ಯಶ್ ಅನುಕರಿಸಿದ ಬಾಲಿವುಡ್ ಖ್ಯಾತ ನಟ ರಣವೀರ್ ಸಿಂಗ್

ಗತ್ತಿನಾದ್ಯಂತ ಕೆಜಿಎಫ್ 2 ಸಿನಿಮಾ ಸೃಷ್ಟಿದ ಹವಾ ಅಷ್ಟಿಷ್ಟಲ್ಲ. ಈವರೆಗೂ ದಕ್ಷಿಣದ ಅನೇಕ ಸ್ಟಾರ್ ನಟರು ಚಿತ್ರದ ಬಗ್ಗೆ ಕೊಂಡಾಡಿದ್ದಾರೆ. ಯಶ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಬಗ್ಗೆ ಹಾಡಿಹೊಗಳಿದ್ದಾರೆ. ಆದರೆ, ಬಾಲಿವುಡ್ ಹೆಸರಾಂತ ನಟರು ಮಾತ್ರ ಮೌನವಾಗಿದ್ದರು. ರಾಕಿಭಾಯ್ ಬಾಕ್ಸ್ ಆಫೀಸಿನಲ್ಲಿ ಸಾವಿರ ಕೋಟಿ ದಾಟುತ್ತಿದ್ದಂತೆಯೇ ರಾಕಿಭಾಯ್ ಗುಣಗಾನ ಶುರುವಾಗಿದೆ. ಇದನ್ನೂ ಓದಿ : ಬೆಸ್ಟ್ ಆಕ್ಟರ್ ಅವಾರ್ಡ್ ಪಡೆದಿದ್ದ ‘ನಾನು ಮತ್ತು ಗುಂಡ’ ಸಿನಿಮಾದ ‌ಶ್ವಾನ ನಿಧನ

ಬಾಲಿವುಡ್ ನ ಕೆಲ ಸ್ಟಾರ್ ನಟರು ದಕ್ಷಿಣ ಭಾರತದ ಸಿನಿಮಾಗಳ ಬಗ್ಗೆ ಅಸಡ್ಡೆಯಾಗಿ ಮಾತನಾಡಿದ್ದರೆ, ಇನ್ನೂ ಕೆಲವರು ಮೌನವಾಗಿದ್ದರು. ಬೆರಳೆಣಿಕೆಯ ಕಲಾವಿದರು ಮತ್ತು ತಂತ್ರಜ್ಞರು ಮಾತ್ರ ಕೆಜಿಎಫ್ 2 ಚಿತ್ರದ ಬಗ್ಗೆ ಮಾತನಾಡಿದ್ದರು. ಇದೀಗ ಬಾಲಿವುಡ್ ಖ್ಯಾತ ನಟ, ಕನ್ನಡತಿ ದೀಪಿಕಾ ಪಡುಕೋಣೆ ಅವರ ಪತಿ ರಣ್ವೀರ್ ಸಿಂಗ್ ಕೆಜಿಎಫ್ 2 ಚಿತ್ರದ ಬಗ್ಗೆ ಹೆಮ್ಮೆಯಿಂದ ಮಾತನಾಡಿದ್ದಾರೆ. ರಾಕಿಭಾಯ್ ಸ್ಟೈಲ್ ನಲ್ಲಿ ಫೋಟೋವೊಂದನ್ನು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದು ‘ರಾಕಿಭಾಯ್ ವೈಬ್ಸ್’ ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ: ಫಸ್ಟ್ ಟೈಮ್ ಮಗಳ ಫೋಟೋ ಶೇರ್ ಮಾಡಿದ ಪ್ರಿಯಾಂಕಾ ಚೋಪ್ರಾ

ಬಾಹುಬಲಿ, ಕೆಜಿಎಫ್ 2 ಸಿನಿಮಾಗಳನ್ನು ನಾನು ಎಲ್ಲರ ಮಧ್ಯೆ ಕೂತುಕೊಂಡು ನೋಡಲು ಇಷ್ಟಪಡುವುದಿಲ್ಲ. ನಾನು ಅಂತಹ ಚಿತ್ರಗಳನ್ನು ಒಬ್ಬನೇ ನೋಡಿ ಎಂಜಾಯ್ ಮಾಡಬೇಕು. ಏಕಾಂಗಿಯಾಗಿ ನೋಡಿ ಚೆಪ್ಪಾಳೆ ತಟ್ಟಬೇಕು. ಆ ಖುಷಿಯನ್ನು ಒಬ್ಬನೇ ಎಂಜಾಯ್ ಮಾಡಬೇಕು. ಈ ರೀತಿಯ ಚಿತ್ರಗಳನ್ನು ಹಾಗೆಯೇ ನೋಡುತ್ತೇನೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದ ರಣ್ವೀರ್ ಇದೀಗ ರಾಕಿ ಹಾದಿಯನ್ನೇ ತುಳಿಯುವ ಅರ್ಥದಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ : ಜೂನ್ 9ಕ್ಕೆ ನಯನತಾರಾ ಮದುವೆ ಫಿಕ್ಸ್ – ತಿರುಪತಿಯಲ್ಲಿ ವಿವಾಹ

ಭಾರತೀಯ ಹಲವು ಭಾಷೆಗಳಲ್ಲಿ ಈ ಸಿನಿಮಾ ರಿಲೀಸ್ ಆಗಿದ್ದು, ಅತೀ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಮಾಡಿದ್ದು ಬಾಲಿವುಡ್ ನಲ್ಲಿ ಎನ್ನುವುದು ವಿಶೇಷ. ನಾಲ್ಕು ನೂರಕ್ಕೂ ಹೆಚ್ಚು ಕೋಟಿ ಹಣವನ್ನು ಬಿಟೌನ್ ನಲ್ಲೇ ಸಂಗ್ರಹಿಸಿ ದಾಖಲೆ ಬರೆದಿದೆ ಕೆಜಿಎಫ್ 2. ಹೀಗಾಗಿ ಬಾಲಿವುಡ್ ನ ಅನೇಕ ಕಲಾವಿದರಿಗೆ ಈ ಸಿನಿಮಾ ನಿದ್ದೆಗೆಡಿಸಿದೆ. ಈಗಾಗಲೇ ಜಗತ್ತಿನಾದ್ಯಂತ 1200 ಕೋಟಿಗೂ ಹೆಚ್ಚು ಬಾಕ್ಸ್ ಆಫೀಸ್ ಕಲೆಕ್ಷನ್ ಆಗಿದ್ದು, ಬಹುತೇಕ ದಾಖಲೆಗಳನ್ನು ಈ ಸಿನಿಮಾ ಉಡಿಸ್ ಮಾಡಿದೆ.

Comments

Leave a Reply

Your email address will not be published. Required fields are marked *