ಸಾಗರದಾಚೆ ಯಶ್ ಪಯಣ: ಮುಂದಿನ ಚಿತ್ರಕ್ಕಿದೆಯಾ ನಂಟು?

ಶ್ (Yash) ರಣರಂಗದಲ್ಲಿ ಅದ್ಯಾವ ರೀತಿ ಯುದ್ಧ ನಡೆಯುತ್ತಿದೆ? ಯಾರು ಯಾರು ಅದರಲ್ಲಿ ದಳಪತಿಗಳಿದ್ದಾರೆ? ಅದ್ಯಾಕೆ ಇಷ್ಟು ತಿಂಗಳಾದರೂ ಯಶ್ ಹೊಸ ಸಿನಿಮಾ ಘೋಷಣೆ ಮಾಡಿಲ್ಲ? ಇದ್ದಕ್ಕಿಂತೆಯೇ ಸಾಗರದಾಚೆ ಏಕಾಂಗಿಯಾಗಿ ಹೋಗಿದ್ದೇಕೆ ರಾಕಿಭಾಯ್? ಹಾಲಿವುಡ್ನಿಂದ (Hollywood) ಯಾರು ಯಾರನ್ನು ಕರೆತರಲಿದ್ದಾರೆ? ಎಕ್ಸ್ಕ್ಲೂಸಿವ್ ಕಥನ ಇಲ್ಲಿದೆ.

ಯಾವಾಗ ತಂದೆ ಸಿನಿಮಾ? ಹೀಗಂತ ಇಡೀ ವಿಶ್ವದ ಯಶ್ ಭಕ್ತಗಣ ಕಾಯುತ್ತಿದೆ. ಹುಟ್ಟುಹಬ್ಬಕ್ಕೆ ಏನಾದರೂ ಸಿಹಿ ಸುದ್ದಿ ಕೊಡುತ್ತಾರಾ? ಅಥವಾ ಮಧ್ಯಂತರಲ್ಲೇ ಖುಷಿ ಸಮಾಚಾರ ಬಿಡುತ್ತಾರಾ? ಪ್ರಶ್ನೆಗಳು ಸಾವಿರಾರಿದ್ದವು. ಉತ್ತರ ಮಾತ್ರ ಹೇಳೋರಿರಲಿಲ್ಲ. ಎಲ್ಲ ಹಂಚಿಕೊಳ್ಳಬೇಕಿದ್ದ ಯಶ್ ಇನ್ ಸೈಲೆಂಟ್ ಮೋಡ್. ಅದು ನಮಗಷ್ಟೇ. ಅವರು ಮಾತ್ರ ಹಗಲು ರಾತ್ರಿ ಕಣ್ಣಲ್ಲಿ ಎಣ್ಣೆ ಬಿಟ್ಟುಕೊಂಡು ಬೆವರು ಹರಿಸುತ್ತಿದ್ದಾರೆ. ಒಂದೊಂದು ಫ್ರೇಮ್ಗೂ ತಲೆ ಕೆಡಿಸಿಕೊಂಡಿದ್ದಾರೆ. ಅದರ ಪರಿಣಾಮ ಹಾಲಿವುಡ್ಗೆ ಒಂಟಿ ಪಯಣ. ಇದನ್ನೂ ಓದಿ:ಟೆಂಪಲ್ ರನ್ ಮುಗಿಸಿ ಫೋಟೋಶೂಟ್ ನಲ್ಲಿ ಭಾಗಿಯಾದ ಸಾರಾ ಅಲಿ ಖಾನ್

ಸಾಮಾನ್ಯವಾಗಿ ಯಶ್ ಟ್ರಿಪ್ ಹೋಗುತ್ತಿರುತ್ತಾರೆ. ಆದರೆ ಜೊತೆಗೆ ಫ್ಯಾಮಿಲಿ ಕೂಡ ಇರುತ್ತದೆ. ಪತ್ನಿ ಹಾಗೂ ಮಕ್ಕಳ ಜೊತೆ ಜಾಲಿ ಟ್ರಿಪ್ ಹೋಗೋದು ಬೇರೆ. ಏಕಾಂಗಿಯಾಗಿ ಹಾರುತ್ತಾರೆ ಅಂದರೆ ಅದರಲ್ಲಿ ಏನಾದರೂ ಟ್ವಿಸ್ಟ್ ಇರಬೇಕಲ್ಲವೆ? ಅದರ ಫಲಿತಾಂಶ ಕಣ್ಣ ಮುಂದಿದೆ. ಕೆಲವು ವಾರಗಳ ಹಿಂದೆ ಯಶ್ ಹಾಲಿವುಡ್ಗೆ ಹೋಗಿದ್ದರು. ಅಲ್ಲಿಯ ಕೆಲವು ನುರಿತ ತಂತ್ರಜ್ಞರನ್ನು ಭೇಟಿ ಮಾಡಿದ್ದಾರೆ. ಅವರು ಯಾರು? ಯಾವ ವಿಭಾಗಕ್ಕೆ ಸೇರಿದವರು? ಸಸ್ಪೆನ್ಸ್ ಆಫ್ ರಾಕಿಭಾಯ್. ಹೋಗಿದ್ದಂತೂ ಸತ್ಯ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್ದಾಸ್ (Geethu Mohandas) ಹೊಸ ಚಿತ್ರದ ಸಾರಥಿ. ಅವರು ಕಳೆದ ಏಳೆಂಟು ತಿಂಗಳಿಂದ ಬೆಂಗಳೂರಿನ ಹೋಟೆಲ್ನಲ್ಲಿ ತಂಗಿದ್ದಾರೆ. ಕತೆ, ಚಿತ್ರಕತೆ, ಸಂಭಾಷಣೆ ಇತ್ಯಾದಿ ಪ್ರಿ ಪ್ರೊಡಕ್ಷನ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಇನ್ನೊಂದು ಕಡೆ ಯಶ್ ಅಡುಗೆಗೆ ಏನೇನು ಬೇಕು? ಯಾವ್ಯಾರು ಬೇಕು ಎನ್ನುವುದನ್ನು ವಿಶ್ವದ ತುಂಬಾ ಹುಡುಕಾಡಿ ತಂದು ಕೊಡುತ್ತಿದ್ದಾರೆ. `ದಿಸ್ ಈಸ್ ನೆಕ್ಸ್ಟ್ ಲೆವೆಲ್ ಸಿನಿಮಾಎನ್ನುತ್ತದೆ ಯಶ್ ನಂಬಿಗಸ್ಥ ತಂಡ. ಫೈನಲಿ ಅಕ್ಟೋಬರ್ ಮುಂಚೆಯೇ ಖಬರ್ ಹೊರಬೀಳಲಿದೆ ಎನ್ನಲಾಗುತ್ತಿದೆ.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]