ಮೊದಲ ಬಾರಿ ಭಾರತೀಯ ಸಿನಿಮಾ ನೋಡಿದೆ ಎಂದ ಲಂಡನ್ ಅಭಿಮಾನಿ- ಯಶ್ ಭಾವನಾತ್ಮಕ ಪ್ರತಿಕ್ರಿಯೆ

ಬೆಂಗಳೂರು: ಸ್ಯಾಂಡಲ್‍ವುಡ್‍ನ ಕೆಜಿಎಫ್ ಸಿನಿಮಾ ರಾಷ್ಟ್ರ ಮಟ್ಟದಲ್ಲಿ ಮಾತ್ರವಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸಹ ಸದ್ದು ಮಾಡಿದೆ ಎಂಬುದಕ್ಕೆ ಇದೊಂದು ಉತ್ತಮ ಉದಾಹರಣೆಯಾಗಿದೆ. ಲಂಡನ್‍ನ ಕೆಜಿಎಫ್ ಅಭಿಮಾನಿಯೊಬ್ಬರು ಸಿನಿಮಾ ನೋಡಿ, ಹಾಡನ್ನೇ ರಚಿಸುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇದಕ್ಕೆ ರಾಕಿಂಗ್ ಸ್ಟಾರ್ ಯಶ್ ಸಹ ಭಾವನಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.

ನಾನು ವೀಕ್ಷಿಸಿದ ಪ್ರಥಮ ಭಾರತೀಯ ಚಿತ್ರ ಕೆಜಿಎಫ್, ಈ ಸಿನಿಮಾವನ್ನು ನಾನು ತುಂಬಾ ಪ್ರೀತಿಸುತ್ತೇನೆ. ಈ ಸಿನಿಮಾ ಬಗ್ಗೆ ನಾನೇ ಹಾಡೊಂದನ್ನು ರಚಿಸಿದ್ದೇನೆ. ನೀವೆಲ್ಲ ಕೇಳಿ ಎಂಜಾಯ್ ಮಾಡುತ್ತೀರೆಂದು ಭಾವಿಸುತ್ತೇನೆ ಎಂದು ಕೆಜಿಎಫ್ ಸಿನಿಮಾ ಬಗ್ಗೆ ಟ್ವೀಟ್ ಮಾಡಿ ಅಭಿಪ್ರಾಯ ತಿಳಿಸಿದ್ದರು. ಇದನ್ನೂ ಓದಿ: ಯಶ್, ರಾಧಿಕಾ ಪಂಡಿತ್ ಮನೆಯಲ್ಲಿ ವರಮಹಾಲಕ್ಷ್ಮೀ ಹಬ್ಬದ ಸಂಭ್ರಮ- ಐರಾ, ಯಥರ್ವ್ ಫುಲ್ ಮಿಂಚಿಂಗ್

ಇದಕ್ಕೆ ಯಶ್ ಪ್ರತಿಕ್ರಿಯಿಸಿ, ನಮ್ಮ ಸಿನಿಮಾದ ಬಗ್ಗೆ ನೀವು ಇಷ್ಟೊಂದು ತಿಳಿದುಕೊಳ್ಳುವ ಮೂಲಕ ನನ್ನನ್ನು ವಿಸ್ಮಯಗೊಳಿಸಿದ್ದೀರಿ. ಇದರಲ್ಲಿ ಕೇವಲ ಮಿಡಿತ ಮಾತ್ರ ಇಲ್ಲ, ನಿಮ್ಮ ಪ್ರೀತಿ ತೋರಿಸಲು ಪ್ರಯತ್ನಿಸಿದ್ದೀರಿ. ಹಾಡನ್ನು ನಾನು ತುಂಬಾ ಆನಂದಿಸಿದೆ. ಇಲ್ಲಿದೆ ರಾಖಿ ಭಾಯ್ ಬಂದ, ರೆಡಿ ಆರ್ ಯಾ…? ಎಂದು ಟ್ವೀಟ್‍ಗೆ ಪ್ರತಿಕ್ರಿಯಿಸಿದ್ದಾರೆ. ಇದನ್ನು ಕಂಡ ಅಭಿಮಾನಿ ರೀಟ್ವೀಟ್ ಮಾಡಿ ಖುಷಿಪಟ್ಟಿದ್ದಾರೆ.

