‘ಉತ್ತರಕಾಂಡ’ ಸಿನಿಮಾದ ಪಾಟೀಲ್ ಪಾತ್ರದಲ್ಲಿ ಯೋಗರಾಜ್ ಭಟ್

ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಉತ್ತರಾಕಾಂಡದಲ್ಲಿ(Uttarkanda) ನಟಿಸಲಿದ್ದಾರೆ‌. ಪಾಟೀಲ್ ಎಂಬ  ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ. ನಿರ್ದೇಶಕರಾಗಿ ಆಕ್ಷನ್ ಕಟ್ ಹೇಳುತ್ತಿದ್ದ ಭಟ್ಟರು,‌ಇದೀಗ ವಿಭಿನ್ನವಾಗಿ ಆಕ್ಷನ್ ಕಟ್ ಹೇಳಿಸಿಕೊಳ್ಳಲಿದ್ದಾರೆ‌. ಭಟ್ಟರು ಪಾತ್ರ ಮಾಡುವುದು ಹೊಸದೇನೂ ಅಲ್ಲ. ಅವರಿಗೆ ಉತ್ತರ ಕರ್ನಾಟಕ ಭಾಷೆ  ಚೆನ್ನಾಗಿಯೇ ಬರುತ್ತದೆ.

ಮೊನ್ನೆಯಷ್ಟೇ ಟ ದೂದ್ ಪೇಡಾ ದಿಗಂತ್ (Diganth) ಉತ್ತರಕಾಂಡಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಮಿರ್ಚಿ ಮಲ್ಲಿಗೆ ಎಂಬ ಪಾತ್ರದಲ್ಲಿ ತೆರೆ ಮೇಲೆ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಪೋಸ್ಟರ್ ನಲ್ಲಿನ ಅವರ ಖಡಕ್ ಲುಕ್ ಮೂಲಕ ಕುತೂಹಲ ಕೆರಳಿಸಿದ್ದಾರೆ.

ಈ ಸಿನಿಮಾದಲ್ಲಿ ಚೈತ್ರಾ ಆಚಾರ್ಯ್ (Chaitra Acharya)  ಕೂಡ ನಟಿಸುತ್ತಿದ್ದಾರೆ. ಚೈತ್ರ ಆಚಾರ್ ಉತ್ತರಕಾಂಡ ತಾರಾಬಳಗಕ್ಕೆ ಸೇರ್ಪಡೆ ಆಗಿದ್ದು, ಇಂದು ಚಿತ್ರೀಕರಣದಲ್ಲೂ ಪಾಲ್ಗೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಅವರು ಲಚ್ಚಿ (Lacchi) ಎಂಬ ಒಂದು ಮುಖ್ಯ ಪಾತ್ರಕ್ಕಾಗಿ ಬಣ್ಣ ಹಚ್ಚಲಿದ್ದಾರೆ.

 

ಉತ್ತರಕಾಂಡ ಒಂದು ಆಕ್ಷನ್ ಡ್ರಾಮಾ ಚಿತ್ರವಾಗಿದ್ದು, ಚಿತ್ರವನ್ನು ರೋಹಿತ್ ಪದಕಿ ನಿರ್ದೇಶಿಸಿರುತ್ತಾರೆ. ಕಾರ್ತಿಕ್ ಗೌಡ ಮತ್ತು ಯೋಗಿ‌ ಜಿ ರಾಜ್ ಕೆ.ಆರ್.ಜಿ.ಸ್ಟೂಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿರುವ ಈ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್ ಮತ್ತು ನಟರಾಕ್ಷಸ ಡಾಲಿ‌ ಧನಂಜಯ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.