ಯಾವತ್ತಿದ್ರೂ ನಾನು ಕನ್ನಡದ ನಟನೇ: ಯಶ್

ಭಾರತೀಯ ಚಿತ್ರರಂಗನೇ `ಕೆಜಿಎಫ್ 2′ ಸಿನಿಮಾಗಾಗಿ ಕಾಯ್ತಿದ್ದಾರೆ. ಎಲ್ಲೆಲ್ಲೂ `ಕೆಜಿಎಫ್ 2′ ರಾಕಿಭಾಯ್ ನೋಡಲು ಎದುರು ನೊಡ್ತಿದ್ದಾರೆ. ಕೆಜಿಎಫ್ 1 ಮತ್ತು ಪಾರ್ಟ್ 2ಗಾಗಿ 8 ವರ್ಷಕ್ಕಿಂತ ಹೆಚ್ಚಿನ ಸಮಯವನ್ನು ಮೀಸಲಿಟ್ಟಿರುವ ಕುರಿತು `ಪಬ್ಲಿಕ್ ಟಿವಿ’ ಬ್ಲಾಕ್ ಬಸ್ಟರ್ ಕಾರ್ಯಕ್ರಮ ಯಶ್ ಮಾತಾನಾಡಿದ್ದಾರೆ.

ನಟ ಯಶ್‌ 8 ವರ್ಷ `ಕೆಜಿಎಫ್’ ಸಿನಿಮಾಗಾಗಿ ಶ್ರಮಿಸಿದ್ದೀರಿ ಕುರಿತು ಮಾತಾನಾಡಿದ್ದು, ಆಲ್‌ರೆಡಿ ಕೆಲಸ ಮಾಡ್ತೀದ್ದೀವಿ. ಅಭಿಮಾನಿಗಳನ್ನ ಜಾಸ್ತಿ ಸಂಪಾದನೆ ಮಾಡುಬೇಕು, ನಮ್ಮ ಉದ್ಯಮಕ್ಕೆ ಜಾಸ್ತಿ ಶಕ್ತಿ ಬರಬೇಕು. ನನ್ನ ಮುಂದಿನ ಏನೇ ಕೆಲಸ ಮಾಡಿದ್ರು ನಾನು ಯಾವತ್ತು ಇದ್ದರು ಕನ್ನಡದ ನಟನೇ, ನನಗೆ ನಮ್ಮ ದೇಶ, ನಮ್ಮ ರಾಜ್ಯ ಮತ್ತು ಭಾಷೆಯ ಮೇಲೆ ಬಹಳ ಅಭಿಮಾನವಿದೆ. ಇದನ್ನು ಓದಿ: EXCLUSIVE INTERVIEW: ಗೆಲ್ಲಲು ಹೊರಟವನಿಗೆ ಸೋಲು ದೊಡ್ಡದಾಗಬಾರದು: ಯಶ್

ಕುವೆಂಪು ನಾಡಿನವರು ನಾವು ವಿಶ್ವ ಮಾನವ ತತ್ವ ಸಾರಿರುವ ನಾಡಿದು, ನಾನು ನಂಬೋದು, ನಾನು ಕರ್ನಾಟಕದವನು ನಾನು ಕನ್ನಡದ ಆಸ್ತಿ ಎಲ್ಲಾ ಭಾಷೆಯವರು ನಮ್ಮವರೇ ಎಂದು ಮನಬಿಚ್ಚಿ ನಟ ಯಶ್ ಪಬ್ಲಿಕ್ ಟಿವಿಯ ಜೊತೆ ಮಾತಾನಾಡಿದ್ದಾರೆ.

Comments

Leave a Reply

Your email address will not be published. Required fields are marked *