ಯಡ್ಡಿಯೂರಪ್ಪ ಹಿರಿಯರಾದರೂ ಮೂರ್ಖತನದ ಕೆಲಸ ಮಾಡಿದ್ದಾರೆ: ಎಂ.ಬಿ.ಪಾಟೀಲ್

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಿರಿಯರಾದ್ರೂ ಮೂರ್ಖತನ ಮಾಡಿದ್ದಾರೆ ಅಂತಾ ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಇಂದು ನಗರದಲ್ಲಿ ಹೇಳಿದ್ದಾರೆ.

ಭ್ರದಾ ಮೇಲ್ದಂಡೆ ಯೋಜನೆಯ ವಿಶ್ವೇಶ್ವರಯ್ಯ ಜಲ ನಿಗಮ ಕಾಮಗಾರಿಯ ಫೈಲನ್ನು ಯಡಿಯೂರಪ್ಪವರಿಗೆ ಕೊಟ್ಟು ಕಳುಹಿಸುತ್ತೇನೆ. ಅವರು ಅವಶ್ಯವಿದ್ದರೆ ಎಕ್ಸಫರ್ಟ್ ಗಳನ್ನು ಕರೆಯಿಸಿ ಫೈಲನ್ನು ಮೊದಲು ಪರಿಶೀಲಿಸಲಿ ಅಂತಾ ಎಂ ಬಿ ಪಾಟೀಲ್ ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಾನು ಕೊಟ್ಟಿರುವ ದಾಖಲೆಗಳಲ್ಲಿ ಸಣ್ಣಪುಟ್ಟ ಲೋಪದೋಷಗಳಿದ್ದರೆ ಎಂ.ಬಿ.ಪಾಟೀಲ್ ಹೇಳಿದ್ದಂತೆ ಕೇಳಲು ನಾನು ಸಿದ್ದನಿದ್ದೇನೆ: ಬಿಎಸ್‍ವೈ

ಕಾಮಗಾರಿ ಗುತ್ತಿಗೆ ಪಡೆದವರು ಸರಿಯಾದ ದಾಖಲಾತಿ ನೀಡಿಲ್ಲ. ಕಾರಣ ಅವರ ಇಎಂಡಿ ಮುಟ್ಟುಗೋಲು ಹಾಕಿ ಗುತ್ತಿಗೆದಾರನ್ನು ಕಪ್ಪು ಪಟ್ಟಿಗೆ ಸೇರಿಸಿದ್ದೇವೆ. ಈ ವಿಷಯದಲ್ಲಿ ಯಡಿಯೂರಪ್ಪ ಅವರ ಬಗ್ಗೆ ಕನಿಕರ ಮೂಡುತ್ತಿದೆ ಅಂತಾ ಅಂದ್ರು. ಇದನ್ನೂ ಓದಿ: ನಾಲಾ ಕಾಮಗಾರಿಯಲ್ಲಿ 27 ಕೋಟಿ ರೂ. ಕಿಕ್‍ಬ್ಯಾಕ್, ಎಂ.ಬಿ ಪಾಟೀಲರನ್ನ ನೇಣು ಹಾಕಿ: ಬಿಎಸ್‍ವೈ ಆಕ್ರೋಶ

ಈ ಹಿಂದೆ ಸಚಿವ ಡಿ.ಕೆ.ಶಿವಕುಮಾರ್ ಅವರ ಮನೆ ಮೇಲೆ ಐಟಿ ದಾಳಿ ನಡೆದಿತ್ತು. ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನನ್ನ ಮೇಲೆಯೂ ಐಟಿ ದಾಳಿ ನಡೆಯುವ ಸಾಧ್ಯತೆಗಳಿವೆ. ಕಾಂಗ್ರೆಸ್ ನಾಯಕರ ಮೇಲಿನ ಐಟಿ ರೇಡ್ ನಂತೆ ಬಿಜೆಪಿ ನಾಯಕರಾದ ಶೋಭಾ ಕರಂದ್ಲಾಜೆ, ಜಗದೀಶ್ ಶೆಟ್ಟರ್, ಆರ್ ಅಶೋಕ್, ಈಶ್ವರಪ್ಪ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಲಿ ಅಂತಾ ಹೇಳಿದ್ರು. ಇದನ್ನೂ ಓದಿ: ಬಿಎಸ್‍ವೈ ಪೆದ್ದ ಅಲ್ಲ ಜೋಕರ್ ಎಂದ ಎಂ.ಬಿ ಪಾಟೀಲ್ – ಮಾಧ್ಯಮಗಳಿಗೆ ಗೊತ್ತಾಗ್ಲಿ ಅಂತಾನೇ ಹೇಳಿದ್ದು ಅಂದ್ರು ಸಿಎಂ

Comments

Leave a Reply

Your email address will not be published. Required fields are marked *