ಮೈಸೂರು: ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ತಮ್ಮ ಪತ್ನಿ ತ್ರಿಶಿಕಾ ಮತ್ತು ಮಗ ಆದ್ಯವೀರ್ ನ ಮುದ್ದಾದ ಫೋಟೋ ಹಾಕಿ ಶುಭಾಶಯ ಕೋರಿದ್ದಾರೆ.
ಪ್ರುತನ ಜೊತೆ ಪತ್ನಿ ತ್ರಿಶಿಕಾ ಕುಮಾರಿ ಇರುವ ಫೋಟೋವನ್ನು ಪೋಸ್ಟ್ ಮಾಡಿ ಅವರಿಗೆ ವರ್ಧಂತಿಯ ಶುಭಾಶಯವನ್ನು ಯದುವೀರ್ ಕೋರಿದ್ದಾರೆ. ಪತ್ನಿ ಮತ್ತು ಆದ್ಯವೀರ್ ಮಾತ್ರವಲ್ಲದೇ ಫೋಟೋದಲ್ಲಿ ಆನೆ ಅರ್ಜುನ ಕೂಡ ಇದ್ದಾನೆ.

ಯದುವೀರ್ ಅವರು, “ನನ್ನ ಧರ್ಮಪತ್ನಿಯಾದ, ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಕಾ ಕುಮಾರಿ ಒಡೆಯರ್ ಅವರ ವರ್ಧಂತಿಯಂದು ಶುಭ ಕೋರುತ್ತೇನೆ. ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ” ಅಂತ ಬರೆದುಕೊಂಡಿದ್ದಾರೆ.
ಅರ್ಜುನ ಆನೆಯ ಮುಂದೆ ತ್ರಿಶಿಕಾ ಅವರು ಅವರು ಮಗ ಆದ್ಯವೀರ್ ಜೊತೆ ಇದ್ದ ಸಂತಸದ ಕ್ಷಣದಲ್ಲಿ ಈ ಫೋಟೋವನ್ನು ಸೆರೆ ಹಿಡಿಯಲಾಗಿದೆ. ಈ ಫೋಟೋದಲ್ಲಿ ಆದ್ಯವೀರ್ ಮುದ್ದಾಗಿ ನಗುತ್ತಿರುವುದು ಸೆರೆಯಾಗಿದೆ. ಇವರಿಬ್ಬರ ನಗುವನ್ನು ಆನೆ ಅರ್ಜುನ ಕೂಡ ನೋಡುತ್ತಾ ನಿಂತಿರುವ ರೀತಿ ಕಾಣುತ್ತದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply