ಅಭಿಮಾನಿಗಳಿಗೆ ಡೈಲಾಗ್ ಹೇಳಲು ಯಶ್ ನಿರಾಕರಣೆ

ಮಂಡ್ಯ: ರಾಕಿಂಗ್ ಸ್ಟಾರ್ ಯಶ್ ಅವರು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರ ಪರವಾಗಿ ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಈ ವೇಳೆ ಅಭಿಮಾನಿಗಳು ಡೈಲಾಗ್ ಹೇಳಲು ಒತ್ತಾಯಿಸಿದ್ದಾರೆ. ಆದರೆ ನಟ ಯಶ್ ಡೈಲಾಗ್ ಹೇಳಲು ನಿರಾಕರಿಸಿದ್ದಾರೆ.

ಶ್ರೀರಂಗಪಟ್ಟಣದಲ್ಲಿ ಸುಮಲತಾ ಪರವಾಗಿ ಯಶ್ ಪ್ರಚಾರ ಮಾಡುವಾಗ ಗಂಜಾಮ್‍ನಲ್ಲಿ ಅಭಿಮಾನಿಗಳು ಯಶ್ ಅವರಿಗೆ ಡೈಲಾಗ್ ಹೇಳಲು ಒತ್ತಾಯಿಸಿದ್ದಾರೆ. ಆಗ ಯಶ್ ಈಗಲೇ ಟೂರಿಂಗ್ ಟಾಕೀಸ್ ಅಂತಾವ್ರೇ. ನಾವು ಬಂದು ಆಮೇಲೆ ಬೇಡ ಸುಮ್ಮನಿರಿ. ಒಂದಲ್ಲಾ ನಾನು ಬೇಕಾದರೆ ನೂರು ಡೈಲಾಗ್ ಹೇಳುತ್ತೇನೆ. ಆದರೆ ನಾವು ಈಗ ಕೇಳುತ್ತಿರುವುದು ಡೈಲಾಗ್ ಅಲ್ಲ. ಒಂದು ಬಾರಿ ಸುಮಲತಾ ಅವರನ್ನು ಗೆಲ್ಲಿಸಿ ಕಳುಹಿಸಿ ಎಂದು ಹೇಳಿದ್ದಾರೆ.

ನಮ್ಮನ್ನು ನೋಡೋಕ್ಕೆ ಜನ ಬರುತ್ತಾರೆ ಎಂದು ಮಾತನಾಡುತ್ತಾರೆ. ಮಾತನಾಡಿದ ತಕ್ಕಂತೆ ನಡೆಯಬೇಕು. ನಾವು ಕೈಯಲ್ಲಿ ಆದಷ್ಟು ಜನಕ್ಕೆ ಏನೂ ಮಾಡಬೇಕು ಅದನ್ನು ಮಾಡಿದ್ದೇನೆ. ಅದು ಗೊತ್ತಾವರಿಗೆ ಗೊತ್ತಿರುತ್ತೆ. ನೀವು ಸುಮಲತಾ ಅವರ ಪರವಾಗಿ ಮನಸ್ಸು ಮಾಡಿ. ಅವರಿಗೆ ಆಸೆ ಇದೆ. ಅವರು ಕೆಲಸ ಮಾಡುತ್ತಾರೆ. ನಾವು ಯಾವಾಗಲೂ ಅವರ ಹಿಂದೆ ಇರುತ್ತೇವೆ. ಈಗಲೂ ಇದ್ದೇವೆ. ಮುಂದೆಯೂ ಇರುತ್ತೇವೆ ಎಂದು ಯಶ್ ಹೇಳಿದ್ದಾರೆ.

Comments

Leave a Reply

Your email address will not be published. Required fields are marked *