಟ್ ಬಟ್ಟೆ ಧರಿಸಿದಾಗಿ ಕೆಲವರು ‘ಸೊಳ್ಳೆ ಪರದೆ ಧರಿಸಿದ್ದಾಳೆ’ ಎಂದು ಕಾಮೆಂಟ್ ಮಾಡಿ, ಕೆಟ್ಟದಾಗಿ ಬಿಂಬಿಸುವ ಪ್ರಯತ್ನ ಮಾಡುತ್ತಾರಂತೆ. ಅಂಥವರಿಗಾಗಿಯೇ ಉರ್ಫಿ ಮರುತ್ತರ ನೀಡಿದ್ದಾರೆ. ಜತೆಗೆ ಕೆಲವರಿಗೆ ಪ್ರಶ್ನೆಯನ್ನೂ ಮಾಡಿದ್ದಾರೆ. ಇದನ್ನೂ ಓದಿ : ಪ್ರಶಾಂತ್ ನೀಲ್ -ಜ್ಯೂ.ಎನ್‌ಟಿಆರ್ ವಿವಾಹ ವಾರ್ಷಿಕೋತ್ಸವ ಸಂಭ್ರಮ ಹೇಗಿತ್ತು ಗೊತ್ತಾ?

ಬಟ್ಟೆ ಧರಿಸುವುದು ನನ್ನ ಆಕೆ. ನನ್ನ ದೇಹಕ್ಕೆ ಯಾವ ರೀತಿಯ ಉಡುಪುಗಳು ಒಪ್ಪುತ್ತವೆಯೇ ಅಂತಹ ಡ್ರೆಸ್ ಅನ್ನು ನಾನು ಹಾಕಿಕೊಳ್ಳುತ್ತೇನೆ. ನನ್ನ ಬಟ್ಟೆ ನನ್ನ ಇಷ್ಟ ನೀವೇಕೆ ಹೀಗೆ ಉರಿದುಕೊಳ್ಳುತ್ತೀರಿ ಎಂದು ನೇರವಾಗಿಯೇ ಉರ್ಫಿ ಪ್ರಶ್ನೆ ಮಾಡಿದ್ದಾರೆ. ಅಲ್ಲದೇ, ನಟಿ ಸಮಂತ ಅವರು ಟ್ರಾನ್ಸಪರೆಂಟ್ ಬಟ್ಟೆ ಹಾಕಿದಾಗ ‘ವ್ಹಾ.. ಸೂಪರ್.. ಸುಂದರಿ’ ಅಂತೆಲ್ಲ ಕಾಮೆಂಟ್ ಮಾಡುತ್ತಿರಿ. ನನಗಾದರೆ ಯಾಕೆ ಹೀಗೆ ಹೀಯಾಳಿಸುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದನ್ನೂ ಓದಿ : ಯಶ್ ಮುಂದಿನ ಚಿತ್ರ ಯಾರ ಜೊತೆ? ಹೊರಬಿತ್ತು ಬಿಗ್ ನ್ಯೂಸ್

ಉರ್ಫಿ ಇತ್ತೀಚಿಗೆ ತುಸು ಹೆಚ್ಚೆ ಅನ್ನುವಂತೆ ಗ್ಲಾಮರೆಸ್ ಆಗಿ ಕಾಣಿಸಿಕೊಳ್ಳುತ್ತಾರೆ. ಅರೆಬರೆ ಕಾಸ್ಟ್ಯೂಮ್ ನಿಂದಾಗಿಯೇ ಫೇಮಸ್ ಆಗುತ್ತಿದ್ದಾರೆ. ಉರ್ಫಿ ತೊಡುವ ಬಟ್ಟೆಗಳು ಕೂಡ ಟ್ರೋಲ್ ಆಗುತ್ತಿವೆ. ಹೀಗಾಗಿ ಉರ್ಫಿ ಗರಂ ಆಗಿದ್ದಾರೆ. ಸ್ಟಾರ್ ನಟಿಯರಿಗೆ ಕೊಡುವ ಗೌರವವನ್ನು ನನಗೂ ಕೊಡಿ ಎಂದು ಅವರು ಕೇಳಿಕೊಂಡಿದ್ದಾರೆ. ಯಾರೇ ಟ್ರೋಲ್ ಮಾಡಿದರೂ, ಡೋಂಟ್ ಕೇರ್ ಎಂದೂ ಅವರು ಹೇಳಿದ್ದಾರೆ. ಇದನ್ನೂ ಓದಿ : ಹಾಲಿವುಡ್‌ಗೆ ಹಾರಲಿದ್ದಾರೆ ಬಾಲಿವುಡ್ ರಾಧೆ ಆಲಿಯಾ ಭಟ್

ಈವರೆಗೂ ಸಾವಿರಕ್ಕೂ ಹೆಚ್ಚು ಕಾಸ್ಟ್ಯೂಮ್ ಧರಿಸಿದ ಕೀರ್ತಿ ಉರ್ಫಿ ಅವರಿಗೆ ಸಲ್ಲಬೇಕಂತೆ. ಒಂದೊಂದು ಕಾಸ್ಟ್ಯೂಮ್ ರೆಡಿ ಮಾಡುವಾಗಲೂ ಅವರು ಸಖತ್ ತಲೆ ಕೆಡಿಸಿಕೊಳ್ಳುತ್ತಾರಂತೆ. ಅದರ ಹಿಂದೆ ದೊಡ್ಡದೊಂದು ಅಧ್ಯಯನವೇ ಇರುತ್ತದಂತೆ. ಹೆಸರಾಂತ ಕಾಸ್ಟ್ಯೂಮ್ ಡಿಸೈನರ್ ಸಲಹೆಯನ್ನೂ ಅವರು ಪಡೆಯುತ್ತಾರಂತೆ.

Comments

Leave a Reply

Your email address will not be published. Required fields are marked *