ಯೋಗಿ ತಂದೆಯನ್ನು ಟೀಕಿಸಿದ್ದ ಎಸ್‍ಪಿ ನಾಯಕರ ವಿರುದ್ಧ ಎಫ್‍ಐಆರ್

ಲಕ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ತಂದೆಯ ವಿರುದ್ಧ ಆಕ್ಷೇಪಾರ್ಹ ಟೀಕೆ ಮಾಡಿದ್ದ ಆರೋಪದಡಿ ಎಂಎಲ್‍ಸಿ ರಾಜ್‍ಪಾಲ್ ಕಶ್ಯಪ್ ಸೇರಿದಂತೆ ಸಮಾಜವಾದಿ ಪಕ್ಷದ ಇಬ್ಬರು ನಾಯಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಾದೇವ ದೂರಿನ ಮೇರೆಗೆ, ಎಸ್‍ಪಿಯ ಹಿಂದುಳಿದ ವರ್ಗಗಳ ಸೆಲ್‍ನ ಅಧ್ಯಕ್ಷರಾಗಿರುವ ರಾಜ್‍ಪಾಲ್ ಕಶ್ಯಪ್, ಪಕ್ಷದ ಪಿಲಿಭಿತ್ ಜಿಲ್ಲಾ ಘಟಕದ ಅಧ್ಯಕ್ಷ ಯೂಸುಫ್ ಖಾದ್ರಿ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಪಿಲಿಭಿತ್ ಪೊಲೀಸ್ ವರಿಷ್ಠಾಧಿಕಾರಿ ದಿನೇಶ್ ಕುಮಾರ್ ತಿಳಿಸಿದ್ದಾರೆ. ಇದನ್ನೂ ಓದಿ: ಯುಪಿ ಸಿಎಂ ಆಗಬೇಕಾ, ಬೇಡ್ವಾ ಅಂತ ಪ್ರಿಯಾಂಕಾ ಗಾಂಧಿ ನಿರ್ಧರಿಸ್ತಾರೆ: ಸಲ್ಮಾನ್ ಖುರ್ಷಿದ್

MLC Rajpal Kashyap

ಪಿಲಿಭಿತ್‍ನಲ್ಲಿ ಬುಧವಾರ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ರಾಜ್‍ಪಾಲ್ ಕಶ್ಯಪ್‍ರವರು, ಯೋಗಿ ಆದಿತ್ಯನಾಥ್‍ರವರು ನೀಡಿದ್ದ ಅಬ್ಬಾ ಜಾನ್ ಹೇಳಿಕೆ ಕುರಿತಂತೆ ಮಾತನಾಡುವಾಗ ಮುಖ್ಯಮಂತ್ರಿಯವರ ತಂದೆ ವಿರುದ್ಧ ಆಕ್ಷೇಪಾರ್ಹ ಟೀಕೆಗಳನ್ನು ಮಾಡಿದ್ದಾರೆ. ಅಲ್ಲದೇ ನಾನು ಮುಖ್ಯಮಂತ್ರಿಗೆ ಹೆದರುವುದಿಲ್ಲ ಎಂದು ಹೇಳಿದ್ದಾರೆ.

ಆದಿತ್ಯನಾಥ್ ವಿರುದ್ಧ ತಮ್ಮ ಪಕ್ಷದ ನಾಯಕ ಮುಲಾಯಂ ಸಿಂಗ್ ಯಾವುದೇ ಹೇಳಿಕೆ ಕೊಟ್ಟರೆ, ನಾನು ಸುಮ್ಮನಿರುವುದಿಲ್ಲ ಎಂದು ಮಹದೇವ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಲ್ಲದೇ ಸಮಾರಂಭದಲ್ಲಿ ಭಾಗವಹಿಸಿದ ಜನರು ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಕೂಡ ಪ್ರಕರಣ ದಾಖಲಿಸಿದ್ದಾರೆ. ಇದನ್ನೂ ಓದಿ: ನಿವೃತ್ತ ಹವಾಲ್ದಾರ್ ಪುತ್ರನ ಆತ್ಮಹತ್ಯೆ ಪ್ರಕರಣ- ಸೈಕೋ ರೀತಿ ವರ್ತಿಸುತ್ತಿದ್ದ ವಿದ್ಯಾರ್ಥಿ

Mulayam Singh Yadav

ಇತ್ತೀಚೆಗಷ್ಟೇ ಯೋಗಿ ಆದಿತ್ಯನಾಥ್‍ರವರು ಕಾರ್ಯಕ್ರಮವೊಂದರಲ್ಲಿ “2017 ಕ್ಕೂ ಮುನ್ನ ಜನರಿಗೆ ಈಗ ಲಭಿಸುವಷ್ಟು ಪಡಿತರ ದೊರೆಯುತ್ತಿರಲಿಲ್ಲ. ಅಲ್ಲಿ ಅಬ್ಬಾ ಜಾನ್ ಎಂದು ಹೇಳುವವರು (ಮುಸ್ಲಿಮರು ಉರ್ದು ಭಾಷೆಯಲ್ಲಿ ತಂದೆಯನ್ನು ಕರೆಯಲು ಬಳಸುವ ಪದ) ಬಡವರ ಪಾಲಿನ ಪಡಿತರವನ್ನು ತಿನ್ನುತ್ತಿದ್ದರು. ಖುಷಿ ನಗರದ ರೇಷನ್ ನೇಪಾಳ, ಬಾಂಗ್ಲಾದೇಶಕ್ಕೆ ಹೋಗುತ್ತಿದ್ದವು. ಆದರೆ ಈಗ ಯಾರು ರೇಷನ್ ಅನ್ನು ಒಳಗೆ ಹಾಕಲು ನೋಡುತ್ತಾರೋ ಅವರು ಜೈಲಿಗೆ ಹೋಗುತ್ತಾರೆ,” ಎಂದು ಹೇಳಿದ್ದರು. ಈ ಹೇಳಿಕೆಯ ಮೂಲಕ ಒಂದು ಧರ್ಮವನ್ನೇ ನಿರ್ದಿಷ್ಟವಾಗಿ ಒಂದು ರಾಜ್ಯದ ಮುಖ್ಯಮಂತ್ರಿ ಗುರಿಯಾಗಿಸಿಕೊಂಡು ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿತ್ತು.

Comments

Leave a Reply

Your email address will not be published. Required fields are marked *