ಗಂಗಾ ನದಿ ಕೊಳಕು ಅಂತ ತಿಳಿದಿದ್ದಕ್ಕೆ ಯೋಗಿ ಸ್ನಾನ ಮಾಡಲಿಲ್ಲ: ಅಖಿಲೇಶ್ ಯಾದವ್

ಲಕ್ನೋ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಗಂಗಾ ನದಿ ಕೊಳಕು ಎಂದು ತಿಳಿದಿತ್ತು. ಹೀಗಾಗಿ ಅವರು ಸ್ನಾನ ಮಾಡಲಿಲ್ಲ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವ್ಯಂಗ್ಯವಾಡಿದ್ದಾರೆ.

ಗಂಗಾ ನದಿ ಶುದ್ಧಿಕರಣಕ್ಕೆ ಬಿಜೆಪಿ ಸರ್ಕಾರ ಕೋಟಿಗಟ್ಟಲೆ ಖರ್ಚು ಮಾಡಿದೆಯಂತೆ ಆದರೆ ಗಂಗಾ ನದಿ ಕೊಳಕು ಎಂದು ಆದಿತ್ಯನಾಥ್ ಸ್ನಾನ ಮಾಡಲು ಹಿಂಜರಿದರು. ನನ್ನ ಪ್ರಶ್ನೆ ಏನೆಂದರೆ ಗಂಗಾ ಮಾತೆ ಎಂದಾದರೂ ಸ್ವಚ್ಛವಾಗಿದ್ದಾಳೆಯೇ? ಫಂಡ್‍ಗಳು ಹರಿದು ಬಂದರೂ ನದಿಯನ್ನು ಇನ್ನೂ ಸ್ವಚ್ಛಗೊಳಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಎರಡು ದಿನಗಳ ಕಾಲ ವಾರಣಾಸಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಕಾಶಿ ವಿಶ್ವನಾಥ ಕಾರಿಡಾರ್ ಯೋಜನೆಯನ್ನು ಉದ್ಘಾಟಿಸುವ ಮುನ್ನ ಸೋಮವಾರ ಲಲಿತಾ ಘಾಟ್‍ನಲ್ಲಿ ಪ್ರಾರ್ಥನೆ ಸಲ್ಲಿಸಿ ಗಂಗಾ ನದಿಯಲ್ಲಿ ಸ್ನಾನ ಮಾಡಿದರು. ಇದನ್ನೂ ಓದಿ: ಹಣ ಬಲದ ಎದುರು ಜನ ಬಲಕ್ಕೆ ಸೋಲು: ಎಚ್‌ಡಿಕೆ

ಇತ್ತೀಚೆಗಷ್ಟೇ ಮುಂದಿನ ವರ್ಷದ ಆರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಯಲ್ಲಿ ಎಸ್‍ಪಿ ಮತ್ತು ಬಿಜೆಪಿ ನಡುವಿನ ಇಬ್ಬರು ಸ್ಪರ್ಧಿಗಳ ನಡುವೆ ರಾಜಕೀಯ ಜಿದ್ದಾ, ಜಿದ್ದಿ ಸಿರೀಸ್ ಅನ್ನು ಅಖಿಲೇಶ್ ಯಾದವ್ ಅವರು ನೋಡಿ ಮಂಗಳವಾರ ಕಾಮೆಂಟ್ ಮಾಡಿದ್ದರು. ಇದನ್ನೂ ಓದಿ: ಒಂದೇ ದಿನ 34 ಮಂದಿ ಮೇಲೆ ದಾಳಿ ಮಾಡಿದ ಶ್ವಾನ

ವಾರಣಾಸಿಗೆ ಪ್ರಧಾನಿ ಮೋದಿ ಭೇಟಿ ನೀಡಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಜನರು ತಮ್ಮ ಅಂತಿಮ ದಿನಗಳನ್ನು ವಾರಣಾಸಿಯಲ್ಲಿ ಕಳೆಯುತ್ತಾರೆ ಎಂದು ಟಾಂಗ್ ನೀಡಿದ್ದಾರೆ.

Comments

Leave a Reply

Your email address will not be published. Required fields are marked *