ಉತ್ತರಪ್ರದೇಶದಲ್ಲಿ ರೈತರ ಸಾಲ ಮನ್ನಾ: ಕರ್ನಾಟಕದಲ್ಲಿ ಆಗುತ್ತಾ?

ನವದೆಹಲಿ/ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ ಹಾದಿಯಲ್ಲೇ ಸಾಗುತ್ತಿರುವ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ರೈತರ 36 ಸಾವಿರ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರೆ.

2.15 ಕೋಟಿ ರೈತರಲ್ಲಿ 1 ಲಕ್ಷ ರೂಪಾಯಿವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಇದರ ಜೊತೆಗೆ ಪಾಳು ಬಿದ್ದಿರುವ ಜಮೀನು ಹೊಂದಿರುವ 7 ಲಕ್ಷ ರೈತರ 5,630 ಕೋಟಿ ರೂಪಾಯಿ ಮನ್ನಾ ಮಾಡಿದ್ದಾರೆ.

2016ರ ಮಾರ್ಚ್ 31ರವರೆಗೆ ಸಾಲ ಪಡೆದ ರೈತರಿಗೆ ಇದು ಅನ್ವಯವಾಗಲಿದೆ. 2017ರ ಮಾರ್ಚ್‍ಗೆ 31ರವರೆಗೆ ಬಾಕಿಯಿರೋ ಸಾಲವನ್ನ ಸರ್ಕಾರ ಪಾವತಿಸುತ್ತದೆ. ಚುನಾವಣಾ ಪ್ರಾಣಳಿಕೆಯಲ್ಲಿ ಬಿಜೆಪಿ ಸಾಲ ಮನ್ನಾ ಮಾಡೋದಾಗಿ ಹೇಳಿತ್ತು. ಈಗ ಅದರಂತೆ ನಡೆದುಕೊಂಡಿದೆ.

ಈ ನಡುವೆ ತಮಿಳುನಾಡಿನ ಸಹಕಾರಿ ಬ್ಯಾಂಕ್‍ಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ಸರ್ಕಾರಕ್ಕೆ ಮದ್ರಾಸ್ ಹೈಕೋರ್ಟ್ ಸೂಚನೆ ಕೊಟ್ಟಿದೆ. ಈ ಹಿಂದೆ 5 ಎಕರೆವರೆಗಿನ ರೈತರ ಕೃಷಿ ಸಾಲವನ್ನ ಸರ್ಕಾರ ಮನ್ನಾ ಮಾಡಿತ್ತು. ಈಗ ಹೈಕೋರ್ಟ್ ಸೂಚನೆಯಿಂದ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿರೋ ರೈತರಿಗೆ ಸ್ವಲ್ಪ ರಿಲೀಫ್ ಸಿಕ್ಕಿದೆ.

ರಾಜ್ಯದಲ್ಲೂ ಆಗುತ್ತಾ?: ಉತ್ತರ ಪ್ರದೇಶದಲ್ಲಿ ರೈತರಿಗೇನೂ ರಿಲೀಫ್ ಸಿಕ್ತು. ಪಕ್ಕದ ಚೆನ್ನೈನಲ್ಲೂ ರೈತರ ಸಾಲ ಮನ್ನಾ ಮಾಡಬಹುದು. ಆದರೆ ನಮ್ಮ ಸಿದ್ದರಾಮಯ್ಯ ಸರ್ಕಾರ ರೈತರ ಸಾಲ ಮನ್ನಾ ಯಾವಾಗ ಮಾಡುತ್ತೋ ಏನೋ ಎಂದು ರೈತರು ಈಗ ಪ್ರಶ್ನೆ ಕೇಳುತ್ತಿದ್ದಾರೆ.

Comments

Leave a Reply

Your email address will not be published. Required fields are marked *