ತೆಲುಗಿನ ಪ್ರಭಾಸ್ ನಟನೆಯ ಸಲಾರ್ ಚಿತ್ರದಲ್ಲಿ ಯಶ್ ಅತಿಥಿ ಪಾತ್ರ?

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ ಯಶ್ ಮತ್ತೆ ನಟಿಸುತ್ತಿದ್ದಾರಾ? ಹೌದು, ಎನ್ನುತ್ತಿವೆ ಕೆಲವು ಮೂಲಗಳು. ಕೆಜಿಎಫ್ 2 ನಂತರ ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ನಲ್ಲಿ ಕೆಜಿಎಫ್ 3 ಸಿನಿಮಾ ಬರುತ್ತದೆ ಎಂದು ಹೇಳಲಾಗಿತ್ತು. ಅದಕ್ಕೂ ಮುನ್ನ ಸಲಾರ್ ಸಿನಿಮಾದಲ್ಲಿ ಈ ಜೋಡಿ ಒಂದಾಗಲಿದೆ ಎನ್ನಲಾಗುತ್ತಿದೆ. ಹಾಗಂತ ಗಾಂಧಿನಗರದಲ್ಲಿ ಸುದ್ದಿ ದಟ್ಟವಾಗಿದೆ.

ಪ್ರಭಾಸ್ ನಟನೆಯ ಸಿನಿಮಾ ಇದಾಗಿದ್ದು, ಈ ಸಿನಿಮಾದಲ್ಲಿ ಒಂದು ಮಹತ್ವದ ಪಾತ್ರವನ್ನು ಯಶ್ ನಿರ್ವಹಿಸಲಿದ್ದಾರಂತೆ. ಅದು ಗೆಸ್ಟ್ ಪಾತ್ರವಾದರೂ, ಪಾತ್ರಕ್ಕೆ ತನ್ನದೇ ಆದ ತೂಕ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಕುರಿತು ಪ್ರಶಾಂತ್ ನೀಲ್ ಆಗಲಿ ಅಥವಾ ಯಶ್ ಆಗಲಿ ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ, ಮಾತುಕತೆಯಂತೂ ನಡೆದಿರುವುದು ಪಕ್ಕಾ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ:`ರಾ ರಾ ರಕ್ಕಮ್ಮ’ ನಂತರ ನಾಳೆ ಮತ್ತೊಂದು ಸಾಂಗ್ ರಿಲೀಸ್: ವಿಕ್ರಾಂತ್ ರೋಣ

ಸಲಾರ್ ಸಿನಿಮಾದ ಮುಹೂರ್ತದ ಸಂದರ್ಭದಲ್ಲಿ ಯಶ್ ಕೂಡ ಭಾಗಿಯಾಗಿದ್ದರು. ಅಲ್ಲದೇ, ಇದು ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ನಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಪ್ರಶಾಂತ್ ನೀಲ್ ನಿರ್ದೇಶನ. ಇವೆಲ್ಲ ಕಾರಣಕ್ಕಾಗಿ ಯಶ್ ಅತಿಥಿ ಪಾತ್ರವನ್ನು ಮಾಡಲು ಒಪ್ಪಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಆ ಪಾತ್ರದ ಬಗ್ಗೆ ಪ್ರಶಾಂತ್ ನೀಲ್ ಅವರು ಯಶ್ ಜೊತೆ ಮಾತೂ ಆಡಿದ್ದಾರಂತೆ. ಸದ್ಯದಲ್ಲೇ ಶೂಟಿಂಗ್ ಕೂಡ ನಡೆಯಲಿದೆ ಎಂದು ಹೇಳಲಾಗುತ್ತಿದೆ.

Live Tv

Comments

Leave a Reply

Your email address will not be published. Required fields are marked *