ಐ ಆಮ್ ಟೀಚರ್ ಪೌಲ್ ಎಂಬ ಟ್ವಿಟ್ಟರ್ ಖಾತೆಯಿಂದ ಸಿನಿಮಾ ಕುರಿತು ಅಭಿಪ್ರಾಯ ತಿಳಿಸಿದ್ದಾರೆ. ಅಲ್ಲದೆ ಕೆಜಿಎಫ್ ಸಿನಿಮಾ ಕುರಿತು ತಾವು ರಚಿಸಿದ ರ್ಯಾಪ್ ಸಾಂಗ್ ನ್ನು ಯೂಟ್ಯೂಬ್‍ನಲ್ಲಿ ಹಾಕಿ, ಲಿಂಕ್ ಶೇರ್ ಮಾಡಿಕೊಂಡಿದ್ದಾರೆ.

ಯಾರು ಈ ಕೆಜಿಎಫ್ ಅಭಿಮಾನಿ?
ಐ ಆಮ್ ಟೀಚರ್ ಪೌಲ್ ಟ್ವಿಟ್ಟರ್ ಖಾತೆಯಿಂದ ಹಾಡು ಹಾಗೂ ಸಿನಿಮಾ ಕುರಿತು ಅಭಿಪ್ರಾಯ ಹಂಚಿಕೊಂಡಿದ್ದು, ನಾನು ಟೀಚರ್ ಪೌಲ್ ಲಂಡನ್‍ನಲ್ಲಿ ವಾಸಿಸುತ್ತಿದ್ದೇನೆ. ನಾನು ಇಂಗ್ಲಿಷ್ ಶಿಕ್ಷಕ ಹಾಗೂ ವೀಡಿಯೋಗಳನ್ನು ಮಾಡುತ್ತೇನೆ ಎಂದು ಈ ಖಾತೆಯ ಬಯೋನಲ್ಲಿ ಬರೆಯಲಾಗಿದೆ. ಈ ಮೂಲಕ ಲಂಡನ್ ಅಭಿಮಾನಿಯೊಬ್ಬರು ಕೆಜಿಎಫ್ ಸಿನಿಮಾ ಕುರಿತ ಹಾಡನ್ನು ಇಂಗ್ಲಿಷ್‍ನಲ್ಲಿ ರಚಿಸಿದ್ದಾರೆ.

ಕೆಜಿಎಫ್-1 ಸಿನಿಮಾ 2018ರಲ್ಲಿ ಬಿಡುಗಡೆಯಾಗಿ ಇಡೀ ಭಾರತೀಯ ಚಿತ್ರರಂಗವೇ ಸ್ಯಾಂಡಲ್‍ವುಡ್‍ನತ್ತ ತಿರುಗಿ ನೋಡುವಂತೆ ಮಾಡಿದೆ. ಅಪಾರ ಗಳಿಕೆ ಹಾಗೂ ಜನಪ್ರಿಯತೆಯನ್ನು ಈ ಸಿನಿಮಾ ಪಡೆಯಿತು. ಈ ಮೂಲಕ ಪ್ಯಾನ್ ಇಂಡಿಯಾ ಸಿನಿಮಾ ಆಗಿ ಮಿಂಚಿತು. ವಿದೇಶಗಳಲ್ಲಿ ಸಹ ಕೆಜಿಎಫ್ ಸಖತ್ ಹವಾ ಕ್ರಿಯೇಟ್ ಮಾಡಿತ್ತು. ಅದಕ್ಕೆ ಲಂಡನ್ ಅಭಿಮಾನಿಯ ಉದಾಹರಣೆಯೇ ಸಾಕ್ಷಿಯಾಗಿದೆ.

Comments

Leave a Reply

Your email address will not be published. Required fields are marked *