ಕೈ ಕುಲುಕಿ ಶುಭಾಶಯ ಕೋರಿದ ಯೋಗಿ- ಅಖಿಲೇಶ್ ಯಾದವ್

ಲಕ್ನೋ: ಉತ್ತರ ಪ್ರದೇಶದ ರಾಜಕೀಯದಲ್ಲಿ ವೈರಿಗಳಂತಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಪರಸ್ಪರ ಕೈ ಕುಲುಕಿ ಶುಭಾಶಯ ಕೋರಿದ ಅಪರೂಪದ ಘಟನೆ ಇಂದು ವಿಧಾನಸಭೆಯಲ್ಲಿ ಸಾಕ್ಷಿಯಾಗಿದೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ನೂತನವಾಗಿ ಆಯ್ಕೆಯಾದ ಶಾಸಕರ ಪ್ರಮಾಣ ವಚನ ಸ್ವೀಕಾರ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಅಖಿಲೇಶ್ ಯಾದವ್ ಅವರನ್ನು ಭೇಟಿ ಮಾಡಿ ಶುಭ ಕೋರಿದರು. ಸದ್ಯ ಈ ವೀಡಿಯೋ ವೈರಲ್ ಆಗುತ್ತಿದೆ.

ವೀಡಿಯೋದಲ್ಲಿ ಏನಿದೆ?: ಉತ್ತರಪ್ರದೇಶದ ವಿಧಾನಸಭೆಯಲ್ಲಿ ತೀವ್ರ ವಾಗ್ದಾಳಿ ನಡೆಸುತ್ತಿದ್ದ ಯೋಗಿ ಆದಿತ್ಯನಾಥ್ ಹಾಗೂ ಅಖಿಲೇಶ್ ಯಾದವ್ ಇಂದು ಪರಸ್ಪರ ಶುಭ ಕೋರಿ ಕೈ ಕುಲುಕಿದ್ದಾರೆ. ನಂತರ ಯೋಗಿ ಆದಿತ್ಯನಾಥ್ ಅವರು ನಗೆ ಬೀರುತ್ತಾ ಅಖಿಲೇಶ್ ಯಾದವ್ ಅವರ ಭುಜವನ್ನು ತಟ್ಟಿದ್ದಾರೆ. ಇದನ್ನೂ ಓದಿ: 32 ವರ್ಷಗಳ ನಂತ್ರ ಕಾಶ್ಮೀರಿ ಪಂಡಿತರಿಗೆ ಸಿಕ್ಕಿದ್ದು ಸಿನಿಮಾ, ನ್ಯಾಯವಲ್ಲ: ಕೇಜ್ರಿವಾಲ್

ಚುನಾವಣಾ ಪೂರ್ವದಲ್ಲಿ ಉಭಯ ನಾಯಕರಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಟೀಕಿಸಿದ್ದರು. ಅಖಿಲೇಶ್ ಯಾದವ್, ಯೋಗಿ ಆದಿತ್ಯನಾಥ್ ಅವರನ್ನು ಬಾಬಾ ಬುಲ್ಡೋಜರ್ ಎಂದು ಕರೆದಿದ್ದರು. ಅದಕ್ಕೆ ತಿರುಗೇಟು ನೀಡಿದ್ದ ಯೋಗಿ ಆದಿತ್ಯನಾಥ್, ಅಖಿಲೇಶ್ ಯಾದವ್ ಯಾವಾಗಲೂ ಬಾಬುವಾಗಿಯೇ ಉಳಿಯುತ್ತಾರೆ ಎಂದು ಟೀಕಿಸಿದ್ದರು.

ಮಾರ್ಚ್ 10ರಂದು ಪ್ರಕಟವಾದ ಉತ್ತರಪ್ರದೇಶದ ಚುನಾವಣಾ ಫಲಿತಾಂಶದಲ್ಲಿ 403 ಕ್ಷೇತ್ರಗಳಲ್ಲಿ ಬಿಜೆಪಿ ತನ್ನ ಮಿತ್ರಪಕ್ಷಗಳೊಂದಿಗೆ 273 ಸ್ಥಾನಗಳನ್ನು ಪಡೆದುಕೊಂದು ಸರ್ಕಾರವನ್ನು ರಚಿಸಿತು. ಹಾಗೂ 111 ಸ್ಥಾನಗಳಲ್ಲಿ ಗೆಲುವು ಸಾಧಿಸಿದ ಸಮಾಜವಾದಿ ಪಕ್ಷ ವಿರೋಪಕ್ಷದ ಸ್ಥಾನವನ್ನೇರಿದೆ. ಇದನ್ನೂ ಓದಿ: ಎರಡನೇ ಬಾರಿ ಗೋವಾ ಮುಖ್ಯಮಂತ್ರಿಯಾಗಿ ಪ್ರಮೋದ್ ಸಾವಂತ್ ಪ್ರಮಾಣವಚನ

Comments

Leave a Reply

Your email address will not be published. Required fields are marked *