ಸಿಎಂ ಆಗೋ ಖುಷಿಯಲ್ಲಿ ಮತ್ತೆ ಯಡಿಯೂರಪ್ಪರಿಂದ ಹೆಸ್ರು ಬದಲಾವಣೆ

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ಮುಖ್ಯಮಂತ್ರಿಯಾಗಿ ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ.

ಬಿ.ಎಸ್ ಯಡಿಯೂರಪ್ಪ ಅವರು ಇಂಗ್ಲಿಷ್‍ನಲ್ಲಿ ತಮ್ಮ ಹೆಸರಿನ ಸ್ಪೆಲ್ಲಿಂಗ್ ಅನ್ನು ಮಾತ್ರ ಬದಲಾಯಿಸಿಕೊಂಡಿದ್ದಾರೆ. ಇಲ್ಲಿಯವರೆಗೂ Yeddyurappa ಎಂದು ಎಲ್ಲ ಕಡೆ ಬರೆಯುತ್ತಿದ್ದರು. ಆದರೆ ಇದೀಗ Yediyurappa ಎಂದು ಬದಲಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಯಡಿಯೂರಪ್ಪ ಲೆಟರ್‌ಹೆಡ್‌ನಲ್ಲೂ Yediyurappa ಎಂದೇ ಬರೆಯಲಾಗಿದೆ.

2007ರ ನವೆಂಬರ್ ನಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡುವ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಸಂಖ್ಯಾಶಾಸ್ತ್ರಜ್ಞರನ್ನು ಭೇಟಿಯಾಗಿ ಅವರ ಸಲಹೆಯಂತೆ ತಮ್ಮ ಹೆಸರನ್ನು Yeddyurappa ಎಂದು ಬದಲಾಯಿಸಿಕೊಂಡಿದ್ದರು. ಇಂಗ್ಲಿಷ್‍ನಲ್ಲಿ ಯಡ್ಯೂರಪ್ಪ ಎಂದು ಹೇಳುತ್ತಿದ್ದರೂ ಕನ್ನಡದಲ್ಲಿ ಯಡಿಯೂರಪ್ಪ ಎಂದೇ ಬರೆಯಲಾಗುತಿತ್ತು.

ಇದೀಗ ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗುತ್ತಿರುವ ಸಂತಸದದಲ್ಲಿರುವ ಯಡಿಯೂರಪ್ಪ ಅವರು ಮತ್ತೆ ಇಂಗ್ಲಿಷ್‍ನಲ್ಲಿ ಬರುವ ತಮ್ಮ ಹೆಸರಿನ ಸ್ಪೆಲ್ಲಿಂಗ್ ಬದಲಾಯಿಸಿಕೊಂಡಿದ್ದಾರೆ. ಅದೃಷ್ಟದ ಸಂಕೇತವಾಗಿ ಯಡಿಯೂರಪ್ಪ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Comments

Leave a Reply

Your email address will not be published. Required fields are marked *