ಮಾರುತಿ ಸುಜುಕಿಯಿಂದ ವರ್ಷಾಂತ್ಯದಲ್ಲಿ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ಆಫರ್

ನವದೆಹಲಿ: ದೇಶದ ಅತಿ ದೊಡ್ಡ ಕಾರು ತಯಾರಿಕ ಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿರುವ ಮಾರುತಿ ಸುಜುಕಿ ಕಂಪನಿಯು ತನ್ನ ಗ್ರಾಹಕರಿಗೆ ಭಾರೀ ಡಿಸ್ಕೌಂಟ್ ನೀಡಿದೆ.

ಮಾರುತಿ ಸುಜಿಕಿ ಸಂಸ್ಥೆಯ ಕೆಲವು ಆಯ್ಕೆ ಶ್ರೇಣಿಯ ಕಾರುಗಳಿಗೆ ಸುಮಾರು 30,000 ರೂ.ಗಳಿಂದ 40,000 ರೂ.ಗಳ ವರೆಗೆ ಡಿಸ್ಕೌಂಟ್ ಒದಗಿಸುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ವರ್ಷಾಂತ್ಯದಲ್ಲಿ ಗರಿಷ್ಠ ಸಂಖ್ಯೆಯ ವಾಹನಗಳನ್ನು ಮಾರಾಟ ಮಾಡುವ ಗುರಿಯೊಂದಿರುವ ಸಂಸ್ಥೆಯು ತನ್ನ ಶ್ರೇಣಿಯ ಜನಪ್ರಿಯ ಕಾರುಗಳಿಗೆ ಡಿಸ್ಕೌಂಟ್ ಘೋಷಿಸಿದೆ.

ಸಂಸ್ಥೆಯ ಪ್ರಮುಖ ಮಾದರಿ ವಾಹನಗಳಾದ ಆಲ್ಟೊ, ವ್ಯಾಗನಾರ್, ಸ್ವಿಫ್ಟ್ ಹಾಗೂ ಎರ್ಟಿಗಾ ಕಾರುಗಳಿಗೆ ಡಿಸ್ಕೌಂಟ್ ಲಭ್ಯವಾಗಲಿದೆ. ವಿಶೇಷವಾಗಿ ಮಾರುತಿ ಆಲ್ಟೊ 800 ಖರೀದಿಸುವ ಗ್ರಾಹಕರಿಗೆ 35,000 ಹಾಗೂ ಸ್ವಿಫ್ಟ್ ಖರೀದಿಸುವ ಗ್ರಾಹಕರಿಗೆ 30,000 ರೂ.ಗಳ ಡಿಸ್ಕೌಂಟ್ ನೀಡಲಿದೆ ಎಂದು ವರದಿ ತಿಳಿಸಿದೆ.

ಇನ್ನು ಮಾರುತಿ ಸಂಸ್ಥೆಯ ಎರ್ಟಿಗಾ ಡೀಸೆಲ್ ಮಾದರಿಯ ಕಾರು ಖರೀದಿಸುವ ಗ್ರಾಹಕರಿಗೆ 40,000 ರೂ.ಗಳ ಡಿಸ್ಕೌಂಟ್ ಲಭ್ಯವಾಗುತ್ತದೆ. ( ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ? )

ಇದೇ ರೀತಿಯಲ್ಲಿ ಟಾಟಾ ಮೋಟಾರ್ಸ್ ಸಂಸ್ಥೆಯು ತನ್ನ ಕೆಲವು ಆಯ್ಕೆ ಮಾದರಿ ಕಾರುಗಳ ಮೇಲೆ ಸುಮಾರು 26,000 ರೂ. ಡಿಸ್ಕೌಂಟ್ ನೀಡಲು ಮುಂದಾಗಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೇ ಟಾಟಾ ಸಂಸ್ಥೆಯ ದುಬಾರಿ ಶ್ರೇಣಿಯ ಹೆಕ್ಸಾ ಕಾರಿನ ಮೇಲೆ 78,000 ಸಾವಿರ ಡಿಸ್ಕೌಂಟ್ ಘೋಷಿಸಿದೆ.

 

Comments

Leave a Reply

Your email address will not be published. Required fields are marked *